
ಸೇಡಂ(ಮೇ.28): ಇಷ್ಟು ದಿನ ಬಿಜೆಪಿ ಪಕ್ಷದವರು ಕೋಮುದ್ವೇಷ ಹರಡಿದ್ದಾಯ್ತು. ಈಗ ಕಾಂಗ್ರೆಸ್ ಸಹ ಅದೇ ಕೆಲಸ ಶುರುವಿಟ್ಟುಕೊಳ್ಳುವ ಮೂಲಕ ಧಮ್ಕಿ ರಾಜಕಾರಣ ಮಾಡುತ್ತಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಶಿವಕುಮಾರ ಅಪ್ಪಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಜಾಬ್, ಹಲಾಲ್, ಝಟ್ಕಾ ಹೀಗೆ ಭಾವೈಕ್ಯದ ದೇಶದಲ್ಲಿ ಕೋಮುದ್ವೇಷ ಹರಡಿದ ಬಿಜೆಪಿ ಈಗ ಮೂಲೆಗುಂಪಾಗಿದೆ. ಕಾಂಗ್ರೆಸ್ ಸಹ ಅದೇ ಚಾಳಿ ಮುಂದುವರೆಸಿದ್ದು, ಈ ಎರಡೂ ಪಕ್ಷಗಳಿಗೆ ಜನರ ಏಳ್ಗೆ, ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂಬುದು ಮೇಲುನೋಟಕ್ಕೆ ಕಂಡುಬರುತ್ತಿದೆ ಎಂದು ಕಿಡಿಕಾರಿದ್ದಾರೆ.
183 ದಿನಗಳಿಂದ ಸಿಮೆಂಟ್ ಕಂಪನಿ ವಿರುದ್ಧ ಧರಣಿ ನಡೆಸುತ್ತಿದ್ದ ರೈತ ಸಾವು!
ಭರವಸೆ ಕೊಟ್ಟಂತೆ ಗ್ಯಾರಂಟಿ ಯೋಜನೆಗಳನ್ನು ಯಥಾವತ್ತಾಗಿ ಜಾರಿ ಮಾಡದೆ. ಭಜರಂಗದಳ, ಆರೆಸ್ಸೆಸ್‌್ಸ ಬ್ಯಾನ್ ಮಾಡುವ ಮಾತುಗಳನ್ನಾಡುತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮತಿಭ್ರಮಣೆಯಾದಂತಿದೆ. ಮೊದಲು ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಭರವಸೆಗಳನ್ನು ಕರಾರಿಲ್ಲದೆ ಜಾರಿ ಮಾಡಬೇಕು. ಭಾರತವನ್ನು ಕೇವಲ ಕೋಮುದ್ವೇಷಕ್ಕಾಗಿ ಬಳಸಿಕೊಳ್ಳದೆ 0% (ಪರ್ಸಂಟೇಜ್ ಪಡೆಯದೆ)ಕಾಮಗಾರಿಗಳನ್ನು ಮಾಡುವ ಮೂಲಕ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.
ಈಗಾಗಲೇ ನಿರುದ್ಯೋಗಿಗಳ ಕೆಂಗಣ್ಣಿಗೆ ಕಾಂಗ್ರೆಸ್ ಸರಕಾರ ಗುರಿಯಾಗಿದೆ. ಸರ್ಕಾರಕ್ಕೆ ಬಡವರ ಮೇಲೆ ಪ್ರಾಮಾಣಿಕ ಕಾಳಜಿ ಇದ್ದದ್ದೇ ಆದಲ್ಲಿ ಷರತ್ತುಗಳಿಲ್ಲದ ಗ್ಯಾರಂಟಿ ಭಾಗ್ಯಗಳನ್ನ ಕರುಣಿಸಲಿ ಎಂದು ಒತ್ತಾಯಿಸಿದ್ದಾರೆ. ರಾಜ್ಯದ ಪ್ರತಿಯೊಂದು ಗ್ರಾಮ, ಬಯಲು ಶೌಚಮುಕ್ತವಾಗಲಿ. ಮಹಿಳೆಯರಿಗೆ ಗೌರವ ದೊರೆಯುವಂತಾಗಲಿ. ಗಾಡಿ ಬಂದಾಗ ಎದ್ದು ನಿಲ್ಲುವ ಮಹಿಳೆಯರ ಮನದಾಳದ ಅಳಲಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಿ.
ಸೇಡಂ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತ ನಡೆಸಿದೆ. ಅವರ ಅವಧಿಯಲ್ಲೇ ಹೆಚ್ಚಿನ ಸಿಮೆಂಟ್ ಕಾರ್ಖಾನೆಗಳು ಹಾಗೂ ಸೋರ್ಲಾ ಕಂಪನಿಗಳು ತಲೆ ಎತ್ತಿವೆ. ಆದರೂ ಸಹ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಿಲ್ಲ. ಬಡವರು ಬಡವರಾಗಿಯೇ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ. ಶಾಸಕ ಡಾ. ಶರಣಪ್ರಕಾಶ ಪಾಟೀಲ ಅವರು ಈಗಲಾದರೂ ಯುವಕ ಯುವತಿಯರ ಬದುಕು ರೂಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.