ನಮ್ಮ ಕುಟುಂಬದ ಯಾರಿಗೂ ಲೋಕಸಭಾ ಚುನಾವಣೆಗೆ ಟಿಕೆಟಿಲ್ಲ: ಎಚ್.ಡಿ.ಕುಮಾರಸ್ವಾಮಿ

By Suvarna NewsFirst Published Jun 23, 2023, 11:12 AM IST
Highlights

ಲೋಕಸಭಾ ಚುನಾವಣೆಗಾಗಿ ಎಲ್ಲ ಪಕ್ಷಗಳೂ ತಯಾರಿ ಶುರು ಮಾಡಿದ್ದು, ಜೆಡಿಎಸ್‌ನಲ್ಲಿಯೂ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಈ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟಂಬದ ಯಾರಿಗೂ ಟಿಕೆಟ್ ನೀಡೋಲ್ಲ ಎಂದಿರುವುದು ಸಂಚಲನ ಮೂಡಿಸಿದೆ. 

ಬೆಂಗಳೂರು (ಜು.23): ಎಲ್ಲ ಪಕ್ಷಗಳೂ ಬರುವ ವರ್ಷದ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಸುಪ್ರಿಮೋ ಎಚ್.ಡಿ.ಕುಮಾರಸ್ವಾಮಿ ಕುಟುಂಬದ ಯಾರಿಗೂ ಟಿಕೆಟ್ ಸಿಗೋಲ್ಲ ಎಂದಿರುವುದು ಸಂಚಲನ ಸೃಷ್ಟಿಸಿದೆ. ಈಗಾಗಲೇ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆದ್ದ ಜೆಡಿಎಸ್‌ಗೆ ಅಂಟಿರುವ ಕುಟುಂಬ ರಾಜಕಾರಣ ಹಣೆಪಟ್ಟಿ ಕಳಚಿಕೊಳ್ಳಲು ಕುಮಾರಸ್ವಾಮಿ ಮುಂದಾದಂತೆ ಕಾಣಿಸುತ್ತಿದೆ. 

ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ಹೊಸ ಸೂತ್ರ ರೂಪಿಸುತ್ತಿದ್ದು, ಎಚ್ಡಿಕೆ ನಿರ್ಧಾರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದಲ್ಲಿಯೂ ಸಂಚಲನ ಸೃಷ್ಟಿಯಾಗುವ ನಿರೀಕ್ಷೆ ಇದೆ. ಈಗಾಗಲೇ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಚ್.ಡಿ.ರೇವಣ್ಣ ಅವರ ಮಗ ಪ್ರಜ್ವಲ್ ಅವರಿಗೂ ಟಿಕೆಟ್ ತಪ್ಪುವ ಸುಳಿವು ನೀಡಿದ್ದು, ಕುಮಾರಸ್ವಾಮಿ...ರೇವಣ್ಣ ಕುಟುಂಬದಲ್ಲಿ ಮತ್ತೆ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದೆ.

Latest Videos

ಫ್ಯಾಮಿಲಿ ಫೈಟ್ ಆಗುವಂತಹ ಸಂಚಲನಾತ್ಮಕ ನಿರ್ಧಾರಕ್ಕೆ ಈಗಾಗಲೇ ಪಕ್ಷದೊಳಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಲೋಕಸಭಾ ಚುನಾವಣೆಗೆ ಗೌಡರ ಕುಟುಂಬದಿಂದ ಯಾರೂ ನಿಲ್ಲೋದಿಲ್ಲ ಎಂದು ಸ್ಪಷ್ಟವಾಗಿ ಕುಮಾರಸ್ವಾಮಿ ಹೇಳಿರುವುದರಿಂದ ನೇರ ಪರಿಣಾಮ ಬೀರುವುದು ಹಾಸನದಲ್ಲಿ. ಈ ನಡೆಯಿಂದ ಹಾಗಾದರೆ ಪ್ರಜ್ವಲ್ ಮುಂದಿನ ಭವಿಷ್ಯವೇನು? ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಹಾಸನ ಟಿಕೆಟ್‌ಗಾಗಿ ಶತಾಯ ಗತಾಯ ಪ್ರಯತ್ನಿಸಿ, ಕಡೆಗೆ ಮಣಿದು ಪಕ್ಷದ ಕಾರ್ಯಕರ್ತ ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ಕೊಡಿಸಿ, ಲೋಕಸಭಾ ಸೀಟಿನ ಮೇಲೆ ಕಣ್ಣಿಟ್ಟಿದ್ದ, ಚುನಾವಣಾ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಭವಾನಿ ರೇವಣ್ಣ ರಾಜಕೀಯ ಭವಿಷ್ಯದ ಬಗ್ಗೆಯೂ ಪಕ್ಷದಲ್ಲಿ ಚರ್ಚೆಗಳಾಗುತ್ತಿವೆ. ಪ್ರಜ್ವಲ್, ನಿಖಿಲ್ ಸೇರಿದಂತೆ ಯಾರೂ ಕೂಡಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋದು ಬೇಡ ಎಂದಿದ್ದಾರೆ ಕುಮಾರಸ್ವಾಮಿ..

