ಬರದ ನಾಡು ಕೋಲಾರದಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಚಿಕ್ಕತಿರುಪತಿಯಿಂದ ಜನತಾ ಜಲಧಾರೆ ರಥಯಾತ್ರೆ ಕೋಲಾರ ಜಿಲ್ಲೆಯನ್ನು ಪ್ರವೇಶ ಮಾಡಿದೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ (ಏ.21): ಬರದ ನಾಡು ಕೋಲಾರದಲ್ಲಿ (Kolar) ಜೆಡಿಎಸ್ (JDS) ಪಕ್ಷದ ಜನತಾ ಜಲಧಾರೆ (Janata Jaladhare) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಇಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಚಿಕ್ಕತಿರುಪತಿಯಿಂದ ಜನತಾ ಜಲಧಾರೆ ರಥಯಾತ್ರೆ ಕೋಲಾರ ಜಿಲ್ಲೆಯನ್ನು ಪ್ರವೇಶ ಮಾಡಿದ್ದು, ಮಾಲೂರು ಜೆಡಿಎಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದ್ದಾರೆ. ಬೃಹತ್ ವೇದಿಕೆಯಲ್ಲಿ ಆಸಿನರಾಗಿರುವ ಜೆಡಿಎಸ್ ನಾಯಕರು, ವೇದಿಕೆ ಎದುರು ಜಮಾಯಿಸಿರುವ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ವಿರುದ್ದ ಜೆಡಿಎಸ್ ನಾಯಕರ ವಾಕ್ಸಮರ ಇಂಥಾದೊಂದು ದೃಷ್ಯಗಳು ಕಂಡು ಬಂದಿದ್ದು, ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ.
undefined
ಹೌದು! ಇಂದು ಮಾಲೂರು ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮ ಜನತಾ ಜಲಧಾರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಮಾಲೂರು ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಕಾರ್ಯಕ್ರಮ ಆಯೋಜನೆ ಮಾಡಿದರು. ಮಧ್ಯಾಹ್ನ 2 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಸಂಜೆ 5 ಗಂಟೆಗೆ ಶುರುವಾಯ್ತು, ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ (HD Devegowda), ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy), ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Karnataka Politics: ತಳಮಟ್ಟದಿಂದ ಜೆಡಿಎಸ್ ಸಂಘಟಿಸಿ: ಇಬ್ರಾಹಿಂ
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಿ.ಎಂ ಇಬ್ರಾಹಿಂ ಕುರುಬನನ್ನು ಸಿಎಂ ಮಾಡಿ ಏನು ಅನುಭವಿಸಿದ್ದೀರಿ ಅನ್ನೋದು ನಿಮಗೆ ಗೊತ್ತಿದೆ. ಸಿದ್ದರಾಮಯ್ಯರನ್ನು ಬೆಳೆಸಿದ್ದ ದೇವೇಗೌಡರು ನಾನು ಬೆಳೆದಿದ್ದು ದೇವೇಗೌಡರಿಂದ, ಅವರು ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತಾರೆ. ಆದರೆ ನಿಜವಾದ ಬಿ ಟೀಂ ಕಾಂಗ್ರೆಸ್ ಎಂದು ಕಾಲೆಳೆದರು. ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಸಿಎಂ ಮಾಡಬೇಕು ಅನ್ನೋದೆ ನನ್ನ ಗುರಿ ಎಂದರು. ಇನ್ನು ಮಾಜಿ ಪ್ರಧಾನಿ ದೇವೇಗೌಡ ಮಾತನಾಡಿ, ಕುಮಾರಸ್ವಾಮಿ ನೇತೃತ್ವದಲ್ಲಿ ಜನತಾ ಜಲಧಾರೆ ನಡೆಯುತ್ತಿದೆ ಅವರಿಗೆ ಆಶೀರ್ವಾದ ಮಾಡಲು ಇಷ್ಟೊಂದು ಜನ ಹೆಣ್ಣು ಮಕ್ಕಳು ಸೇರಿದ್ದೀರಿ ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಿದ್ದು. ನಾನು ಆದರೆ ಇವತ್ತು ನಮ್ಮ ಪಕ್ಷವನ್ನು ಮುಗಿಸಲು ಕೆಲವರ ಪಣತೊಟ್ಟಿದ್ದಾರೆ ಎಂದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ರಾಸಾಯನಿಕ ನೀರು ಕುಡಿಯುವ ಸ್ಥಿತಿ ಬಂದಿದೆ. ಎರಡು ರಾಷ್ಟ್ರೀಯ ಪಕ್ಷಗಳು ನದಿ ಜೋಡಣೆ ವಿಚಾರದಲ್ಲಿ ವಿಫಲರಾಗಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ಬೆಂಗಳೂರಿನ ಕೊಳಚೆ ನೀರು ಕೊಡುತ್ತಿದ್ದಾರೆ. ಏಳೆಂಟು ವರ್ಷಗಳಲ್ಲಿ ಇದರ ನೋವು ನಿಮಗೆ ತಿಳಿಯುತ್ತದೆ. ಎತ್ತಿನಹೊಳೆ ಯೋಜನೆಗೆ 9 ವರ್ಷಗಳ ಹಿಂದೆ ಚಾಲನೆ ನೀಡಿದೆ. ಎತ್ತಿನಹೊಳೆ ಯೋಜನೆಯಲ್ಲಿ ಹಣ ಲೂಟಿ ಆಗ್ತಿದೆ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ ನಾವು ಶುದ್ದ ನೀರು ಕೊಡ್ತೇವೆ. ಮಾತು ಉಳಿಸಿಕೊಳ್ಳದೆ ಇದ್ದರೆ ನಮ್ಮ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ.
