ಮಾತೃದ್ರೋಹ ಮಾಡಿದವರಿಗೆ ಬುದ್ಧಿ ಕಲಿಸಿ: ನಿಖಿಲ್‌ ಕುಮಾರಸ್ವಾಮಿ

By Govindaraj S  |  First Published Dec 26, 2022, 10:25 PM IST

ಪಕ್ಷ ಎನ್ನುವುದು ತಾಯಿ ಇದ್ದಂತೆ. ದೊಡ್ಡ ನಾಯಕನಾಗಿ ಬೆಳೆದು ಜೆಡಿಎಸ್‌ ತ್ಯಜಿಸುವ ಮೂಲಕ ಮಾತೃದ್ರೋಹ ಮಾಡಿದವರಿಗೆ ಕ್ಷೇತ್ರದ ಜನತೆ ಮುಂದಿನ ಚುನಾವಣೆ ಬುದ್ಧಿ ಕಲಿಸಬೇಕು ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕರೆ ನೀಡಿದರು. 


ಕೆ.ಆರ್‌.ಪೇಟೆ (ಡಿ.26): ಪಕ್ಷ ಎನ್ನುವುದು ತಾಯಿ ಇದ್ದಂತೆ. ದೊಡ್ಡ ನಾಯಕನಾಗಿ ಬೆಳೆದು ಜೆಡಿಎಸ್‌ ತ್ಯಜಿಸುವ ಮೂಲಕ ಮಾತೃದ್ರೋಹ ಮಾಡಿದವರಿಗೆ ಕ್ಷೇತ್ರದ ಜನತೆ ಮುಂದಿನ ಚುನಾವಣೆ ಬುದ್ಧಿ ಕಲಿಸಬೇಕು ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕರೆ ನೀಡಿದರು. ಸಚಿವ ನಾರಾಯಣಗೌಡರ ಹುಟ್ಟೂರು ತಾಲೂಕಿನ ಕೈಗೋನಹಳ್ಳಿಯಲ್ಲಿ ತಂದೆ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸಚಿವ ಕೆ.ಸಿ.ನಾರಾಯಣಗೌಡರ ಪಕ್ಷ ದ್ರೋಹದ ಬಗ್ಗೆ ಗುಡುಗಿದರು.

ಸಿಎಂ ಆಗಿದ್ದಾಗ ಎಚ್‌ಡಿಕೆ ಅವರ ಜನಪರ ಯೋಜನೆ ಸಹಿಸಿದೆ ಕಾಂಗ್ರೆಸ್ಸಿಗರೇ ಮೈತ್ರಿ ಸರ್ಕಾರವನ್ನು ಕೆಡವಿದರು. ಮೈತ್ರಿ ಸರ್ಕಾರದ ಭಾಗವಾಗಿದ್ದ 17 ಶಾಸಕರು ಪಕ್ಷ ತ್ಯಜಿಸಿ ಬಿಜೆಪಿ ಸೇರಿದರು. ಇದರಲ್ಲಿ ಸಚಿವ ಕೆ.ಸಿ.ನಾರಾಯಣಗೌಡ ಕೂಡ ಒಬ್ಬರು ಎಂದು ಕಿಡಿಕಾರಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ನೀಡಿಕೆ ಬಗ್ಗೆ ಗೊಂದಲವಿತ್ತು. ಸಿ.ಫಾರಂ ನೀಡುವ ಮೂಲಕ ಟಿಕೆಟ್‌ ಗೊಂದಲಕ್ಕೆ ತೆರೆ ಎಳೆದು ನಾವು ಕೆ.ಸಿ.ನಾರಾಯಣಗೌಡರಿಗೆ ಎರಡನೇ ಅವಧಿಗೆ ಮತ್ತೆ ಪಕ್ಷದಿಂದ ಟಿಕೆಟ್‌ ನೀಡಿ ಶಾಸಕರನ್ನಾಗಿ ಮಾಡಲಾಯಿತು.  ಆದರೆ, ಅವರು ಗೆದ್ದ ನಂತರ ಮಾತೃ ಪಕ್ಷಕ್ಕೆ ದ್ರೋಹ ಮಾಡಿದರು. 

Tap to resize

Latest Videos

ಎರಡು ಬಾರಿ ಸಿಎಂ ಆಗಿ ಜನರ ಮಧ್ಯೆ ಇದ್ದು ಕೆಲಸ ಮಾಡಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

