Karnataka Politics: ದಳಪತಿಗಳಿಗೆ ಮತ್ತೊಂದು ಶಾಕ್ ಕೊಟ್ಟ ಜಿಟಿ ದೇವೇಗೌಡ

By Suvarna News  |  First Published Nov 7, 2021, 7:04 PM IST

* ದಳಪತಿಗಳಿಗೆ ಮತ್ತೊಂದು ಶಾಕ್ ಕೊಟ್ಟ ಜಿಟಿ ದೇವೇಗೌಡ
* ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಹೋದ ಕುಮಾರಸ್ವಾಮಿಗೆ ಜಿಟಿಡಿ ಟಾಂಗ್
* ಸಿದ್ದು-ಜಿಟಿಡಿ ನಾಯಕರ ಸಮಾಗಮಕ್ಕೆ ವೇದಿಕೆ ಸಿದ್ಧ


ಮೈಸೂರು, (ನ.07): ಈಗಾಗಲೇ ಜೆಡಿಎಸ್‌(JDS) ನಿಂದ ಅಂತರ ಕಾಯ್ದುಕೊಂಡಿರುವ ಚಾಮುಂಡೇಶ್ವರಿ (Chamundeshwari) ಶಾಸಕ ಜಿಟಿ ದೇವೇಗೌಡ  (GT Devegowda) ಕಾಂಗ್ರೆಸ್‌ ಸೇರುವುದು ಖಚಿತವಾಗಿದೆ. ಇದರ ಮಧ್ಯೆ ಚಾಮುಂಡೇಶ್ವರಿಗೆ ಬಂದು ಹೋದ ಕುಮಾರಸ್ವಾಮಿಗೆ  (HD Kumaraswamy) ಜಿಟಿಡಿ ಶಾಕ್ ಕೊಟ್ಟಿದ್ದಾರೆ.

ಮೈಸೂರಿನಲ್ಲಿ ಇಂದು (ಭಾನುವಾರ)  ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ,   ನಾನು ಜೆಡಿಎಸ್ ನಲ್ಲಿ ಇರಬೇಕಾ ಬೇಡ ಎನ್ನುವುದನ್ನು ಜನರು ತೀರ್ಮಾನ ಮಾಡುತ್ತಾರೆ. ಕ್ಷೇತ್ರದ ಮತದಾರರು ಹೇಳಿದ ಮಾತನ್ನು ಕೇಳುತ್ತೇನೆ. ಕುಮಾರಸ್ವಾಮಿ ಅವರ ಅಭಿಪ್ರಾಯ ಯಾವುದೇ ಇದ್ರೂ ನನ್ನ ನಿರ್ಧಾರ ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

Tap to resize

Latest Videos

ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್ : ಸಿದ್ದರಾಮಯ್ಯ ಸ್ವಾಗತಕ್ಕೆ ಸಜ್ಜು

  ನಾನು ಎಲ್ಲಿರಬೇಕು ಅಂತ ಜನರು ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಾಗ ನನಗೆ ಆಹ್ವಾನ ಇರಲಿಲ್ಲ. ಬೆಳವಾಡಿ ದೇವಾಲಯಕ್ಕೆ ಹಣವನ್ನು ನೀಡಿದ್ದೆ. ಆದ್ರೂ ಆಹ್ವಾನ ಮಾಡಲಿಲ್ಲ. ಅದೇ ರೀತಿ ರಮ್ಮನಹಳ್ಳಿಗೂ ಆಹ್ವಾನ ಮಾಡಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದೀಗ ಕ್ಷೇತ್ರದಲ್ಲಿ‌ ಕೆಲವು ಕಾಮಗಾರಿ ಉದ್ಘಾಟನೆ ನಡೆಯುತ್ತಿದೆ. ಅದಕ್ಕೆ ಸಿದ್ದರಾಮಯ್ಯ (Siddaramaiah) ಬರುತ್ತಿದ್ದಾರೆ. ಸ್ಥಳೀಯ ಶಾಸಕನಾಗಿ ನಾನು‌ ಭಾಗಿಯಾಗುತ್ತೇನೆ.  ಕ್ಷೇತ್ರದ ಜನರು ಕರೆದಾಗ ನಾನು ಹೋಗಲೇಬೇಕು ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.

ಸಿದ್ದು ಜತೆ ವೇದಿಕೆ ಹಂಚಿಕೊಳ್ಳಲಿರುವ ಜಿಟಿಡಿ
ಮಾಜಿ ಸಚಿವ, ಜೆಡಿಎಸ್ ಶಾಸಕ ಜಿ.ಟಿ,ದೇವೇಗೌಡರು ದಳಪತಿಗಳಿಗೆ ಶಾಕ್ ಕೊಟ್ಟಿದ್ದು, ಕಾಂಗ್ರೆಸ್ (Congress) ಸೇರುವುದು ಬಹುತೇಕ ಖಚಿತವಾಗಿದೆ. ಮೊದಲ ಹಂತವಾಗಿ ನವೆಂಬರ್ 9ರಂದು ಮಾಜಿ ಸಿಎಂ ಸಿದ್ದರಾಮಯ್ಯರ ( Siddaramaiah) ಜೊತೆ ಜಿ.ಟಿ.ದೇವೇಗೌಡರು ವೇದಿಕೆ ಹಂಚಿಕೊಳ್ಳಲಿದ್ದಾರೆ. 

