ಜೆಡಿಎಸ್ ಪಕ್ಷ ನಮಗೆ ತಾಯಿ, ಎಚ್.ಡಿ.ದೇವೇಗೌಡರು ತಂದೆ ಇದ್ದಂತೆ. ಇಂತಹ ಪಕ್ಷಕ್ಕೆ ಜತೆಯಲ್ಲಿಯೇ ಇದ್ದುಕೊಂಡು ಮೋಸ ಮಾಡಿದ ಪಕ್ಷದ ಹಿತಶತ್ರುಗಳ ಬಗ್ಗೆಯಷ್ಟೆಮಾತನಾಡಿದ್ದೇನೆ ಹೊರತು ಬೇರೆ ಪಕ್ಷದ ಬಗ್ಗೆಯಾಗಲಿ, ಮತದಾರರ ಬಗ್ಗೆಯಾಗಲಿ ಹಗುರವಾಗಿ ಮಾತನಾಡಿಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸ್ಪಷ್ಟನೆ ನೀಡಿದರು.
ಪಾಂಡವಪುರ (ಮೇ.21): ಜೆಡಿಎಸ್ ಪಕ್ಷ ನಮಗೆ ತಾಯಿ, ಎಚ್.ಡಿ.ದೇವೇಗೌಡರು ತಂದೆ ಇದ್ದಂತೆ. ಇಂತಹ ಪಕ್ಷಕ್ಕೆ ಜತೆಯಲ್ಲಿಯೇ ಇದ್ದುಕೊಂಡು ಮೋಸ ಮಾಡಿದ ಪಕ್ಷದ ಹಿತಶತ್ರುಗಳ ಬಗ್ಗೆಯಷ್ಟೆಮಾತನಾಡಿದ್ದೇನೆ ಹೊರತು ಬೇರೆ ಪಕ್ಷದ ಬಗ್ಗೆಯಾಗಲಿ, ಮತದಾರರ ಬಗ್ಗೆಯಾಗಲಿ ಹಗುರವಾಗಿ ಮಾತನಾಡಿಲ್ಲ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸ್ಪಷ್ಟನೆ ನೀಡಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ವಿರೋಧಿಗಳು ಅನಗತ್ಯವಾಗಿ ಬೇರೆ ರೀತಿ ಅರ್ಥ ಬರುವಂತೆ ಮಾತನಾಡುತ್ತಿದ್ದಾರೆ. ನಾವು ನಮ್ಮ ಪಕ್ಷವನ್ನು ತಾಯಿಯಂತೆ ನೋಡುತ್ತಿದ್ದೇವೆ.
ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡರನ್ನು ತಂದೆಯಂತೆ ಕಾಣುತ್ತೇವೆ. ಈ ಪಕ್ಷಕ್ಕೆ ದ್ರೋಹ ಮಾಡಿರುವವರ ವಿರುದ್ಧ ಮಾತನಾಡಿದ್ದೇನೆ ಎಂದರು. ಜತೆಯಲ್ಲಿ ಇದ್ದುಕೊಂಡು ನಮ್ಮ ಸಂಪನ್ಮೂಲವನ್ನು ಕ್ರೋಢಿಕರಿಸಿಕೊಂಡು ನಮಗೆ ಮೋಸ ಮಾಡಿದ ವ್ಯಕ್ತಿಗಳ ಬಗ್ಗೆಯಷ್ಟೆಮಾತನಾಡಿದ್ದೇನೆ. ಬೇರೆ ಯಾರ ಬಗ್ಗೆಯೂ ನಾನು ಮಾತನಾಡಿಲ್ಲ. ಇದಕ್ಕೆ ಬೇರೆಯಾದ ರೀತಿಯಲ್ಲಿ ಅರ್ಥಕಲ್ಪಿಸಿ ಗೊಂದಲ ಸೃಷ್ಠಿ ಮಾಡಬೇಡಿ. ಈ ವಿಚಾರವನ್ನು ಹೆಚ್ಚು ಚರ್ಚಿಸದೆ ಇಲ್ಲಿಗೆಯೇ ಸ್ಥಗಿತಗೊಳಿಸಿ ತೆರೆ ಎಳೆಯಬೇಕೆಂದು ಮನವಿ ಮಾಡಿದರು.
