ನಮ್ಮ ಪಕ್ಷದಲ್ಲಿ ನಿಂತು ನಮಗೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಖುದ್ದು ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು ಎಚ್‌ಡಿಕೆ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು, (ಜೂನ್.10): ಕರ್ನಾಟಕ ರಾಜ್ಯಸಭೆ ಚುಣಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಇನ್ನೇನು ಕೆಲವ ಕ್ಷಣಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಜೆಡಿಎಸ್ ಸೋಲಿಸುವಲ್ಲಿ ಸಿದ್ದರಾಮಯ್ಯ ಸಕ್ಸಸ್; ಕಾಂಗ್ರೆಸ್ ತೆಕ್ಕೆಗೆ ಕೆಲ ಶಾಸಕರು?
undefined
ಆದ್ರೆ, ಜೆಡಿಎಸ್ ನಾಯಕರಿಗೆ ಗುಬ್ಬಿ ಶ್ರೀನಿವಾಸ್ ಶಾಕ್ ಕೊಟ್ಟಿದ್ದಾರೆ. ಇಂದು(ಶುಕ್ರವಾರ) ರಾಜ್ಯಸಭಾ ಚುನಾವಣೆಯಲ್ಲಿ ಶ್ರೀನಿವಾಸ್ ಖಾಲಿ ಪೇಪರ್ ಅನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿ ಸಂಚಲನ ಮೂಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ. ಸಾಯಂಕಾಲ ಇವರ ಹಣೆಬರಹ ಗೊತ್ತಾಗುತ್ತದೆ. ನಮ್ಮ ಪಕ್ಷದಲ್ಲಿ ನಿಂತು ನಮಗೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಖುದ್ದು ಶ್ರೀನಿವಾಸ್ ಪ್ರತಿಕ್ರಿಯಿಸಿದ್ದು ಎಚ್‌ಡಿಕೆ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.