ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಿಂದ ಕಣಕ್ಕೆ; BT Lalitha Naik

By Suvarna News  |  First Published Jun 10, 2022, 5:16 PM IST
  • ಮುಂದಿನ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರದಿಂದ ನಮ್ಮ ಅಭ್ಯರ್ಥಿಗಳು ಕಣಕ್ಕೆ
  • ಜನತಾ ಪಾರ್ಟಿಯ ರಾಜ್ಯಾಧ್ಯಕ್ಷೆ ಬಿ.ಟಿ ಲಲಿತಾ ನಾಯಕ್ ಹೇಳಿಕೆ.
  • ಬಿಜೆಪಿ ಅಧಿಕಾರದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗ್ತಿದೆ ಎಂದು ಆರೋಪ.

ವರದಿ: ಕಿರಣ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಜೂ.10): ಇಂದು ಚಿತ್ರದುರ್ಗದ (chitradurga) ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜನತಾಪಾರ್ಟಿಯ (Welfare Party) ರಾಜ್ಯಾಧ್ಯಕ್ಷರಾದ ಬಿ.ಟಿ ಲಲಿತಾ ನಾಯಕ್ (BT Lalitha Naik ) ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದರು. 

Tap to resize

Latest Videos

ರಾಜ್ಯ ಸರ್ಕಾರ ನೌಕರರ ನೇಮಕಾತಿಯಲ್ಲಿ ಅಕ್ರಮವೆಸಗಿದ್ದು ಇತ್ತೀಚೆಗೆ ನಡೆದ ಪಿ.ಎಸ್.ಐ. ನೇಮಕಾತಿ ಹಗರಣ ತುಂಬಾ ದೊಡ್ಡ ಹಗರಣವಾಗಿದೆ. ಇದರ ಜೊತೆಗೆ ಸಹಾಯಕ ಪ್ರಾಧ್ಯಾಪಕರು, ಸಹಾಯಕ ಅಭಿಯಂತರರು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆಗಳನ್ನು ಈ ಹಿಂದೆ 10ವರ್ಷದ ನೇಮಕಾತಿ ಎಲ್ಲಾ ಪ್ರಕ್ರಿಯೆಗಳನ್ನು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರಾದ ಮೂರು ಜನರ ಸಮಿತಿಯಿಂದ ಸಂಪೂರ್ಣ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು. 

ಈ ಹಿಂದೆ ಆಡಳಿತ ಮಾಡಿದ ಕಾಂಗ್ರೆಸ್ ಸರ್ಕಾರ ಮತ್ತು ಈಗ ಆಡಳಿತ ಮಾಡುತ್ತಿರುವ ಬಿ.ಜೆ.ಪಿ.ಸರ್ಕಾರದ ಎರಡು ಹಂತದ ನೇಮಕ ಪ್ರಕ್ರಿಯೆಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ಪದಾಧಿಕಾರಿಗಳು ನೇರವಾಗಿ ಈ ಹಗರಣದಲ್ಲಿ ಭಾಗಿಯಾಗಿರುವುದರಿಂದ ಈಗ ನಡೆಸುತ್ತಿರುವ ತನಿಖಾ ಸಂಸ್ಥೆಗಳು ಸರ್ಕಾರದ ಅಧೀನದಲ್ಲಿರು ವುದರಿಂದ ಸ್ವತಂತ್ರವಾಗಿರುವ ನ್ಯಾಯಾಂಗ ಸಂಸ್ಥೆಯಿಂದಲೇ ತನಿಖೆಯಾಗಬೇಕೆಂಬುದು ನಮ್ಮ ಒತ್ತಾಯ ಎಂದರು.

ಭಾರತ ಸ್ವಾತಂತ್ರ್ಯಕ್ಕಾಗಿ ಬಂದೂಕು ಫ್ಯಾಕ್ಟರಿ ತೆರೆದಿದ್ದ ಇಂಚಗೇರಿ ಮಠಾಧೀಶ!

ಇನ್ನೂ ಇದೇ ವೇಳೆ ಮಾತನಾಡಿದ ಅವ್ರು ರಾಜ್ಯದಲ್ಲಿ ಅನ್ನದಾತರಿಗೆ ಅನ್ಯಾಯವಾಗುತ್ತಿದೆ. ಕಾರಣವೇನೆಂದರೆ, ರಾಜ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಬೀಜದ ಕೊರತೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರಸಗೊಬ್ಬರಕ್ಕೆ ಸಬ್ಸಿಡಿ ಇಲ್ಲಿವರೆಗೂ ಬಜೆಟ್ ಮಂಡನೆಯ ದಿನದಿಂದ ಇಲ್ಲಿಯವರೆಗೂ ಒಂದು ರೂಪಾಯಿ ಬಿಡುಗಡೆ ಆಗಿರುವುದಿಲ್ಲ. ರಸಗೊಬ್ಬರಕ್ಕೆ ಮತ್ತು ಬೀಜಗಳಿಗೆ ರೈತರಿಗೆ ಪರದಾಡುವ ಸ್ಥಿತಿ ಬಂದಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಕೊಲೆ, ಅತ್ಯಾಚಾರ, ಹಾಗೂ ಕೋಮು ಗಲಭೆ ಯಂತಹ ಪ್ರಚೋದನಕಾರಿ ಹೆಚ್ಚಾಗಿ ನಡೆಯುತ್ತಿವೆ. ನಿರುದ್ಯೋಗ ಬಡತನದಿಂದಾಗಿ ಯುವ ಜನತೆ ಖಿನ್ನತೆಗೊಳಗಾಗುತ್ತಿದ್ದಾರೆ. ಜನಪರ ಕೆಲಸಗಳಿಗೆ ಹಣವಿಲ್ಲವೆನ್ನುತ್ತಾರೆ. ಮಾಡಲಾರದ ಕೆಲಸಗಳಿಗೆ ಹೆಚ್ಚು ಹಣವನ್ನು ಕೊಡಲಾಗುತ್ತಿದೆ. ಕೋವಿಡ್‌ನಿಂದಾಗಿ ಈಗಾಗಲೇ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದ್ದು ಒಂದು ತಿಂಗಳಿನಿಂದ ಶಾಲೆ ಪ್ರಾರಂಭವಾಗಿದ್ದರೂ ಪಠ್ಯ ಪುಸ್ತಕಗಳನ್ನು ಮಕ್ಕಳಿಗೆ ನೀಡಿರುವುದಿಲ್ಲ ಮತ್ತು ಪಠ್ಯ ಪುಸ್ತಕಗಳು ದೊರೆಯುತ್ತಿಲ್ಲ.

