ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶೃಂಗೇರಿಗೆ ಭೇಟಿ ನೀಡಿದ ಬೆನ್ನಲ್ಲೇ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೂಡ ಭೇಟಿ ನೀಡಲು ಮುಂದಾಗಿದ್ದಾರೆ.
ಚಿಕ್ಕಮಗಳೂರು (ಫೆ.23): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶೃಂಗೇರಿಗೆ ಭೇಟಿ ನೀಡಿದ ಬೆನ್ನಲ್ಲೇ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೂಡ ಭೇಟಿ ನೀಡಲು ಮುಂದಾಗಿದ್ದಾರೆ. ನಾಳೆ (ಶುಕ್ರವಾರ) ರಾತ್ರಿ ಶೃಂಗೇರಿಗೆ ತಲುಪಲಿರುವ ಕುಮಾರಸ್ವಾಮಿ ಶಾರದಾಂಬೆಯ ದರ್ಶನ ಪಡೆದು ಉಭಯ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಜೊತೆಗೆ ಫೆ.25ರಂದು ಬೆಳಗಿನ ಪೂಜೆಯಲ್ಲಿ ಕುಮಾರಸ್ವಾಮಿ ಭಾಗಿಯಾಗಲಿದ್ದು, ಅನಂತರ ಪಂಚರತ್ನ ಯಾತ್ರೆಗೆ ಶೃಂಗೇರಿ ಮಠದಿಂದ ಚಾಲನೆ ನೀಡಲಿದ್ದಾರೆ.
ನಾಲ್ಕು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಯಲಿದ್ದು, ಈ ಹಿಂದೆ ಶೃಂಗೇರಿ ಮಠ, ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿ ಹೇಳಿಕೆ ನೀಡಿ ಬ್ರಾಹ್ಮಣ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದರು. ಬಿಜೆಪಿ ವಿರುದ್ಧ ಶೃಂಗೇರಿ ಮಠ ಹೊಡೆದವರು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಶೃಂಗೇರಿ ಮಠಕ್ಕೆ ಜೆಪಿ ನಡ್ಡಾ ಭೇಟಿ ನೀಡಿ ಶೃಂಗೇರಿ ಮಠದ ವಿಧುಶೇಖರ ಶ್ರೀಗಳ ಜೊತೆಗೆ ಚರ್ಚೆ ನಡೆಸಿದ್ದರು. ಇದೀಗ ಬ್ರಾಹ್ಮಣ ವಿರೋಧಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್‌ಗೆ ಕುಮಾರಣ್ಣ ಮುಂದಾಗ್ತಾರ ಕಾದು ನೋಡಬೇಕಿದೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ: ಎಚ್.ಡಿ.ಕುಮಾರಸ್ವಾಮಿ ಭವಿಷ್ಯ
ಶಾರದಾ ಗೆದ್ದರೆ ಸಚಿವ ಸ್ಥಾನ ನಿಶ್ಚಿತ: ಜೆಡಿಎಸ್ ಅಧಿಕಾರಿಕ್ಕೆ ಬಂದರೆ ಗ್ರಾಮಾಂತರ ಶಾಸಕರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆಯಲ್ಲಿ ಮಾತನಾಡಿ, ಶಿವಮೊಗ್ಗ ಗ್ರಾಮಾಂತರದ ಜನಪರ ಕಾಳಜಿಯುಳ್ಳ ನನ್ನ ತಂಗಿ ಶಾರದಾ ಪೂರಾರಯ ನಾಯ್ಕ್ ಅವರನ್ನು ಅತಿ ಹೆಚ್ಚು ಮತಗಳಿಂದ ಆರಿಸಿ ತರಬೇಕಿದೆ. ಇದರಿಂದ ಈ ಕ್ಷೇತ್ರದ ಜನತೆಗೆ ಒಳ್ಳೆಯ ಅವಕಾಶಗಳು ದೊರೆಯಲಿವೆ ಎಂದರು.
ಕುಟುಂಬದಲ್ಲಿ 30- .40 ಲಕ್ಷ ಖರ್ಚಾಗುವಂತಹ ಕಾಯಿಲೆಗಳು ಇವತ್ತು ಸರ್ವೇಸಾಮಾನ್ಯ. ಮಲವಗೊಪ್ಪದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಬಂದ ಎರಡು ಕುಟುಂಬಗಳು ಒಂದು ಕುಟುಂಬಕ್ಕೆ .50 ಲಕ್ಷ ಹಾಗೂ ಇನ್ನೊಂದು ಕುಟುಂಬಕ್ಕೆ .35 ಲಕ್ಷದ ಅಗತ್ಯವಿದೆ. ಈ ತರ ಬಂದಂತವರಿಗೆ ನಾನು ವೈಯಕ್ತಿಕವಾಗಿ ಎಲ್ಲಿಂದ ಹಣ ತಂದು ಕೊಡಲು ಸಾಧ್ಯ? ನಾನೇನು ದೊಡ್ಡ ಶ್ರೀಮಂತನಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಬೇರೆ ರಾಜಕಾರಣಿಗಳ ತರ ಹಣ ಲೂಟಿ ಮಾಡಿ, ಆಸ್ತಿ ಸಂಪಾದನೆ ಮಾಡಿಲ್ಲ. ನಾನೂ ಒಬ್ಬ ರೈತನಾಗಿ ಬದುಕುತ್ತಿದ್ದೇನೆ ಎಂದು ಹೇಳಿದರು.
ಜಾತ್ರೆ ನಂತರದ ಸ್ಟಾಕ್ ಕ್ಲಿಯರೆನ್ಸ್ ಬಜೆಟ್: ಎಚ್.ಡಿ.ಕುಮಾರಸ್ವಾಮಿ ಟೀಕೆ
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಆರೋಗ್ಯ ಕೇಂದ್ರವನ್ನು ತೆರೆದು, ದಿನದ 24 ಗಂಟೆ ಉಚಿತ ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಭಗವಂತ ಅಧಿಕಾರ ಕೊಟ್ಟಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. 25 ಸಾವಿರ ಕೋಟಿ ಸಾಲ ಮನ್ನಾಮಾಡಿ 26 ಲಕ್ಷ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಮಳೆಗಾಲ ಪ್ರಾರಂಭದಲ್ಲಿ ಬಿತ್ತನೆಬೀಜ ಹಾಗೂ ಗೊಬ್ಬರ ಖರೀದಿ ಮಾಡುವುಕ್ಕೆ 1 ಎಕರೆಗೆ 10 ಸಾವಿರದಂತೆ 10 ಎಕರೆ 1 ಲಕ್ಷದವರೆಗೆ ರೈತಬಂಧು ಯೋಜನೆಯಡಿ ಸರ್ಕಾರದ ವತಿಯಿಂದ ಧನಸಹಾಯ, ಸಣ್ಣಪುಟ್ಟವ್ಯಾಪಾರದಾರರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ತರಬೇತಿ ಜೊತೆಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಹೇಳಿದರು.