Karnataka Politics: ಅವಧಿಗೆ ಮುನ್ನವೇ ಕರ್ನಾಟಕದಲ್ಲಿ ಎಲೆಕ್ಷನ್‌: ಅರುಣ್‌ ಸಿಂಗ್‌ ಹೇಳಿದ್ದಿಷ್ಟು

By Girish GoudarFirst Published Apr 1, 2022, 7:00 AM IST
Highlights

*  ಸಿಎಂ ಬದಲಾವಣೆಯೂ ಇಲ್ಲ
*  ಅವಧಿ ಮುಗಿದ ಬಳಿಕ ನಿಗದಿತ ಸಮಯದಲ್ಲೇ ಚುನಾವಣೆ ನಡೆಯಲಿದೆ 
*  ಕರ್ನಾಟಕದಲ್ಲೂ ಮತ್ತೆ ಅಧಿಕಾರಕ್ಕೆ ಏರಲಿದೆ ಬಿಜೆಪಿ 

ಬೆಂಗಳೂರು(ಏ.01):  ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯುವ ಸಾಧ್ಯತೆಯನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌(Arun Singh) ಬಲವಾಗಿ ತಳ್ಳಿ ಹಾಕಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಧಿಪೂರ್ವ ಚುನಾವಣೆ(Karnataka Assembly Election) ನಡೆಯುವುದಿಲ್ಲ. ಅವಧಿ ಮುಗಿದ ಬಳಿಕ ನಿಗದಿತ ಸಮಯದಲ್ಲೇ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಪಕ್ಷದ ಮುಖಂಡತ್ವದಲ್ಲೂ ಬದಲಾವಣೆ ಇಲ್ಲ ಎಂದು ಹೇಳಿದರು.

Karnataka Politics: ಸಿಎಂ ಬದಲಾವಣೆ ಇಲ್ಲ: ಇನ್ಮುಂದೆ ಕರ್ನಾಟಕದತ್ತ ಬಿಜೆಪಿ ಹೆಚ್ಚು ಗಮನ: ಅರುಣ್ ಸಿಂಗ್

ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ಬಿಜೆಪಿ ಎರಡನೇ ಬಾರಿ ಅಧಿಕಾರ ಗಳಿಸಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ(Karnataka) ಬಿಜೆಪಿ(BJP) ಮತ್ತೆ ಅಧಿಕಾರಕ್ಕೆ ಏರಲಿದೆ. ಇಲ್ಲಿ ಜನಪರ ಮತ್ತು ಜನಪ್ರಿಯ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರ ನಾಯಕತ್ವವೂ ಇದೆ. ಹೀಗಾಗಿ, ಇಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಿದ ಜನಪರ ಕೆಲಸಗಳನ್ನು ಮತದಾರರಿಗೆ ತಿಳಿಸಲಾಗುವುದು. 150 ಸ್ಥಾನ ನಮಗೆ ಸಿಗಲಿದೆ. ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಿ ಗೆದ್ದು ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Basavaraj Bommai: ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ, ಅಚ್ಚರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅರುಣ್‌ ಸಿಂಗ್‌ ಅವರು, ಸಚಿವ ಸಂಪುಟ ವಿಸ್ತರಣೆ(Cabinet Expansion) ಮತ್ತು ಸೇರ್ಪಡೆ ಆಗುವವರ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಿಂದೂಗಳ ಹತ್ಯೆಯಾಗುತ್ತಿತ್ತು

ಈ ಹಿಂದೆ ಸಿದ್ದರಾಮಯ್ಯ(Siddaramaiah) ಸರ್ಕಾರ ಇದ್ದಾಗ ಹಿಂದೂಗಳ(Hindu) ಹತ್ಯೆಯಾಗುತ್ತಿತ್ತು. ದೊಡ್ಡ ದೊಡ್ಡ ಭ್ರಷ್ಟಾಚಾರಗಳು ನಡೆದಿದ್ದವು. ಹೀಗಾಗಿ ಕಾಂಗ್ರೆಸ್(Congress) ಮೇಲೆ ದೇಶದ ಜನರಿಗೆ ವಿಶ್ವಾಸವಿಲ್ಲ. ಕಾಂಗ್ರೆಸ್‌ನಲ್ಲಿ ಒಳಜಗಳು ನಡೆಯುತ್ತಿವೆ. ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನ ಕಾಂಗ್ರೆಸ್ ಮಾಡುತ್ತಿದೆ. ನಾವು ಕಾರ್ಯಕಾರಿಣಿ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ(Narendra Modi) ನೇತೃತ್ವದಲ್ಲಿ ಮುನ್ನಡೆಯುತ್ತೇವೆ. ಅವರ ಸಾಧನೆ ಸೇರಿದಂತೆ ಮೋದಿಯವರ ಮಾರ್ಗದರ್ಶನದಲ್ಲಿ ಚುನಾವಣೆ(Election) ಎದುರಿಸಲಿದ್ದೇವೆ. ರಾಜ್ಯದಲ್ಲಿ 150 ಕ್ಕೂ ಅಧಿಕ ಸ್ಥಾನಗಳನ್ನ ಗೆಲ್ಲುವ ಸಂಕಲ್ಪವನ್ನ ಮಾಡಿದ್ದೇವೆ. ಚುನಾವಣೆಗೆ ನಾವೆಲ್ಲರೂ ಸನ್ನದ್ಧರಾಗಿದ್ದೇವೆ ಅಂತ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದರು. 

ಸಿದ್ದು- ಡಿಕೆಶಿ ತಿರುಕನ ಕನಸು ಕಾಣೋದು ಬೇಡ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯಿದೆ(Anti Conversion Bill) ವಾಪಾಸ್ ತೆಗೆದುಕೊಳ್ಳೋದಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ(DK Shivakumar) ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಆರ್.ಅಶೋಕ್(R Ashok), ಸಿದ್ದರಾಮಯ್ಯ ಹಾಗೂ ಡಿಕೆಶಿ ಅಧಿಕಾರಕ್ಕೆ ಬರುತ್ತೇವೆ ಎಂಬ ತಿರುಕನ ಕನಸು ಕಾಣೋದು ಬೇಡ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರೋದಿಲ್ಲ. ಕಾಂಗ್ರೆಸ್ ಈಗಾಗಲೇ ಧೂಳಿಪಟ ಆಗೋಗಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ದಿನ ಬಾವುಟವೇ ಬಿದ್ದೋಗಿದೆ. ಕಾಂಗ್ರೆಸ್ ಈಗ ಬಿದ್ದೋಗಿರುವ ಬಾವುಟವಾಗಿದೆ. ಕಾಂಗ್ರೆಸ್‌ನದ್ದು ಹಾರದೇ ಇರೋ ಬಾವುಟವಾಗಿದೆ. ದಲಿತರು ಹಾಗೂ ಹಿಂದೂಗಳು ಮತಾಂತರ ಆಗಲಿ ಅನ್ನೋದಾದರೆ ಜನಾನೇ ಇವರಿಗೆ ಪಾಠ ಕಲಿಸುತ್ತಾರೆ. ಹಿಂದೆ ಲಿಂಗಾಯತ ವೀರಶೈವ ಅಂತ ಧರ್ಮ ಒಡೆಯಲು ಹೋಗಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಬೇಕಾಯಿತು ಅಂತ ಕಾಂಗ್ರೆಸ್‌ ವಿರುದ್ಧ ವೇವಡಿ ಮಾಡಿದ್ದರು. 
 

click me!