Karnataka Poliitcs: ಹಳ್ಳಿಗಳತ್ತ ಕುಮಾರಸ್ವಾಮಿ ಚಿತ್ತ, ಮತ್ತೊಮ್ಮೆ ಕೊನೆ ಹೋರಾಟ ಎಂದ ಎಚ್‌ಡಿಕೆ

By Suvarna News  |  First Published Nov 7, 2021, 5:34 PM IST

* ಹಳ್ಳಿಗಳತ್ತ  ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಚಿತ್ತ
* ಇದು ನನ್ನ ಕೊನೆಯ ಹೋರಾಟ ಎಂದು  ಮತ್ತೊಮ್ಮೆ ಹೇಳಿದ ಕುಮಾರಸ್ವಾಮಿ
* ನಮಗೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಎಚ್‌ಡಿಕೆ


ಬೆಂಗಳೂರು, (ನ.07): ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಚಿತ್ತ ಇದೀಗ ಹಳ್ಳಿಗಳತ್ತ (Villages) ನೆಟ್ಟಿದ್ದು, ಮತ್ತೆ ಕೊನೆಯ ಹೋರಾಟದ ಮಾತುಗಳನ್ನಾಡಿದ್ದಾರೆ.

ದೇವನಹಳ್ಳಿಯಲ್ಲಿ ಇಂದು (ನ.07) ಮಾತನಾಡಿದ ಕುಮಾರಸ್ವಾಮಿ, ಸಿಂದಗಿ ಉಪಚುನಾವಣೆ (By Election) ಬಳಿಕ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಯಾವುದೇ ಪಕ್ಷದ ನಾಯಕನ ಬಗ್ಗೆಯೂ ಚರ್ಚೆ ಮಾಡಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ನನಗೆ 5 ವರ್ಷ ಸರ್ಕಾರ ರಚಿಸಲು ಅವಕಾಶ ಕೊಟ್ಟರೆ ರೈತರು 1 ರೂಪಾಯಿ ಸಾಲ ಮಾಡದಂತೆ ನೋಡಿಕೊಳ್ಳುತ್ತೇನೆ. ನಮಗೆ ಅಧಿಕಾರ ಕೊಡಿ ಅಂತ ಹಳ್ಳಿಗಳತ್ತ ಹೋಗುತ್ತೇನೆ. ಇದು ನನ್ನ ಕೊನೆಯ ಹೋರಾಟ ಎಂದು ಹೇಳಿದರು.

Tap to resize

Latest Videos

undefined

ಪಕ್ಷದಿಂದ ಯಾರೆಲ್ಲಾ ಹೋಗುತ್ತಾರೆ ಎನ್ನುವ ಪಟ್ಟಿ ಇದೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಚ್‌ಡಿಕೆ
 
ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ರು. ನಾನು ಆ ನೋವನ್ನೆಲ್ಲ ನುಂಗಿಕೊಂಡು ಪ್ರಚಾರ ಮಾಡಿದ್ದೆ. ಯಾರೂ ಸಹ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಸಿಂದಗಿ ಬೈಎಲೆಕ್ಷನ್ ಬಳಿಕ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಯಾವುದೇ ಪಕ್ಷದ ನಾಯಕನ ಬಗ್ಗೆಯೂ ಚರ್ಚೆ ಮಾಡಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುತ್ತೇನೆ ತಿಳಿಸಿದರು.

ರಾಜ್ಯದಲ್ಲಿ ಇನ್ನು ಯಾರೂ ರೈತರ ಸಾಲಮನ್ನಾ ಮಾಡಲ್ಲ. ಸಾಲಮನ್ನಾ ಮಾಡಿದ್ರೂ ಏನೂ ಉಪಯೋಗಕ್ಕೆ ಬರಲ್ಲ. 25 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ. ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕೆ ಬೆಳೆಗೆ ಕೊಟ್ರೆ ಅನುಕೂಲ ಆಗುತ್ತದೆ. ನಾನೂ ಸಹ ಹಸುಗಳನ್ನ ಸಾಕಿ ಹೈನುಗಾರಿಕೆ ಕಷ್ಟ ತಿಳಿದಿದ್ದೇನೆ ಎಂದರು.

ನೀರು ಕೊಡುತ್ತೇವೆಂದು ಹೇಳಿ ಎತ್ತಿನಹೊಳೆ ಹಣ ಲೂಟಿ ಮಾಡುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ಕೊಳಚೆ ನೀರು ತುಂಬಿ ವಿಷ ಕೊಡುತ್ತಿದ್ದೀರಾ? ಸರ್ಕಾರದ 100 ದಿನಗಳ ಸಾಧನೆ ಜಾಹೀರಾತಿಗಾಗಿ 10 ರಿಂದ 20 ಕೋಟಿ ಖರ್ಚು ಮಾಡಿದ್ದಾರೆ. ಜಾಹೀರಾತು ಮೂಲಕ ಜನರನ್ನ ಮರುಳು ಮಾಡಲು ಯತ್ನ ನಡೆಸಿದ್ದಾರೆ. ಎತ್ತಿನಹೊಳೆಗೆ ಸಿದ್ದರಾಮಯ್ಯ 16 ಸಾವಿರ ಕೋಟಿ ಕೊಟ್ರು. ಎತ್ತಿನಹೊಳೆ ನೀರು ಇನ್ನೂ ಸಕಲೇಶಪುರ ದಾಟಿ ಬಂದಿಲ್ಲ. 1 ವರ್ಷದಲ್ಲಿ ಎತ್ತಿನಹೊಳೆ ನೀರು ಹರಿಸುತ್ತೇವೆ ಅಂದಿದ್ರು. ಆದ್ರೆ ಯೋಜನೆ ಆರಂಭವಾದ ಬಳಿಕ ಸಿಎಂ ಆಗಿ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ನಾನು, ಬಿ.ಎಸ್‌. ಯಡಿಯೂರಪ್ಪ ಬಂದುಹೋದರು. ಈಗ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಬಂದು ಕೂತಿದ್ದಾರೆ. 8 ಸಾವಿರ ಕೋಟಿಯಿಂದ ಆರಂಭವಾದ ಎತ್ತಿನಹೊಳೆ ಯೋಜನೆ ಈಗ 24 ಸಾವಿರ ಕೋಟಿಗೆ ಬಂದು ನಿಂತಿದೆ ಎಂದು ಟೀಕಿಸಿದರು.

ಜೆಡಿಎಸ್ ಎಲ್ಲಿದೆ ಎಂದು ಕೆಲವರು ಮಾತನಾಡುತ್ತಾರೆ. 2018ರ ಎಲೆಕ್ಷನ್ ಬಳಿಕ ಕಾಂಗ್ರೆಸ್ ಸಹವಾಸ ಮಾಡಿದ್ನಲ್ಲ, ಆಗ ಜೆಡಿಎಸ್ ಪಕ್ಷವನ್ನು ಮುಗಿಸುವ ಕಥೆ ಶುರುವಾಗಿತ್ತು. ಆದ್ರೆ ದೇವರ, ಜನರ ಆಶೀರ್ವಾದದಿಂದ ಇಂದಿಗೂ ಜೆಡಿಎಸ್ ಇದೆ ಎಂದರು.

ನಾಳೆಯಿಂದ 8 ದಿನಗಳ ಕಾಲ ಪಕ್ಷ ಸಂಘಟನೆಗೆ ಸಭೆ ನಡೆಸುತ್ತೇವೆ. ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾವಾರು, ರಾಜ್ಯ ಮಟ್ಟದ ಜೆಡಿಎಸ್ ನಾಯಕರ ಸಭೆ ನಡೆಸುವೆ. ಜನರ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸ್ಥಳೀಯಸಂಸ್ಥೆ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ತೇವೆ. ಒಂದು ವಾರದೊಳಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸ್ತೇವೆ ಎಂದು ಸ್ಪಷ್ಟಪಡಿಸಿದರು.

click me!