ತಮ್ಮ ಅವಧಿಯಲ್ಲಿ ಕೆಲಸ ಮಾಡಿದ್ದರೆ ಏಕೆ ಆತಂಕ ಪಡಬೇಕಿತ್ತು: ಯೋಗೇಶ್ವರ್‌ ವಿರುದ್ಧ ನಿಖಿಲ್‌ ವಾಗ್ದಾಳಿ

By Kannadaprabha News  |  First Published Mar 24, 2023, 1:59 PM IST

ಮಾಜಿ ಶಾಸಕರ ಮುಖದಲ್ಲಿ ಸೋಲಿನ ಭೀತಿ ಸ್ಪಷ್ಟವಾಗಿ ಕಾಣುತ್ತಿದೆ. 20 ವರ್ಷ ಶಾಸಕರಾಗಿದ್ದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಏಕೆ ಆತಂಕ ಪಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ವಿರುದ್ಧ ಜೆಡಿಎಸ್‌ ಯುವ ಘಟದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. 


ಚನ್ನಪಟ್ಟಣ (ಮಾ.24): ಮಾಜಿ ಶಾಸಕರ ಮುಖದಲ್ಲಿ ಸೋಲಿನ ಭೀತಿ ಸ್ಪಷ್ಟವಾಗಿ ಕಾಣುತ್ತಿದೆ. 20 ವರ್ಷ ಶಾಸಕರಾಗಿದ್ದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡಿದ್ದರೆ ಏಕೆ ಆತಂಕ ಪಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ವಿರುದ್ಧ ಜೆಡಿಎಸ್‌ ಯುವ ಘಟದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ತಾಲೂಕಿನ ಚಿಕ್ಕಮಳೂರು ಬಳಿ ಆಯೋಜಿಸಿದ್ದ ಜೆಡಿಎಸ್‌ ನಗರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಶಾಸಕರಿಗೆ ಕ್ಷೇತ್ರದ ನೆನಪಾಗಿ ಕ್ಷೇತ್ರದ ಬಗ್ಗೆ ಅಭಿಮಾನ ಮೂಡಿ ಅದಕ್ಕೆ ಸಂಕಲ್ಪಯಾತ್ರೆ ಆರಂಭಿಸಿದ್ದಾರೆ. 

ಚುನಾವಣೆ ವೇಳೆ ನಾನು ನಿಮ್ಮ ಮನೆ ಮಗ ಎಂದು ಹೇಳಿಕೊಂಡು ಯಾತ್ರೆ ಹೊರಟಿರುವವರು ಕೊರೋನಾ ವೇಳೆ ಎಲ್ಲಿಗೆ ಹೋಗಿದ್ದರು. ಆಗ ಕ್ಷೇತ್ರದ ಜನರ ಸಂಕಷ್ಟ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ ನಿಖಿಲ್‌, ಕೊರೋನಾ ಸಂಕಷ್ಟದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಿದರೆಂದು ಹೇಳಿದರು. ಕುಮಾರಸ್ವಾಮಿಯವರ ಸರ್ಕಾರವನ್ನು ತೆಗೆಯುವವರೆಗೆ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿದ್ದರು. ಕ್ರಿಕೆಟ್‌ ಬೆಟ್ಟಿಂಗ್‌, ದಂಧೆಕೋರರೊಂದಿಗೆ ಸೇರಿಕೊಂಡು ರೈತರ ಅಭ್ಯುದಯಕ್ಕೆ ದುಡಿಯುತ್ತಿದ್ದ ರೈತಪರ ಸರ್ಕಾರವನ್ನು ತೆಗೆದ ಅವರಿಗೆ ನಾಚಿಕೆಯಾಗಬೇಕು. 

Tap to resize

Latest Videos

ಇಂದು ಪಶ್ಚಿಮ ಬಂಗಾಳ ಸಿಎಂ ಮಮತಾರನ್ನು ಭೇಟಿಯಾಗಲಿದ್ದಾರೆ ಎಚ್‌.ಡಿ.ಕುಮಾರಸ್ವಾಮಿ!