ಪಕ್ಷ ದ್ರೋಹಿಗಳಿಗೆ ಬುದ್ಧಿ ಕಲಿಸುವ ಕಾಲ ಈಗ ಬಂದಿದೆ.  ಎಚ್‌.ಟಿ.ಮಂಜು ಅವರನ್ನು ನಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿ ನಿಮ್ಮ ಮುಂದೆ ನಿಲ್ಲಿಸಿದ್ದೇವೆ. ಎಚ್‌.ಟಿ.ಮಂಜು ಕ್ರಿಯಾಶೀಲ ಯುವಕ. ನೀವು ಹಾಕುವ ಮತ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹಾಕುವ ಮತ. ಎಚ್‌ಡಿಕೆ ಯಾವುದೇ ರಾಜಕೀಯ ಪಕ್ಷಗಳ ಹಂಗಿಲ್ಲದೆ ಸ್ವತಂತ್ರವಾಗಿ ನಾಡಿನ ಮುಖ್ಯಮಂತ್ರಿಯಾಗಲು ಶಕ್ತಿ ತುಂಬುವಂತೆ ಮನವಿ ಮಾಡಿದರು. ತಾಲೂಕಿನ ಚಿಕ್ಕಹೊಸಹಳ್ಳಿ, ಹರಿರಾಯನಹಳ್ಳಿ, ಅಗ್ರಹಾರಬಾಚಹಳ್ಳಿ, ಚೀಲದಹಳ್ಳಿ, ವಳಗೆರೆ ಮೆಣಸ, ಶೆಟ್ಟಿನಾಯಕನ ಕೊಪ್ಪಲು, ಸಾರಂಗಿ, ಜಾಗಿನಕೆರೆ, ಕೊಟಗಹಳ್ಳಿ, ರಂಗನಾಥಪುರ ಕ್ರಾಸ್‌ ಮೂಲಕ ರಥಯಾತ್ರೆ ರಾತ್ರಿ ಸಂತೇಬಾಚಹಳ್ಳಿಗೆ ಆಗಮಿಸಿ ರಾತ್ರಿ ವಾಸ್ತವ್ಯ ಮಾಡಿತು.

ರಾತ್ರಿಯಾದರೂ ಹಲವು ಗ್ರಾಮಗಳಲ್ಲಿ ಕಾದು ನಿಂತಿದ್ದ ಜೆಡಿಎಸ್‌ ಅಭಿಮಾನಿಗಳು ಜಯಘೋಷಗಳ ನಡುವೆ ರಥಯಾತ್ರೆ ಸ್ವಾಗತಿಸಿದ್ದು ಕಂಡು ಬಂತು. ಅಲ್ಲಲ್ಲಿ ಕ್ರೇನ್‌ ಮೂಲಕ ಸೇಬಿನ ಹಾರ, ಪಟಾಕಿ ಸಿಡಿಸಿ ನಾಯಕರನ್ನು ಪ್ರೀತಿ, ಅಭಿಮಾನದಿಂದ ಸ್ವಾಗತ ಕೋರಿದರು. ಈ ವೇಳೆ ಅಭ್ಯರ್ಥಿ ಎಚ್‌.ಟಿ.ಮಂಜು, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್‌, ಜಿಲ್ಲಾ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ರವಿ ಬಿ.ಕಂಸಗಾರ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎ.ಎನ್‌.ಜಾನಕೀರಾಂ, ಮುಖಂಡರಾದ ಎಂ.ಬಿ.ಹರೀಶ್‌, ಬಿ.ಎಂ.ಕಿರಣ್‌, ಅಗ್ರಹಾರಬಾಚಹಳ್ಳಿ ನಾಗೇಶ್‌, ಮಲ್ಲೇನಹಳ್ಳಿ ಮೋಹನ್‌ ಇದ್ದರು.

ಕನಸು ನನಸು ಮಾಡಿಕೊಳ್ಳಲು ಮುನ್ನುಗ್ಗಿ: ಪೋಷಕರು ಮಕ್ಕಳ ಕನಸು ನನಸು ಮಾಡುಲು ಸದಾ ಮುಂದಾಗುತ್ತಾರೆ. ಮಕ್ಕಳು ತಮ್ಮ ಕನ​ಸನ್ನು ನನಸು ಮಾಡಿ​ಕೊ​ಳ್ಳು​ವತ್ತ ಮುನ್ನ​ಡೆ​ಯ​ಬೇಕು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿ​ದ​ರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಟೇಕ್ವಾಂಡೋ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಟೇಕ್ವಾಂಡೋ ಮ್ಯಾಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೋಷಕರು ತಮ್ಮ ಜೀವನವನ್ನು ತಂದೆ ತಾಯಿಗಳಿಗೋಸ್ಕರ ತ್ಯಾಗ ಮಾಡುತ್ತಾರೆ. ಇದನ್ನು ಮಕ್ಕಳು ಮರೆ​ಯ​ಬಾ​ರದು ಎಂದರು.

ಬಿಜೆಪಿ ಹಣದ ಹೊಳೆ, ಕೆಲ ತಪ್ಪುಗಳಿಂದ ಸೋಲು: ಎಚ್‌.ಡಿ.ಕುಮಾರಸ್ವಾಮಿ

ಪಾರಿತೋಷಕಗಳು ಕ್ರೀಡಾಪಟುಗಳ ಬಾಳಿನಲ್ಲಿ ಉತ್ಸಾಹದಾಯಕವಾಗಿರುತ್ತದೆ. ಆ ಪಾರಿ​ತೋ​ಷ​ಕ​ಗ​ಳನ್ನು ನಮ್ಮ ಕೆಲಸ ಮತ್ತು ಸಾಮರ್ಥ್ಯವನ್ನು ಗುರುತಿಸಿ ನೀಡಲಾಗುತ್ತದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಉತ್ಸಾಹ ಇದೇ ರೀತಿ ಮುಂದುವರೆಯಲಿ, ಜಿಲ್ಲಾ ಮಟ್ಟದ ಬಳಿಕ ರಾಜ್ಯ ಸೇರಿದಂತೆ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ನೀಡುವಂತೆ ಆಗಲಿ. ಆಮೂಲಕ ಪೋಷಕರಿಗೆ ಉತ್ತಮ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು.

click me!