ನಮ್ಮ ಆಹಾರ ಪದ್ಧತಿ ಚರ್ಚೆಗೆ ಗ್ರಾಸವಾಗಬಾರದು: ಎಚ್‌ಡಿಕೆ

By Govindaraj SFirst Published Aug 22, 2022, 4:00 AM IST
Highlights

ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ ನಡೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. 

ಹೊಳೇನರಸೀಪುರ (ಆ.22): ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುವುದನ್ನು ಸಮರ್ಥಿಸಿಕೊಂಡ ಸಿದ್ದರಾಮಯ್ಯ ನಡೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಆಹಾರ ಪದ್ಧತಿಗಳು, ನಮ್ಮ ನಡವಳಿಕೆಗಳು ದೊಡ್ಡಮಟ್ಟದಲ್ಲಿ ಪ್ರಚಾರಕ್ಕೆ, ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಲು ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದ್ದಾರೆ. ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ನಮ್ಮ ನಡವಳಿಕೆ ಮತ್ತು ಪದ್ಧತಿ ನಮಗೆ ಸೇರಿರೋದು. ಸಾರ್ವಜನಿಕವಾಗಿ ನಾನು ಆ ರೀತಿ, ಈ ರೀತಿ ಬದುಕಿದ್ದೇನೆ ಅನ್ನುವ ಮೂಲಕ ಸಂಘರ್ಷ ಉಂಟುಮಾಡಬಾರದು. 

ಆದರೆ, ಅವರಿಗೆಲ್ಲ ಬೇಕಾಗಿರೋದೇ ಇಂಥ ವಿಚಾರಗಳು. ಜನರ ಸಮಸ್ಯೆಗಳನ್ನು ಸರಿಪಡಿಸುವುದು ಯಾರಿಗೂ ಬೇಕಿಲ್ಲ. ಇಂಥ ವಿಚಾರಗಳ ಮೇಲೆಯೇ ಮುಂದಿನ ಚುನಾವಣೆಯಲ್ಲಿ ಮತ ಪಡೆಯಬೇಕು ಅನ್ನುವ ಇಚ್ಛೆ ಅವರಿಗೆಲ್ಲ ಇದೆ ಅಷ್ಟೆಎಂದು ಬೇಸರ ತೋಡಿಕೊಂಡರು. ಎರಡೂ ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯವನ್ನು ಹಾಳು ಮಾಡುವುದರಲ್ಲಿ ಪೈಪೋಟಿಗೆ ಬಿದ್ದಿವೆ. ಈ ಸಂಬಂಧ ಜನತೆಯೇ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತದ ವಿರುದ್ದ ಡಿಕೆಶಿ ಹಾಗೂ ಹೆಚ್‌ಡಿಕೆ ಗರಂ

ತವರೂರಲ್ಲಿ ಎಚ್‌ಡಿಕೆ ಮೊಮ್ಮಗನ ಮುಡಿಸೇವೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮೊಮ್ಮಗನ ಮೊದಲ ಮುಡಿ ಶಾಸ್ತ್ರ ಭಾನುವಾರ ಮನೆ ದೇವರ ಮುಂದೆ ನಡೆಯಿತು. ಚನ್ನರಾಯಪಟ್ಟಣ ತಾಲೂಕಿನ ಯಲಿಯೂರು ಲಕ್ಷ್ಮಿ ದೇಗುಲದಲ್ಲಿ ಕುಮಾರಸ್ವಾಮಿ ಮೊಮ್ಮಗನ ಮುಡಿ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಹೆಳನರಸೀಪುರ ತಾಲೂಕಿನ ಹರದನಹಳ್ಳಿಯ ಕುಲದೇವರು ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಪುತ್ರ ನಿಖಿಲ್‌ ಕುಮಾರಸ್ವಾಮಿ, ಸೊಸೆ ಜತೆಗಿದ್ದರು.

