ಮಡಿಕೇರಿ ಚಲೋಗೆ ಮಹತ್ವ ಬೇಕಿಲ್ಲ: ಎಚ್‌.ಡಿ.ಕುಮಾರಸ್ವಾಮಿ

By Govindaraj S  |  First Published Aug 22, 2022, 5:15 AM IST

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆದ ಪ್ರಕರಣ ಖಂಡಿಸಿ ಆ.26 ರಂದು ಕಾಂಗ್ರೆಸ್‌ ಹಮ್ಮಿಕೊಂಡಿರುವ ಮಡಿಕೇರಿ ಚಲೋ ಮತ್ತು ಎಸ್ಪಿ ಕಚೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ನಾನೇನು ಮಹತ್ವ ಕೊಡುವುದಿಲ್ಲ, ಜನವೂ ಮಹತ್ವ ಕೊಡದೆ ಇರುವುದೇ ಒಳಿತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.


ಹಾಸನ (ಆ.22): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆಎಸೆದ ಪ್ರಕರಣ ಖಂಡಿಸಿ ಆ.26 ರಂದು ಕಾಂಗ್ರೆಸ್‌ ಹಮ್ಮಿಕೊಂಡಿರುವ ಮಡಿಕೇರಿ ಚಲೋ ಮತ್ತು ಎಸ್ಪಿ ಕಚೇರಿ ಮುತ್ತಿಗೆ ಕಾರ್ಯಕ್ರಮಕ್ಕೆ ನಾನೇನು ಮಹತ್ವ ಕೊಡುವುದಿಲ್ಲ, ಜನವೂ ಮಹತ್ವ ಕೊಡದೆ ಇರುವುದೇ ಒಳಿತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ ಅದೇನು ಜನಗಳ ಪರವಾಗಿ, ಜನತೆಯ ಹಿತಕ್ಕಾಗಿ ಮಾಡುತ್ತಿರುವ ಪಾದಯಾತ್ರೆಯೇನಲ್ಲ. ಅದಕ್ಕೆ ಜನ ಯಾವುದೇ ರೀತಿಯ ಪ್ರೋತ್ಸಾಹ ಕೊಡದಿರುವುದು ಒಳಿತು. ವಿರೋಧ ಪಕ್ಷದ ನಾಯಕರ ಮೇಲೆ ಮೊಟ್ಟೆಎಸೆದರು ಅಂತ ಅದಕ್ಕೊಂದು ಪಾದಯಾತ್ರೆ, ಅದರ ವಿರುದ್ಧವಾಗಿ ಇನ್ನೊಂದು ಪಾದಯಾತ್ರೆ. ಎರಡು ರಾಷ್ಟ್ರೀಯ ಪಕ್ಷಗಳ ಬೇಜವಾಬ್ದಾರಿ ನಡವಳಿಕೆ ರಾಜ್ಯದ ಜನತೆಯ ಸಮಸ್ಯೆಗೆ ಪೂರಕವಾದುದಲ್ಲ. ಎರಡೂ ಪಕ್ಷಗಳಿಗೆ ಭಗವಂತನೇ ಬುದ್ಧಿಕೊಡಬೇಕೆಂಬುದು ನನ್ನ ಅಭಿಪ್ರಾಯ ಎಂದರು.

Tap to resize

Latest Videos

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ವಿರುದ್ದ ಡಿಕೆಶಿ ಹಾಗೂ ಹೆಚ್‌ಡಿಕೆ ಗರಂ

ನಾವು ಕಾಣದೇ ಇರೋ ಸಿದ್ಧರಾಮೋತ್ಸವನಾ ಇದು: ಸಿದ್ದರಾಮೋತ್ಸವದ ನಂತರ ಎರಡು ಪಕ್ಷಗಳು ಹತಾಶರಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಮೆಗೆ ಒಳಗಾಗುವುದು ಬೇಡ. ರಾಜ್ಯದಲ್ಲಿ ಇಂತಹ ಸಿದ್ದರಾಮೋತ್ಸವಗಳು ಎಷ್ಟುನಡೆದಿಲ್ಲ. ನಾವು ಕಾಣದೇ ಇರೋ ಸಿದ್ದರಾಮೋತ್ಸವವೇ ಇದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಚೇಡಿಸಿದರು. ತಾಲೂಕಿನ ತಮ್ಮ ಹುಟ್ಟೂರು ಹರದನಹಳ್ಳಿಯಲ್ಲಿ ಭಾನುವಾರ ತಮ್ಮ ಮನೆ ದೇವರಾದ ದೇವೀರಮ್ಮನಿಗೆ ತಮ್ಮ ಪುತ್ರ ನಿಖಿಲ್‌ ಅವರ ಮಗನ ಮುಡಿ ಕೊಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದರು.

