ಸಿದ್ದರಾಮಯ್ಯರನ್ನು ಸುಳ್ಳಿನ ರಾಮಯ್ಯ ಎಂದ HD Kumaraswamy

By Suvarna News  |  First Published Apr 21, 2022, 2:59 PM IST

ಬುಧವಾರ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಗುರುವಾರ ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಮಾಜಿ ಸಿಎಂ‌ಗಳ ವಾಕ್ ಸಮರ ತಾರಕಕ್ಕೇರಿದೆ.


ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಮೈಸೂರು (ಏ.21): ಮಾಜಿ ಸಿಎಂ‌ಗಳಾದ ಹೆಚ್‌ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಸಿದ್ದರಾಮಯ್ಯ (Siddaramaiah) ನಡುವಣ ವಾಕ್ ಸಮರ ತಾರಕಕ್ಕೇರಿದೆ. ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಇಂದು ಕುಮಾರಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಖಾರವಾಗಿ ಉತ್ತರಿಸಿದರು. ನಾನು ಚಪಲಕ್ಕೊ ಅಥವಾ ಯಾರಿಗೋ ತೊಂದರೆ ಕೊಡಲು ಮಾತನಾಡುವುದಿಲ್ಲ ಎಂದರು.

Tap to resize

Latest Videos

ಸುಳ್ಳಿನ ರಾಮಯ್ಯ ಪುನರುಚ್ಚಿಸಿದ ಒಂದು ದಿನವಾದರೂ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನ ಮಾಡಿದ್ದರು. 12 ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣದ ಮೂಲಕ ಅಂತ ಪ್ರಯತ್ನ ನಡೆಸಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ರು. ಸಿದ್ದರಾಮಯ್ಯ ಮಹಾನ್ ನಾಯಕ. ಅವರು ಹುಟ್ಟಿದಾಗಿನಿಂದಲೂ ಜಾತ್ಯಾತೀತ ಶಕ್ತಿಗಳನ್ನು ಬೆಳೆಸಿದ್ದಾರಾ ಅಂತ ಪ್ರಶ್ನೆ ಮಾಡಿದರು.

ನಾನು ಕೆ ಎಸ್ ಈಶ್ವರಪ್ಪ ಲಾಯರ್ ಅಲ್ಲ. ಅವರ ಮೇಲೆ ಯಾವ ಸಾಫ್ಟ್ ಕಾರ್ನರ್ ಸಹಾ ಇಲ್ಲ. ನಾನು ದಾಖಲೆಗಳ ಬಗ್ಗೆ ಮಾತನಾಡಿದ್ದೇನೆ. ಸಂತೋಷ ಅವರೇ ವಾಟ್ಸ್‌ಅಪ್ ಕಳುಹಿಸಿದ್ದಾರೆ. ನಾನು ಸಂಪೂರ್ಣ ತನಿಖೆ ಮಾಡಲು ಒತ್ತಾಯಿಸಿದ್ದೇನೆ. ಈಶ್ವರಪ್ಪ ತಪ್ಪು ಮಾಡಿದ್ದರೆ ಸಂತೋಷ್ ಸಾವಿಗೆ ಅವರೇ ಕಾರಣಕರ್ತರಾಗಿದ್ದರೆ ಬಂಧಿಸಿ ಎಂದರು. ಈಶ್ವರಪ್ಪ ನನ್ನಿಂದ ಹಣ ಕೇಳಿಲ್ಲ ಅಂತಾ ಸಂತೋಷ್ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದರು.

