Karnataka Politics: ಪಕ್ಷ ಬಲವರ್ಧನೆಗೆ ಜೆಡಿಎಸ್‌ ಜನತಾ ಜಲಧಾರೆ ಯಾತ್ರೆ

Published : Apr 01, 2022, 11:07 AM IST
Karnataka Politics: ಪಕ್ಷ ಬಲವರ್ಧನೆಗೆ ಜೆಡಿಎಸ್‌ ಜನತಾ ಜಲಧಾರೆ ಯಾತ್ರೆ

ಸಾರಾಂಶ

*  ಬಳ್ಳಾರಿಯಲ್ಲಿ ವಿ.ಪ. ಸದಸ್ಯ ತಿಪ್ಪೇಸ್ವಾಮಿ ಹೇಳಿಕೆ *  ಯಾತ್ರೆ ಬಳಿಕ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ  *  ಜೆಡಿಎಸ್‌ ಪಕ್ಷ ಸದಸ್ಯತ್ವ ನೋಂದಣಿ ಅಭಿಯಾನ  

ಬಳ್ಳಾರಿ(ಏ.01):  ರಾಜ್ಯದಲ್ಲಿ ಜೆಡಿಎಸ್‌(JDS) ಬಲವರ್ಧನೆಗೊಳಿಸಲು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳಲಾಗುವುದು. ಜನತಾ ಜಲಧಾರೆ ಎಂಬ ಕಾರ್ಯಕ್ರಮ ಮೂಲಕ ಜನರ ಬಳಿ ತೆರಳಲಾಗುವುದು ಎಂದು ಜೆಡಿಎಸ್‌ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ(Tippyswamy) ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ(Karmataka Assembly Election 2023) ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಖಚಿತ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗುತ್ತಿದ್ದು, ಈ ಪೈಕಿ ಜನತಾ ಜಲಧಾರೆಯೂ ಒಂದಾಗಿದೆ. ತುಂಗಭದ್ರಾ, ಕೃಷ್ಣ ಸೇರಿದಂತೆ ಇತರೆ 15 ನದಿಗಳ ನೀರಿನ ಸದ್ಬಳಕೆ ಕುರಿತು ಜೆಡಿಎಸ್‌ ಹೊಂದಿರುವ ಯೋಜನೆಯನ್ನು ಜನರ ಮುಂದಿಡುತ್ತೇವೆ. ನಾಡಿನ ಅನ್ನದಾತರ ಹಿತ ಕಾಯುವ ಅನೇಕ ಯೋಚನೆಗಳು ಪಕ್ಷದ ಮುಂದಿವೆ. ಅಧಿಕಾರಕ್ಕೆ ಬಂದರೆ ನಾವು ಕೈಗೊಳ್ಳುವ ಜನಮುಖಿ ಕಾರ್ಯಕ್ರಮಗಳ ಕುರಿತು ಮನವರಿಕೆ ಮೂಡಿಸುವ ಕೆಲಸ ಮಾಡಲಿದ್ದೇವೆ. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ(HD Devegowda), ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಸೇರಿದಂತೆ ಪಕ್ಷದ ಎಲ್ಲ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಬಳಿಕ ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಬೃಹತ್‌ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.

Karnataka Politics: ಎಂಎಲ್‌ಸಿ ಸ್ಥಾನ ತೊರೆದ ಇಬ್ರಾಹಿಂ ಜೆಡಿಎಸ್‌ ರಾಜ್ಯಾಧ್ಯಕ್ಷ?

ಜೆಡಿಎಸ್‌ ಪಂಚರತ್ನ ಯೋಜನೆಗಳನ್ನು ಸಿದ್ಧಪಡಿಸಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಬ್ಲಿಕ್‌ ಮಾದರಿ ಶಾಲೆಗಳು, ಆಸ್ಪತ್ರೆಗಳು, ರೈತರು ಹಾಗೂ ಯುವ ಸಮುದಾಯಕ್ಕೆ ನೆರವಾಗಲು ಸಬಲೀಕರಣ ಕೇಂದ್ರಗಳನ್ನು ಆರಂಭಿಸುವ ಯೋಜನೆಗಳಿವೆ. ಇನ್ನೂ ಅನೇಕ ಜನಮುಖಿ ಯೋಜನೆಗಳನ್ನು ಜೆಡಿಎಸ್‌ ರೂಪಿಸಿಕೊಂಡು ಚುನಾವಣೆ ಹೊತ್ತಿಗೆ ಜನರ ಮುಂದೆ ಬರಲಿದೆ ಎಂದರು.

ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ(CM Ibrahim) ಜೆಡಿಎಸ್‌ಗೆ ಬರುವುದು ಖಚಿತ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ತಿಪ್ಪೇಸ್ವಾಮಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಪಕ್ಷ ತೊರೆಯುವ ನಿರ್ಧಾರ ಕುರಿತು ಕೇಳಿದ ಪ್ರಶ್ನೆಗೆ ನೀವು ಅವರನ್ನೇ ಪ್ರಶ್ನಿಸಬೇಕು ಎಂದು ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಪರಿಶಿಷ್ಟಪಂಗಡಕ್ಕೆ ಮೀಸಲಾತಿ ಹೆಚ್ಚಿಸುವ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಯಾವುದೇ ಕಾಳಜಿ ತೋರಿಸಲಿಲ್ಲ. ಕೊಟ್ಟಭರವಸೆಗಳನ್ನು ಈ ಎರಡು ಪಕ್ಷಗಳು ಈಡೇರಿಸಿಲ್ಲ. ಈ ಹಿಂದೆ ಎಚ್‌.ಡಿ. ದೇವೇಗೌಡರ ಪ್ರಯತ್ನದಿಂದ ರಾಜ್ಯದ ಎಸ್ಟಿಸಮುದಾಯದ ರಾಜಕೀಯ ಪ್ರಾತಿನಿಧ್ಯ ಹೆಚ್ಚಳವಾಯಿತು. ಮೀಸಲಾತಿ(Reservation) ಹೆಚ್ಚಳ ಸಂಬಂಧ ವಾಲ್ಮೀಕಿ ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ಬರುವ ವಿಧಾನಸಭಾ ಚುನಾವಣೆಗೆ ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು. ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಮಾಜಿ ಸಚಿವ ಎಂ.ಎನ್‌. ನಬಿ ಸುದ್ದಿಗೋಷ್ಠಿಯಲ್ಲಿದ್ದರು.

ಜೆಡಿಎಸ್‌ ಪಕ್ಷ ಸದಸ್ಯತ್ವ ನೋಂದಣಿ ಅಭಿಯಾನ

ನಗರದ ತಾಳೂರು ರಸ್ತೆಯ ಸೂರ್ಯಭವನದಲ್ಲಿ ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನ(JDS Membership Registration Campaign) ಹಾಗೂ ವಿವಿಧ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು.

ವಿಧಾನಪರಿಷತ್‌ ಸದಸ್ಯ ತಿಪ್ಪೇಸ್ವಾಮಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP Government) ರೈತರು, ಕಾರ್ಮಿಕರು ಸೇರಿದಂತೆ ದುಡಿವ ಜನರ ಹಿತವನ್ನು ಸಂಪೂರ್ಣ ಕಡೆಗಣಿಸಿವೆ. ಪರ್ಯಾಯವಾಗಿ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ರಾಜ್ಯದ ಎಲ್ಲ ಕಡೆ ಪಕ್ಷ ನೋಂದಣಿ ನಡೆಯುತ್ತಿದ್ದು, ಪಕ್ಷ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧಿಸಿ, ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಅಪ್ಪ, ತಾತನ ಹೆಸರು ಬಿಟ್ಟು ನಿಖಿಲ್‌ ಜಿಪಂ ಎಲೆಕ್ಷನ್‌ ಗೆದ್ದು ತೋರಿಸಲಿ: ಸುಮಲತಾ ಸವಾಲ್‌

ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಶಾಸಕ ರಾಜಾ ವೆಂಕಟಪ್ಪ ನಾಯಕ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ನಾಸಿರ್‌ ಉಸ್ತಾದ್‌, ಮಾಜಿ ಸಚಿವ ಎಂ.ಎನ್‌. ನಬಿ, ನಗರ ಘಟಕ ಅಧ್ಯಕ್ಷ ಸುರೇಶ್‌ಗೌಡ, ವಿಜಯಕುಮಾರ್‌ ಮತ್ತಿತರರಿದ್ದರು.

ಕಾರ್ಯಕ್ರಮ ಮುನ್ನ ಜೆಡಿಎಸ್‌ ನಗರ ಘಟಕದಿಂದ ಬೈಕ್‌ ರಾರ‍ಯಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಜೆಡಿಎಸ್‌ ಮುಖಂಡರು ಬೈಕ್‌ ರಾರ‍ಯಲಿಗೆ ಚಾಲನೆ ನೀಡಿದರು. ರಾರ‍ಯಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ನಡೆಯುವ ಸೂರ್ಯಭವನಕ್ಕೆ ತೆರಳಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಜನರ ವಿಶ್ವಾಸ ಕಳೆದುಕೊಂಡ ಕಾಂಗ್ರೆಸ್, ಚುನಾವಣೆಗೇ ಬನ್ನಿ: ಸರ್ಕಾರಕ್ಕೆ ಸಿ.ಟಿ.ರವಿ ಸವಾಲು