ಬರಗೂರು ಸಮಿತಿಯ ಪಠ್ಯಗಳು ಸಮಗ್ರ ಅರ್ಥಪೂರ್ಣವಾಗಿದ್ದರೂ ಆದರೆ ಏನೇನು ಗೊತ್ತಿಲ್ಲದ ವ್ಯಕ್ತಿಯನ್ನು ತಂದು ಪಠ್ಯ ಪರಿಷ್ಕೃತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರಿಂದ ಪಠ್ಯವನ್ನು ಸಂಪೂರ್ಣ ಹಾಳು ಮಾಡಲಾಗಿದೆ. ಎಂದು ರೋಹಿತ್ ಚಕ್ರವರ್ತಿ ವಿರುದ್ದ ಪರೋಕ್ಷವಾಗಿ ಕಿಡಿಕಾರಿದರು. ಪಠ್ಯ ಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಎಂಬುದನ್ನು ಪಠ್ಯದಿಂದ ಕೈಬಿಟ್ಟಿರುವುದು ಕುವೆಂಪುರವರ ಕವಿತೆಯನ್ನು ಕಡಿತಗೊಳಿಸಿರುವುದು. ಖಂಡನೀಯ. 

ಜೂನ್ 13 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರಕಾರ

ಹಿಜಾಬ್ ನಂತರ/ಬೌದ್ಧ ಬಿಕ್ಷುಗಳು ಹಾಕುವ ಉಡುಪುಗಳಿಗೆ ಈಗ ನಿಷೇಧ ಹೇರಲಾಗುತ್ತಿದೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಫಾರ್ಸಿ, ಬೌದ್ಧ, ಜೈನ, ಇನ್ನು ಅನೇಕ ಧರ್ಮಗಳಿದ್ದು ಆಯಾಯ ಧರ್ಮಗಳು ಧರ್ಮಪಾಲನೆ ಮಾಡಲು ಸರ್ಕಾರ ಬಿಡಬೇಕು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವಿಲ್ಲದೇ ಭಾರತದ ಸಂವಿಧಾನದಲ್ಲಿ ಎಲ್ಲಾ ಧರ್ಮಗಳಿಗೂ ಸಮಾನ. ಎಲ್ಲಾರಿಗೆ ಆರ್ಥಿಕ ಸ್ವಾವಲ ಸಿಗಬೇಕು ಉಚಿತ ಶಿಕ್ಷಣ, ಆರೋಗ್ಯ ನೀಡಬೇಕು. ಆದರೆ ರಾಜ್ಯದಲ್ಲಿ ಇದು ಕಾರ್ಯ ಆಗುತ್ತಿಲ್ಲ. ಇದಕ್ಕೆ ಭ್ರಷ್ಟಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕರ್ನಾಟಕ ಲೋಕಾಯುಕ್ತರಿಗೆ ಸಂಪೂರ್ಣ ಸ್ವಾಯತ್ತತೆ ಅಧಿಕಾರ ನೀಡಬೇಕು.

ರಾಜ್ಯದಲ್ಲಿ ಜನಸಾಮಾನ್ಯರಿಗೆ ಮಹಿಳೆಯರಿಗೆ ದಲಿತ ಮತ್ತು ಹಿಂದುಳಿದವರಿಗೆ ಕಾನೂನಿನ ರಕ್ಷಣೆ ಸರಿಯಾಗಿ ಸಿಗುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳ ಕಟ್ರೋಲ್ ಡಿಸೆಲ್ ಬೆಲೆ ಹೆಚ್ಚಳ ಮಾಡಿ ಜನರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಆಗದೇ ಇದ್ದರೆ ಆಡಳಿತ ಮಾಡುತ್ತಿರುವ ಬಿ.ಜೆ.ಪಿ ಅಧಿಕಾರದಿಂದ ಕೆಳಗಿಳಿಯಲಿ.

ಜನತಾ ಶಕ್ತಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದು ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗುವುದು. ಮುಂಬರುವ ಚುನಾವಣೆಯಲ್ಲಿ ಜನಪರ ಯೋಜನೆಗಳನ್ನು ಜನತಾ ಪಾರ್ಟಿ ಹಮ್ಮಿಕೊಳ್ಳಲಿದ್ದು ರಾಜ್ಯದ ಜನತೆ ಜನತಾ ಪಾರ್ಟಿ ಹೇಗಿಲು ಹೊತ್ತ ರೈತ ಚಿಹ್ನೆ ಯನ್ನು ಆಶೀರ್ವದಿಸಬೇಕಾಗಿ ರಾಜ್ಯದ ಜನತೆಯಲ್ಲಿ ವಿನಂತಿಸಿಕೊಂಡರು.

click me!