ಹುಣಸೂರಿನ ಚುನಾವಣೆಯಲ್ಲಿ ಹಂಚದೆ ಉಳಿದು ದೂಳು ತಿನ್ನುತಿದ್ದ ಸೀರೆಗಳನ್ನು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ. ನಮ್ಮ ಪಕ್ಷದಲ್ಲಿದ್ದ ಕೆಲವರಿಗೆ ಆಮಿಷ ಒಡ್ಡಿ, ಇದೀಗ ಅವರಿಂದ ನಮ್ಮ ವಿರುದ್ಧ ಮಾತನಾಡಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ರಾಷ್ಟ್ರೀಯ ಪಕ್ಷಗಳಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿಲ್ಲ. ಬಿಜೆಪಿ ಸರ್ಕಾರಕ್ಕೆ ಯುವಕರಿಗೆ ಉದ್ಯೋಗ ಸೃಷ್ಟಿಸಿಲ್ಲ. 40% ಕಮಿಷನ್‌ ವ್ಯವಹಾರ ನಡೆಸಿ ಬಿಜೆಪಿಗರು ಲೂಟಿ ಹೊಡೆದಿದ್ದಾರೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದು 100% ಲೂಟಿಗೆ ಇದೀಗ ಜನಸಂಕಲ್ಪ ಯಾತ್ರೆ ನಡೆಸುತ್ತಿದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ನಗರ ಜೆಡಿಎಸ್‌ ಅಧ್ಯಕ್ಷ ಅಜಯ್‌ಕುಮಾರ್‌, ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಮುಖಂಡರಾದ ಎಂ.ಸಿ.ಕರಿಯಪ್ಪ, ಹಾಪ್‌ಕಾಮ್ಸ್‌ ದೇವರಾಜು, ಕುಕ್ಕೂರುದೊಡ್ಡಿ ಜಯರಾಮು, ನಗರಸಭಾ ಅಧ್ಯಕ್ಷ ಪಿ.ಪ್ರಶಾಂತ್‌, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್‌, ಸತ್ಯನಾರಾಯಣ್‌, ಜಬಿಉಲ್ಲಾಖಾನ್‌ ಉಪಸ್ಥಿತರಿದ್ದರು.

ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ

ರಾಮನಗರದಲ್ಲೂ ಷಡ್ಯಂತ್ರ: ಮಂಡ್ಯದಲ್ಲಿ ಮಾಡಿದಂತೆ ರಾಮನಗರದಲ್ಲೂ ನನ್ನನ್ನು ಮಣಿಸಲು ಕುತಂತ್ರದ ರಾಜಕಾರಣ ನಡೆಸಲಾಗುತ್ತಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿ ನನ್ನ ವಿರುದ್ಧ ಸಾಕಷ್ಟುಷಡ್ಯಂತ್ರ ನಡೆಸುತ್ತಿದ್ದಾರೆ. ಅವರೆಲ್ಲ ಸೇರಿ ಏನೇ ಷಡ್ಯಂತ್ರ ನಡೆಸಿದರು ಏನೂ ಆಗುವುದಿಲ್ಲ. ಜನರ ಆಶೀರ್ವಾದ ನನಗಿದೆ. ಚನ್ನಪಟ್ಟಣದ ಮಾಜಿ ಶಾಸಕರು ಕಾಂಗ್ರೆಸ್ಸಿನಿಂದಾದರೂ ನಿಲ್ಲಲಿ, ಬಿಜೆಪಿಯಿಂದಾದರೂ ನಿಲ್ಲಲಿ. ಕುಮಾರಸ್ವಾಮಿ ಇಲ್ಲಿಂದಲೇ ಸ್ಪರ್ಧಿಸುತ್ತಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

click me!