ಎಂಥೆಂತ ಸಮಾವೇಶಗಳನ್ನು ಎಷ್ಟು ಪಕ್ಷಗಳು ಮಾಡಿಲ್ಲ. ಸುಮ್ಮನೆ ಅವರ ಚಪಲಕ್ಕೆ ಹೇಳಿಕೊಳ್ಳುತ್ತಾರೆ. ಇಂತಹ ಉತ್ಸವಗಳಿಂದ ಜನ ಓಟು ಹಾಕುತ್ತಾರೆ ಅಂತ ಭ್ರಮಾ ಲೋಕದಲ್ಲಿ ಇದ್ದಾರೆ ಅಷ್ಟೇ ಎಂದರು. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆದರೆ ಸಹಕಾರ ನೀಡುತ್ತೇನೆ ಎಂಬ ವಿಚಾರವಾಗಿ ಮಾತನಾಡಿ, ನಾನು ನಂಜಾವಧೂತ ಸ್ವಾಮೀಜಿ ಏನು ಹೇಳಿದ್ದಾರೆ ಅದಕ್ಕೆ ಹಿನ್ನೆಲೆಯಾಗಿ ಹೇಳಿದ್ದೇನೆ. ಯಾರು ಬೇಕಾದರೂ ಇವತ್ತು ಮುಖ್ಯಮಂತ್ರಿ ಆಗಬೇಕಾದರೆ ಭಗವಂತನ ಆರ್ಶೀವಾದ ಬೇಕು. ಆ ಭಗವಂತ ಆರ್ಶೀವಾದ ಕೊಟ್ಟಾಗ ನಮ್ಮದು ಸಹಕಾರ ಇದೆ ಅಂತ ಹೇಳಿದ್ದೇನೆ ಎಂದರು.

ಮಾಜಿ ಸಿಎಂ ಹೆಚ್ ಡಿಕೆ ವಿರುದ್ದ ಧಿಕ್ಕಾರ ಕೂಗಿ ಕೈ-ಕಮಲ ಸದಸ್ಯರ ಆಕ್ರೋಶ

ನಮ್ಮ ಪಕ್ಷವನ್ನು ನಾನು ಸಂಘಟನೆ ಮಾಡುತ್ತಿದ್ದೇನೆ. ಅವರ ಪಕ್ಷವನ್ನು ಅವರು ಸಂಘಟನೆ ಮಾಡುತ್ತಿದ್ದಾರೆ. ನಮ್ಮ ನಂಜಾವಧೂತ ಸ್ವಾಮಿಗಳು ಮುಖ್ಯಮಂತ್ರಿ ಸ್ಥಾನ ಬಲಕ್ಕೆ ಅಥವಾ ಎಡಕ್ಕೆ ಸಿಕ್ಕಿದರು ಪರವಾಗಿಲ್ಲ ಅಂಥ ಹೇಳಿದ್ದಾರೆ. ಆ ಭಗವಂತನ ಇಚ್ಛೆ ಏನು ಇದೆಯೋ, ಯಾರಿಗೆ ಗೊತ್ತು ಅನ್ನೋದನ್ನ ಹೇಳಿದ್ದೇನೆ. ಜೆಡಿಎಸ್‌ ಪಕ್ಷವನ್ನು ಸ್ವತಂತ್ರವಾಗಿ ಅ​ಧಿಕಾರಕ್ಕೆ ತರಬೇಕೆಂದು ಹೋರಾಟ ಮಾಡುತ್ತಿದ್ದೇನೆ. ಅವರು ಮುಖ್ಯಮಂತ್ರಿ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಅವರ ಆಸೆಗೆ ನಾನ್ಯೇಕೆ ನಿರಾಸೆ ತರಬೇಕು. ಅದಕ್ಕೆ ನಾನು ಆ ರೀತಿ ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.

click me!