2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ

ಇನ್ನು ರಾಜ್ಯದಲ್ಲಿ ಆಜಾನ್ ದಂಗಲ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಸಿಎಂ ನೇತೃತ್ವದಲ್ಲಿ ಧಾರ್ಮಿಕ ಗುರುಗಳ ಸಭೆ ನಡೆದು ಆ ಮೂಲಕ ಸ್ಪಷ್ಟವಾದ ಸಂದೇಶ ರವಾನೆ ಮಾಡಿ ಎಂದರು. ಹುಬ್ಬಳಿ ಗಲಭೆ ವಿಚಾರವಾಗಿ ಮಾತಾನಡಿದ ಅವರು ಇಬ್ಬರು ಪೊಲೀಸರ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಅವರಿಗೆ ಪ್ರೇರೆಪಣೆ ಕೊಟ್ಟವರು ಯಾರು ? ಪೊಲೀಸ್ ವಾಹನದ ಮೇಲೆ ನಿಂತು ಭಾಷಣ ಮಾಡಲು ಅವಕಾಶ ಕೊಟ್ಟವರು ಯಾರು. ಆತನನ್ನು ಏಕೆ ಬಂಧಿಸಿಲ್ಲ ಆತ ಎಲ್ಲಿ ಹೋದ ಎಂದೆಲ್ಲ ಪ್ರಶ್ನೆ ಮಾಡಿದರು. ಎರಡು ಪಕ್ಷಗಳೂ ಒಬ್ಬರು ಬೆಂಕಿ ಹಚ್ಚುತ್ತಾರೆ. ಮತ್ತೊಬ್ಬರು ಪೆಟ್ರೋಲ್ ಸುರಿಯುತ್ತಾರೆ. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.

ಸಿದ್ದರಾಮಯ್ಯ ದಿನ ಎರಡು ದಿನ ವಿಧಾನಸಭೆಯಲ್ಲಿ ಮಾತನಾಡುತ್ತಾರೆ. ಈಶ್ವರಪ್ಪ ಸಾವಿಗೆ ನೇರ ಕಾರಣ ಅನ್ನೋ ದಾಖಲೆ ಕೊಟ್ಟು ಒತ್ತಾಯಿಸಿ ಎಂದರು. ಕಲ್ಲಪ್ಪ ಹಂಡಿಭಾಗ್ ಮೃತಪಟ್ಟಾಗ ನಾನು ಆತನ ಪರ ಹೋರಾಟ ಮಾಡಿದೆ. ಆಗ ನಾನು ರಾಜಕೀಯ ಮಾಡಲಿಲ್ಲ. ಅದು ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಅಲ್ಲವಾ ? ಕಲ್ಲಪ್ಪ ಹಂಡಿಭಾಗ ಸಾಯಲು ಬಿಜೆಪಿ ಕಾರಣ. ಡಿವೈಎಸ್‌ಪಿ ಆತ್ಮಹತ್ಯೆಗೆ ಸಿದ್ದರಾಮಯ್ಯ ಅರೆಸ್ಟ್ ಮಾಡಿ ಅಂದವಾ ? ಎಲ್ಲದರಲ್ಲೂ ರಾಜಕಾರಣ ಮಾಡಬಾರದು. ಒಂದು ವೇಳೆ ಜೈಲಿಗೆ ಹೋಗಿ ಬಂದ ಮೇಲೆ ನಿರಾಫರಾದಿ ಅಂದರೆ ಏನು ಮಾಡುವುದು. ಈಗಾಗಿ ದಾಖಲೆ ಇದ್ದರೆ ಜೈಲಿಗೆ ಕಳುಹಿಸಿ ಎಂದಿದ್ದಾರೆ.

Hubballi Violence Case ಬಂಧಿತ ವಿದ್ಯಾರ್ಥಿಗೆ || PUC ಪರೀಕ್ಷೆ ಬರೆಯಲು ಅನುಮತಿ

ಸಿದ್ದರಾಮಯ್ಯಗೆ ನನ್ನ ಭಯ ಕಾಡುತ್ತಿದೆ: ಪದೇ ಪದೇ ತಮ್ಮ ಮೇಲೆ ಮುಗಿ ಬೀಳುತ್ತಿರುವ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಕುಮಾರಸ್ವಾಮಿ ಸಿದ್ದರಾಮಯ್ಯಗೆ ನನ್ನ ಭಯ ಇದೆ, ಅದಕ್ಕೆ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯಗೆ ಬಿಜೆಪಿ ಭಯ ಇಲ್ಲ. ಎಲ್ಲಿ ನಾನು ಬಂದು ಬಿಡುತ್ತೇನೆ ಅನ್ನೋ ಭಯ ಇದೆ. ಈ ಭಯ 2006 ರಿಂದಲೂ ಸಿದ್ದರಾಮಯ್ಯಗೆ ಶುರುವಾಗಿದೆ ಎಂದರು.

ಇನ್ನು ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಮಾತನಾಡಿ ಎರಡು ಪಕ್ಷಗಳು 150 ಸೀಟ್ ಗೆದ್ದ ಮೇಲೆ ಮೈತ್ರಿ ಹೇಗೆ ಸಾಧ್ಯ ಅಂತ ಪ್ರಶ್ನೆ ಮಾಡಿದ್ದಾರೆ. ಇವರಿಗೆ ಬಹುಮತ ಬಂದ ಮೇಲೆ ನನ್ನ ಯಾವೂರು ದಾಸಯ್ಯ ಕೇಳುತ್ತಾನೆ ?  ರಾಜ್ಯದ ಜನರು ಈ ಬಾರಿ ನಮಗೆ ಅವಕಾಶ ನೀಡುತ್ತಾರೆ.  ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಅಧಿಕಾರ ನೀಡುತ್ತಾರೆ. ಈಗಲೂ ಈ ಸರ್ಕಾರ ಬರಲು ಸಿದ್ದರಾಮಯ್ಯ ಕಾರಣ. ಮಾತೆತ್ತಿದರೆ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾರೆ. ನಾನು ಜಾತಿ ಬಳಸಿ ಅಧಿಕಾರ ಮಾಡಲಿಲ್ಲ. ಭ್ರಷ್ಟಾಚಾರದ ಬಗ್ಗೆ ಸುಳ್ಳಿನ ರಾಮಯ್ಯ ಮಾತನಾಡುತ್ತಾರೆ.

ಅರ್ಕಾವತಿ ಡೀಲ್ ಏನಾಯ್ತು ? ಸಿದ್ದರಾಮಯ್ಯ ವಿರುದ್ದ ಮತ್ತೆ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ರು. 2008 ರಲ್ಲಿ ಸಿಎಂ ಸುಳ್ಳಿನ ರಾಮಯ್ಯ ಒಟ್ಟಿಗೆ ಮಾತನಾಡಿಕೊಂಡು ಬಂದರು. ಒಂದೇ ಹೆಲಿಕಾಪ್ಟರ್‌ನಲ್ಲಿ ಬಂದಾಗ ಏನು ಮಾತನಾಡಿದರು. ಆಗ ನೀವು ಬಿಜೆಪಿ ಬಿ ಟೀಂ ಆಗಿರಲಿಲ್ಲವಾ ? ನಿಮ್ಮ ನಾಲಿಗೆಯಲ್ಲಿ ಮೂಳೆ ಇದೆಯಾ ? 10 ನಿಮಿಷದಲ್ಲಿ ಸತ್ಯವನ್ನು ಜನರ ಮುಂದೆ ಇಡಬಹುದು. ಬಿಜೆಪಿ ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದೀನಾ ? ನಾನು ದಾಖಲೆ ಇಟ್ಟುಕೊಂಡು ಮಾತನಾಡುವವನು. ನನ್ನ ಹೋರಾಟದಿಂದ ಯಡಿಯೂರಪ್ಪ ಬಿಜೆಪಿ ಬಿಟ್ಟರು. ಅದರ ಲಾಭದಿಂದ ಅವರು ಸಂತೆ ಭಾಷಣ ಮಾಡಿ ಸಿಎಂ ಆದರೂ ಈ ಬಾರಿಯೂ ಅದೇ ರೀತಿ ಮಾಡಬೇಕಾ ? ಅಂತ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

click me!