ಸಿಪಿಪಿ ಸಹಯೋಗದಲ್ಲಿ ಬಿಬಿಎಂಪಿಯಿಂದ ಹೆಮ್ಮಿಗೆಪುರ ವಾರ್ಡ್‌ನಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ
ನನ್ನ 30 ವರ್ಷದ ರಾಜಕೀಯ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕಿ ಇಲ್ಲದ ರೀತಿಯಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ಮತದಾರರ ಬಗ್ಗೆ ವಿಶೇಷವಾದ ಗೌರವಯುತವಾಗಿ ಜವಾಬ್ದಾರಿಯಿಂದ ನಡೆಸಿಕೊಂಡು ಪ್ರೀತಿಸಿ ಆಶೀರ್ವದಿಸಿದ್ದೇವೆ. ವಿರೋಧಿಗಳು ಸುಮ್ಮನೆ ಈ ವಿಚಾರದಲ್ಲಿ ಮಹಿಳೆಯರನ್ನು ಯಾಕೆ ಎಳೆದು ತರುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಕಿಡಿಕಾರಿದರು. ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಾವುದೇ ಪ್ರಚೋದನೆಗೆ ಒಳಗಾಗದೆ ತಾಳ್ಮೆಯಿಂದ ಇರಬೇಕು. ಸಮಾಧಾನವೇ ಎಲ್ಲದ್ದಕ್ಕೂ ಉತ್ತರ ನೀಡಲಿದೆ. ವಿರೋಧಿಗಳು ಏನೇ ಪ್ರಚೋದನಕಾರಿ ಹೇಳಿಕೆ ನೀಡಿದರೂ ನೀವು ಮಾತನಾಡಬೇಡಿ.
ಸ್ವಲ್ಪದಿನ ತಾಳ್ಮೆಯಿಂದ ಇರುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದೇನೆ ಎಂದರು. ನಾನು ಯಾರೇ ಒಬ್ಬ ಅಧಿಕಾರಿಗಳನ್ನು ಪ್ರತ್ಯೇಕವಾಗಿ ಕರೆದು ಮಾತನಾಡುವ ಅವಶ್ಯಕತೆ ಇಲ್ಲ. ನಾನು ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದ್ದೇನೆ. ಸೋಲು ಗೆಲುವುಗಳನ್ನು ನೀಡಿದ್ದೇನೆ. ಕ್ಷೇತ್ರದಲ್ಲಿ ಕೆಲವೆಡೆ ಅಶಾಂತಿಗಳು ಸೃಷ್ಠಿಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಣಿಕ್ಯನಹಳ್ಳಿ ಗ್ರಾಮದಲ್ಲಿ ಜೆಡಿಎಸ್‌ನವರು ಕೆಲಸ ಮಾಡುತ್ತಿದ್ದಾರೆ ಎಂದು ಸಿಮೆಂಚ್ ಮೂಟೆ ರಾಶಿಗೆ ಬೆಂಕಿಹಾಕಿದ್ದಾರೆ. ಈ ರೀತಿಯ ಬೆಳೆವಣಿಗಳು ಕ್ಷೇತ್ರದಲ್ಲಿ ಅಶಾಂತಿಗೆ ಕಾರಣವಾಗುತ್ತವೆ. ಹಾಗಾಗಿ ಈ ಬಗ್ಗೆ ಕ್ಷೇತ್ರದ ಹೊಸ ಶಾಸಕರು ಎಚ್ಚರವಹಿಸಬೇಕು. ಇಲ್ಲವಾದರೆ ಮುಂದಿನ ಬೆಲೆ ತರಬೇಕಾಗುತ್ತದೆ ಎಂದು ವಿರೋಧಿಗಳಿಗೆ ಸಲಹೆ ಮಾಡಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಎಚ್‌ಡಿಕೆ ಮುಂದಿದೆ ಸಾಕಷ್ಟು ಅಭಿವೃದ್ಧಿ ಸವಾಲುಗಳು
ಕಾಮಗಾರಿ ತಡೆಹಿಡಿದರೆ ಎಚ್ಚರಿಕೆ: ಕಾನೂನು ಬದ್ಧವಾಗಿ ರಾಜ್ಯಪಾಲರ ಅನುಮೋದನೆ ಪಡೆದು ಮಂಜೂರು ಮಾಡಿಸಿ ತಾಲೂಕಿನ ವಿವಿಧೆಡೆ ನಡೆಸಲಾಗುತ್ತಿರುವ ವಿವಿಧ ಕಾಮಗಾರಿಗಳ ಕೆಲಸಗಳನ್ನು ಅಧಿಕಾರಿಗಳು ಏನಾದರು ತಡೆಹಿಡಿಯುವ ಕೆಲಸ ಮಾಡಿದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ಈಗಾಗಲೇ ಚಾಲನೆ ನೀಡಲಾಗಿರುವ ಏತನೀರಾವರಿ ಯೋಜನೆಗಳು ಕಾರ್ಯಗತವಾಗಬೇಕು. ಕೆರೆಕಟ್ಟೆಗಳು ತುಂಬಿ ತುಳುಕುವಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯಾವುದಾದರೂ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತಹ ಪ್ರಯತ್ನಕ್ಕೆ ಅಧಿಕಾರಿಗಳು ಮುಂದಾದರೆ ಕಾನೂನು ರೀತಿಯಲ್ಲಿಯೇ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.