ಬಿಜೆಪಿ ನಾಯಕ ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಎದುರಾಯ್ತು ಸಂಕಷ್ಟ

By Suvarna NewsFirst Published Oct 12, 2021, 4:58 PM IST
Highlights

* ಬಿಜೆಪಿ ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಸಂಕಷ್ಟ
* ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್‍ಐಆರ್ ದಾಖಲು
* ವಂಚನೆ ಆರೋಪದಡಿ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‍ಐಆರ್ ಬುಕ್

ಬೆಂಗಳೂರು, (ಅ.11): ಬಿಜೆಪಿ (BJP) ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು  (Katta Subramanya Naidu)ವಿರುದ್ಧ ವಂಚನೆ ಆರೋಪದಡಿ (fraud case) ಎಫ್‍ಐಆರ್ ದಾಖಲಾಗಿದೆ.

 ಎಸಿಎಂಎಂ ಕೋರ್ಟ್‌ (ACMM Court) ಸೂಚನೆ ಮೇರೆಗೆ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು (FIR) ದಾಖಲಾಗಿದೆ. ಸೈಟ್, ಫ್ಲ್ಯಾಟ್ ಕೊಡುವುದಾಗಿ ಕೃಷ್ಣ ಎಂಬುವರಿಗೆ ದುಪ್ಪಟ್ಟು ಹಣ ನೀಡುವುದಾಗಿ ನಂಬಿಸಿ ವಂಚನೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಶುರುವಾಯ್ತು ಪವರ್‌ ಕಟ್‌, ಸೋತರೂ RCBಗೆ ಸಪೋರ್ಟ್; ಅ.12ರ ಟಾಪ್ 10 ಸುದ್ದಿ!

2004ರಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಶಾಸಕರಾಗಿದ್ದಂತಹ ಸಂದರ್ಭದಲ್ಲಿ ಇಂಡ್ ಸಿಂಡ್ ಕಂಪನಿಯಿಂದ ಸೈಟ್ ಹಾಗೂ ಫ್ಲಾಟ್ (Site Flat) ಕೊಡಿಸುವುದಾಗಿ 2.85 ಕೋಟಿ ರೂ. ಹಣ (Money) ಪಡೆದಿದ್ದರು. ಈ ಹಣವನ್ನು ನಗದು ಹಾಗೂ ಚೆಕ್ ಮೂಲಕ ಪಡೆಯಲಾಗಿತ್ತು. ಈ ಬಗ್ಗೆ ಹಲವು ಬಾರಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ವಿಚಾರಿಸಿದಾಗ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ. 

ಈ ಬಗ್ಗೆ ಸಿ ಮಾಜಿ ಸಚಿವ ಕಟ್ಟಾ ವಿರುದ್ಧ ದೂರು ದಾಖಲಿಸಲು ಪೊಲೀಸರು (Police) ಹಿಂದೇಟು ಹಾಕಿದ್ದರು. ಕೊನೆಗೆ ಹಿರಿಯ ನಾಗರಿಕ, ಇಂಡ್ಸಿಂಗ್ ಡೆವಲಪರ್ಸ್ ನಿರ್ದೇಶಕ ಕೃಷ್ಣ ಅವರು ಕೋರ್ಟ್  (Court) ಮೊರೆ ಹೋಗಿದ್ದರು. 

ಅರ್ಜಿ ವಿಚಾರಣೆ ನಡೆಸಿದ್ದ ಎಸಿಎಂಎಂ ಕೋರ್ಟ್ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದೆ.   ಕೋರ್ಟ್ ಸೂಚನೆಯಂತೆ ಕಟ್ಟಾ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

click me!