2019 ರ ಪರಿಹಾರವನ್ನೇ ಇನ್ನೂ ನೀಡಿಲ್ಲ: 2019 ರಲ್ಲಿ ಮಳೆಯಿಂದ ಆದ ಅನಾಹುತಳಿಗೆ ಮನೆ ಕಟ್ಟುವುದಾಗಲಿ, ಬೆಳೆ ಹಾನಿಗೆ ಪರಿಹಾರ ಕೊಡದೆ ಬರೀ ಘೋಷಣೆ ಆಗಿ ಉಳಿದಿದೆ. ಹಲವಾರು ಕುಟುಂಬಗಳು ಶೆಡ್‌ನಲ್ಲೇ ವಾಸ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಇತ್ತೀಚಿಗೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಯಿಂದ ಮತ್ತು ಜಾಹೀರಾತುಗಳಲ್ಲಿ ಕೆಲವು ವ್ಯಕ್ತಿಗಳನ್ನು ಅವಹೇಳನ ಮಾಡುವುದು, ಕೆಲವರನ್ನು ಕೇಂದ್ರೀಕರಿಸಿ ಎರಡು ರಾಷ್ಟ್ರೀಯ ಪಕ್ಷಗಳಿಂದ ಸಾರ್ವಜನಿಕವಾಗಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ನಿರುದ್ಯೋಗ, ಬಡತನ, ರೈತರ ಸಂಕಷ್ಟಗಳು ಇದ್ಯಾವುದಕ್ಕು ಎರಡು ರಾಷ್ಟ್ರೀಯ ಪಕ್ಷಗಳಿಂದ ಧ್ವನಿ ಇಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಸಮಾಜದ ಸಾಮರಸ್ಯವನ್ನು ಹಾಳು ಮಾಡುವುದರಲ್ಲಿ ಒಬ್ಬರಿಗಿಂತ ಒಬ್ಬರು ನಾನು ಕಡಿಮೆಯಲ್ಲ, ಹೆಚ್ಚಿಲ್ಲ ಅನ್ನುವ ನಡವಳಿಕೆಯನ್ನು ಕಾಣುತ್ತಿದ್ದೇವೆ. ಇದಕ್ಕೆ ಜನತೆಯೇ ಸರಿಯಾದ ನಿರ್ಧಾರ ಮಾಡಬೇಕು ಅನ್ನೋದು ನನ್ನ ಅಭಿಪ್ರಾಯ ಎಂದರು. ನಮ್ಮ ಆಹಾರ ಪದ್ದತಿಗಳು, ನಮ್ಮ ನಡವಳಿಕೆಗಳನ್ನ ದೊಡ್ಡಮಟ್ಟದಲ್ಲಿ ಪ್ರಚಾರಕ್ಕೆ, ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗುವಂತಹ ರೀತಿಯಲ್ಲಿ ನಾವು ಅವಕಾಶ ಕೊಡದೆ ಇರುವುದು ಒಳ್ಳೆಯದು. 

Chitradurga: ಈ ಬಾರಿ ನಮ್ಮ ಸಮಾಜಕ್ಕೆ ಪೆನ್ನು ಸಿಕ್ಕೇ ಸಿಗಲಿದೆ ಎಂದ ನಂಜಾವಧೂತ ಶ್ರೀಗಳು!

ನಮ್ಮ ನಡವಳಿಕೆ, ಪದ್ಧತಿ ನಮಗೆ ಸೇರಿರೋದು. ಸಾರ್ವಜನಿಕವಾಗಿ ನಾನು ಆ ರೀತಿ, ಈ ರೀತಿ ಬದುಕಿದ್ದೇನೆ ಅನ್ನುವ ಮೂಲಕ ಸಂಘರ್ಷ ಉಂಟುಮಾಡಬಾರದು. ಅವರಿಗೆ ಬೇಕಾಗಿರೋದೆ ಇಂತಹ ವಿಷಯಗಳು. ಜನರ ಸಮಸ್ಯೆಗಳನ್ನು ಸರಿಪಡಿಸುವುದು ಬೇಕಾಗಿಲ್ಲ. ಇಂತಹ ವಿಚಾರಗಳ ಮೇಲೆ ಮುಂದಿನ ಚುನಾವಣೆಯಲ್ಲಿ ಮತ ಪಡೆಯಬೇಕು ಅನ್ನುವ ಇಚ್ಛೆ ಇದೆ ಅಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇವತ್ತು ನಮ್ಮ ದೇವರಾದ ದೇವಿರಮ್ಮ ದೇವರಿಗೆ ನನ್ನ ಮೊಮ್ಮಗನ ಮುಡಿ ಕೊಡಲು ಬಂದಿದ್ದೇನೆ. ನಮ್ಮ ತಂದೆಯವರೆ ಏಳಿಗೆಗೆ, ಬದುಕಿಗೆ ಸಂಪೂರ್ಣ ರಕ್ಷಣೆ ಕೊಟ್ಟು ಅವರ ಬದುಕನ್ನು ಹಳ್ಳಿಯಿಂದ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋದಂತಹ ನಮ್ಮ ಕುಲದೇವರು ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದರು.

click me!