ನದಿ ಜೋಡಣೆಗೆ 4 ಲಕ್ಷ ಕೋಟಿ ಹಣ ಬೇಕಾಗಿದೆ. ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರೆ ಕಷ್ಟ ಆಗುತ್ತೆ. ಸ್ಪಷ್ಟ ಬಹುತದ ಸರ್ಕಾರ ನೀಡಿ ಎಂದು ಹೆಚ್ಡಿಕೆ ಸೇರಿದ್ದ ಜನರನ್ನು ಮನವಿ ಮಾಡಿಕೊಂಡರು. ಜನರ ಕಷ್ಟಕ್ಕೆ ಸ್ಪಂದಿಸದೆ ಬಿಜೆಪಿ ಪಕ್ಷ ಧರ್ಮದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದೆ. ಕ್ಷುಲ್ಲಕೆ ಕಾರಣಕ್ಕೆ ಬಿಜೆಪಿ ಬೆಂಕಿ ಹಚ್ಚುತ್ತಿದೆ. ಅದಕ್ಕೆ ಕಾಂಗ್ರೆಸ್‌ನವರು ಪೆಟ್ರೋಲ್ ಸುರಿಯುವ ಕೆಲಸ ಮಾಡುತ್ತಿದೆ ಎಂದರು. 40 ಪರ್ಸೆಂಟ್ ಕಮಿಷನ್ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಚರ್ಚೆ ಆಗ್ತಿದೆ. ಆದರೆ ನಾನು 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೇನೆ. 25 ಸಾವಿರ ಕೋಟಿಗೆ ನಾನು ಪರ್ಸೆಂಟೇಜ್ ತೆಗೆದುಕೊಂಡಿದ್ದರೆ ನಾನು 10 ಸಾವಿರ ಕೋಟಿ ಹೂಡಬಹುದಿತ್ತು. ಗುತ್ತಿಗೆದಾರರಿಗೆ ಹೇಳಿ ವೋಟಿಗೆ ಐನೂರು ಸಾವಿರ ಕೊಟ್ಟು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ನಾನು ಹೇಳಬಹುದಿತ್ತು ಆದರೆ ನಾನು ಅಂತಹ ದ್ರೋಹದ ಕೆಲಸ ನಾನು ಮಾಡಿಲ್ಲ ಎಂದರು.
JDS Jaladhare: ನಮ್ಮ ಹಕ್ಕಿಗೆ ನಾವು ಹೋರಾಟ ನಡೆಸಬೇಕು: ಎಚ್.ಡಿ. ದೇವೇಗೌಡ
ಇನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಾಲೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಾಮೇಗೌಡ ಎಂದು ಘೋಷಣೆ ಮಾಡುವ ಮೂಲಕ ಕಾರ್ಯಕರ್ತರಲ್ಲಿದ್ದ ಗೊಂದಲವನ್ನು ನಿವಾರಣೆ ಮಾಡಿಸರು. ಈ ಹಿಂದೆ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಮಾಜಿ ಶಾಸಕ ಮಂಜುನಾಥ್ ಗೌಡ ಪಕ್ಷದಿಂದ ಹೊರ ಬಂದಿದ್ದು, ಬಿಜೆಪಿ ಪಕ್ಷದ ಬಾಗಿಲು ಬಡಿಯುತ್ತಿದ್ದಾರೆ. ಆದರೂ ಸಹ ಮತ್ತೆ ಜೆಡಿಎಸ್ ಸೇರುತ್ತಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಬರ್ತಾರೆ ಅನ್ನೋ ಮಾತುಗಳು ಕೇಳಿಬರ್ತಿದೆ. ಹೀಗಾಗಿ ಯಾರು ಗೊಂದಲ ಪಡುವ ಅವಶ್ಯಕತೆ ಇಲ್ಲ ರಾಮೇಗೌಡರೇ ಅಭ್ಯರ್ಥಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವೇದಿಕೆಯಲ್ಲಿ ಘೋಷಣೆ ಮಾಡುವ ಮೂಲಕ ಮಾಜಿ ಶಾಸಕ ಮಂಜುನಾಥ್ ಗೌಡರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಒಟ್ಟಾರೆ ಕಾರ್ಯಕ್ರಮದಲ್ಲಿ ಜನರನ್ನು ಸೇರಿಸಲು ಮಾಲೂರು ಜೆಡಿಎಸ್ ಅಭ್ಯರ್ಥಿ ಪುರುಷರ ಬೈಕ್ಗಳಿಗೆ ಎರಡು ಲೀಟರ್ ಪೆಟ್ರೋಲ್ ಹಾಕಿಸಿದ್ರೆ, ಮಹಿಳೆಯರಿಗೆ ಒಂದು ಮೂಟೆ ಅಕ್ಕಿ, ಹಾಗೂ ಸೀರೆ ವಿತರಣೆ ಮಾಡಿದರು. ಈ ವೇಳೆ ಜನರು ಅಕ್ಕಿ ಸೀರೆ ಪಡೆಯಲು ಮುಗಿ ಬಿದ್ದ ಪ್ರಸಂಗ ಕೂಡಾ ನಡೆಯಿತು. ಒಟ್ಟಾರೆ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಜನತಾ ಜಲಧಾರೆ ಹೆಸರಿನಲ್ಲಿ ಪ್ರವಾಸ ಶುರು ಮಾಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿ ಅನುಕೂಲ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.