ಹೌದು...ಚಾಮುಂಡೇಶ್ವರಿ ಕ್ಷೇತ್ರಕ್ಕೆ Constituency) ನವೆಂಬರ್ 9ರಂದು ಆಗಮಿಸುತ್ತಿರುವ ಸಿದ್ದರಾಮಯ್ಯರನ್ನು ಸ್ವಾಗತಿಸಲು ಜಿ.ಟಿ.ದೇವೇಗೌಡರು ಸಿದ್ಧತೆ ನಡೆಸುತ್ತಿದ್ದಾರೆ. ಹಿನಕಲ್ ನಲ್ಲಿ ನಡೆಯುವ ಅಂಬೇಡ್ಕರ್ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿ.ಟಿ.ದೇವೇಗೌಡರು ಮತ್ತು ಸಿದ್ದರಾಮಯ್ಯ ವೇದಿಕೆ ಹಂಚಿಕೊಳ್ಳಲಿದ್ದಾರೆ. ಇದಾದ ನಂತರ ಕೇರ್ಗಳ್ಳಿಯಲ್ಲಿ ನಡೆಯುವ ಕೆಂಚಪ್ಪ ಸಮುದಾಯ ಭವನ ಉದ್ಘಾಟನೆಯಲ್ಲೂ ಉಭಯ ನಾಯಕರು ಭೇಟಿಯಾಗಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ವರುಣಾ ಕ್ಷೇತ್ರವನ್ನು ಪುತ್ರ ಯತೀಂದ್ರ ಅವರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇದೇ ಕ್ಷೇತ್ರದಿಂದ ಜೆಡಿಎಸ್ ನಿಂದ ಜಿ.ಟಿ.ದೇವೇಗೌಡರು ಕಣದಲ್ಲಿದ್ದರು. ಇತ್ತ ಸಿದ್ದರಾಮಯ್ಯನವರು ಬದಾಮಿಯಿಂದಲೂ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯನವರು ಬದಾಮಿಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಗೆದ್ದಿದ್ದರು.

ಇದೀಗ ಜಿಟಿ ದೇವೇಗೌಡ ಅವರು ಜೆಡಿಎಸ್ ತೊರೆಯುವುದು ಪಕ್ಕಾ ಆಗಿದ್ದು, ಕಾಂಗ್ರೆಸ್‌ನಿಂದ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಚಾಮುಂಡೇಶ್ವರಿ ಕ್ಷೇತ್ರದಿಂದ ಅಖಾಡಕ್ಕಿಳಿಯಲು ತೀರ್ಮಾನಿಸಿದ್ದು, ಟಿಕೆಟ್‌ಗೆ ಸಂಬಂಧ ಸಿದ್ದರಾಮಯ್ಯನವರ ಜತೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿಯಿಂದ ಸ್ಪರ್ಧೆ ಮಾಡುವುದಾಗಿ ಈಗಾಗಲೇ ಅವರೇ ಘೋಷಣೆ ಮಾಡಿದ್ದಾರೆ. ಇದರಿಂದ ಜಿಟಿಡಿಗೆ ಚಾಮುಂಡೇಶ್ವರಿ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ.

 ಅಪ್ಪಂದಿರು ವಿರೋಧಿಗಳು..ಮಕ್ಕಳು ಒಳ್ಳೆ ಸ್ನೇಹಿತರು
ಒಂದೇ ಪಕ್ಷದಲ್ಲಿದ್ರು ರಾಜಕೀಯದಲ್ಲಿ ಅಪ್ಪಂದಿರು ಪರಸ್ಪರ ವಿರೋಧಿಗಳು..ಮಕ್ಕಳು ಮಾತ್ರ ಒಳ್ಳೆ ಸ್ನೇಹಿತರು..
ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಇದೀಗ ಕುಮಾರಸ್ವಾಮಿ ಮೇಲೆ ಮುನಿಸಿಕೊಂಡು ಪಕ್ಷದಿಂದ ಒಂದು ಆಚೆ ಇಟ್ಟಾಗಿದೆ. ಕುಮಾರಸ್ವಾಮಿ ಹಾಗೂ ಜಿಟಿಡಿ ಒಂದೇ ಪಕ್ಷದವರಾಗಿದ್ರೂ ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಮುಖ ಕೆಡಿಸಿಕೊಂಡಿದ್ದಾರೆ. ಆದ್ರೆ, ಈ ಉಭಯ ನಾಯಕರ ಮಕ್ಕಳು ಮಾತ್ರ ಒಳ್ಳೆ ಸ್ನೇಹಿತರಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಹಾಗೂ ಜಿಟಿಡಿ ಪುತ್ರ ಹರೀಶ್ ಗೌಡ ಒಟ್ಟಿಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ.

click me!