ಹೆಚ್. ವಿಶ್ವನಾಥ್ ಪರಿಷತ್ ನಾಮ ನಿರ್ದೇಶನವನ್ನು ರದ್ದು ಮಾಡುವಂತೆ ರಾಜ್ಯಪಾಲ ವಜೂಬಾಯಿ ವಾಲಾರಿಗೆ ಪತ್ರ ಬರೆದ ಸಾ.ರಾ.ಮಹೇಶ್| ವಿಶ್ವನಾಥ್ ಪರಿಷತ್ ಸ್ಥಾನವನ್ನು ಅಸಿಂಧು ಮಾಡುವಂತೆ ರಾಜ್ಯಪಾಲರಿಗೆ ಪತ್ರ| ನ್ಯಾಯಾಲಯದ ಆದೇಶದ ಪ್ರಕಾರ ವಿಶ್ವನಾಥ್ ಯಾವುದೇ ಗೌರವಧನ ಪಡೆಯುವ ಹುದ್ದೆಗೆ ಆಯ್ಕೆ ಆಗುವಂತಿಲ್ಲ|
ಬೆಂಗಳೂರು(ಜು.31): ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಪರಿಷತ್ ನಾಮ ನಿರ್ದೇಶನವನ್ನು ರದ್ದು ಮಾಡುವಂತೆ ಕೆ. ಆರ್. ನಗರದ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಅವರು ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಪತ್ರ ಬರೆದಿದ್ದಾರೆ.
ನ್ಯಾಯಾಲಯದ ಆದೇಶದ ಪ್ರಕಾರ ಹೆಚ್. ವಿಶ್ವನಾಥ್ ಯಾವುದೇ ಗೌರವಧನ ಪಡೆಯುವ ಹುದ್ದೆಗೆ ಆಯ್ಕೆ ಆಗುವಂತಿಲ್ಲ. 15ನೇ ವಿಧಾನಸಭಾ ಅವಧಿ ಮುಗಿಯುವವರೆಗೂ ವಿಶ್ವನಾಥ್ ಪರಿಷತ್‌ಗೂ ಆಯ್ಕೆ ಆಗುವಂತಿಲ್ಲ. ಈಗ ಅವರನ್ನು ಸಾಹಿತ್ಯ ಕೋಟಾದ ಅಡಿ ಆಯ್ಕೆ ಮಾಡಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಹಾಗಾಗಿ ಕೂಡಲೇ ಹೆಚ್. ವಿಶ್ವನಾಥ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಎಂದು ಪತ್ರ ಬರೆದಿದ್ದಾರೆ.
ಯಾವುದೇ ಸರ್ಕಾರ ನನ್ನ ಕೈ, ಬರವಣಿಗೆ ಕಟ್ಟಿಹಾಕಲು ಅಸಾಧ್ಯ ಎಂದ 'ಹಳ್ಳಿಹಕ್ಕಿ'
15ನೇ ವಿಧಾನಸಭಾ ಅವಧಿ ಮುಗಿಯುವವರೆಗೂ ಅಥವಾ ವಿಧಾನಮಂಡಲಕ್ಕೆ ಮರು ಅಯ್ಕೆಯಾಗಗುವವರೆಗೂ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಂತ್ರಿಸ್ಥಾನ ಅಥವಾ ಗೌರವಧನ ಪಡೆಯುವ ಯಾವುದೆ ರಾಜಕೀಯ ಹುದ್ದೆಯನ್ನು ಹೊಂದುವಂತಿಲ್ಲ. ಹೀಗಾಗಿ ಸದಿಯಯವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವುದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘಣೆಯಷ್ಟೇ ಅಲ್ಲದೆ ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ಹೆಚ್. ವಿಶ್ವನಾಥ್ ನಾಮನಿರ್ದೇಶನವನ್ನು ರದ್ದುಗೊಳಿಸಲು ಎಂದು ರಾಜ್ಯಪಾಲಕರಿಗೆ ಪತ್ರ ಬರೆದಿದ್ದಾರೆ.