ಕುಮಾರಣ್ಣನಿಗೆ ಜ್ಞಾನ ಇದೆಯಲ್ಲಾ ಅಷ್ಟು ಸಾಕು: ಎಚ್‌ಡಿಕೆ ಅಕ್ಕಿ ಹೇಳಿಕೆಗೆ ಡಿಕೆಶಿ ತಿರುಗೇಟು

ವಿಧಾನಸಭಾ ಚುನಾವಣೆಯಲ್ಲಿಯೇ ಇತ್ತು ಗೊಂದಲ:
ಕಳೆದ ವಿಧಾನಸಭಾ ಚುನಾವಣೆ ವೇಳೆ ಹಾಸನ ಟಿಕೆಟ್ ವಿಚಾರದಲ್ಲಿ ಗೊಂದಲ ಉಂಟಾಗಿತ್ತು ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧೆ ಮಾಡಲು ಮುಂದಾಗಿದ್ದರು, ಆದರೆ ಕುಮಾರಸ್ವಾಮಿ ಸ್ವರೂಪ್ ಪರ ನಿಂತಿದ್ದರಿಂದ , ಸತತ ಎರಡು ತಿಂಗಳ ಕಾಲ ಮುಂದುವರೆದಿದ್ದ ಮುಸುಕಿನ ಗುದ್ದಾಟ ನಡೆದಿತ್ತು. ಅಂತಿಮವಾಗಿ ಮೇಲುಗೈ ಸಾಧಿಸಿದ್ದ ಕುಮಾರಸ್ವಾಮಿ ತಮ್ಮ ಹಠದಂತೆ ಸ್ವರೂಪ್‌ಗೆ ಟಿಕೆಟ್ ನೀಡಿದ್ದರು.ಭವಾನಿಗೆ ಮುಂದೆ ಸೂಕ್ತ ಸ್ಥಾನ ನೀಡುವ ಭರವಸೆಯನ್ನೂ ನೀಡಿದ್ದರು.

ಪರಿಷತ್, ಅಥವಾ ಲೋಕಸಭೆಗೆ ಭವಾನಿಗೆ ಅವಕಾಶ ನೀಡುವ ಚರ್ಚೆಗಳು ಹುಟ್ಟಿಕೊಂಡಿದ್ದವು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಆಯಿತು. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಂದುಕೊಂಡಷ್ಟು ಸ್ಥಾನ ಪಡೆಯಲಿಲ್ಲ.ಇದೀಗ ಲೋಕಸಭಾ ಚುನಾವಣೆಗೆ ಕುಮಾರಸ್ವಾಮಿ ಹೊಸ ಸೂತ್ರ ಮತ್ತೆ ಸಂಚಲನ ಮೂಡಿಸುವ ಸಾಧ್ಯತೆ ಇದೆ. 

ಹಾಸನದಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ: 
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಂಸದರಾಗಿದ್ದ ಕ್ಚೇತ್ರವಾದ ಹಾಸನದಲ್ಲಿ ಮೊಮ್ಮಗ ಪ್ರಜ್ವಲ್‌ಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು ದೇವೇಗೌಡರು. ಸಂಸದರಾಗಿ ಮೊದಲ ಅವಧಿ ಪೂರೈಸುತ್ತಿದ್ದಾರೆ ಪ್ರಜ್ವಲ್. ಇದೀಗ ಕುಮಾರಸ್ವಾಮಿ ನಿರ್ಧಾರದಿಂದ ಪ್ರಜ್ವಲ್ ರಾಜಕೀಯ ಭವಿಷ್ಯ ಮಂಕಾಗುವ ಸಾಧ್ಯತೆ ಇದೆ. ಭವಾನಿ ರೇವಣ್ಣ ಕೂಡಾ ಲೋಕಸಭೆಗೆ ಸ್ಪರ್ಧೆ ಮಾಡುವಂತಿಲ್ಲ, ಅತ್ತ ರಾಮನಗರದಲ್ಲಿ ಸೋತ ನಿಖಿಲ್ ಕೂಡಾ ಲೋಕಸಭೆಗೆ ಸ್ಪರ್ಧೆ ಮಾಡುವಂತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೇವೇಗೌಡರು ಕೂಡಾ ಸ್ಪರ್ಧೆ ಮಾಡೋಲ್ಲ ಎಂಬ ಸುಳಿವು ಸಿಕ್ಕಂತಾಗಿದೆ. ಹಾಗಾದ್ರೆ ನಿಖಿಲ್, ಪ್ರಜ್ವಲ್, ಭವಾನಿ ಮುಂದಿನ ಭವಿಷ್ಯ ದ ಕಥೆ ಏನು?

ಗ್ಯಾರಂಟಿ ಸ್ಕೀಮ್ ಜಾರಿಗೆ ಕಾಂಗ್ರೆಸ್‌ನಿಂದ ವಿದ್ಯುತ್‌ ದರ ಏರಿಕೆ, ತಕ್ಷಣ ಇಳಿಸಿ: ಎಚ್‌ಡಿಕೆ

ತಮ್ಮ ಈ ನಿರ್ಧಾರ ದ ಬಗ್ಗೆ ಶೀಘ್ರದಲ್ಲೇ ಕಾರ್ಯಕರ್ತರ ಜೊತೆ ಸಭೆ ಮಾಡಲಿದ್ದಾರೆ ಕುಮಾರಸ್ವಾಮಿ ಎಂದು ತಿಳಿದು ಬಂದಿದೆ. ದೇವೇಗೌಡರ ಜೊತೆಗೂ ಚರ್ಚೆ ಮಾಡಿ ಮನವೊಲಿಸುವ ಸಾಧ್ಯತೆ ಇದೆ. 

click me!