ರಾಜಕೀಯ ಹೈಡ್ರಾಮಾ: ಬುಡಕ್ಕೆ ಬೆಂಕಿ ಬಿದ್ದ ಮೇಲೆ ಎಚ್ಚೆತ್ತುಕೊಂಡ JDS

By Web DeskFirst Published Feb 7, 2019, 5:57 PM IST
Highlights

ರಾಜ್ಯ ರಾಜಕೀಯ ಹೈಡ್ರಾಮಾದ ನಡುವೆಯೇ ವಿತ್ತ ಸಚಿವ, ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಇದರ ನಡುವೆಯೇ ಕೆಲ ಅತೃಪ್ತ ಶಾಸಕರ ಭಯದಿಂದ ತಮ್ಮೆಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ.  

ಬೆಂಗಳೂರು, [ಫೆ.07]: ನಮ್ಮ ಪಕ್ಷದಲ್ಲಿ ಎಲ್ಲವೂ ಸರಿ ಇದೆ. ನಿಮ್ಮಲ್ಲಿಯೇ ಸರಿ ಇಲ್ಲ ಎಂದು ಕಾಂಗ್ರೆಸ್ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದ ಜೆಡಿಎಸ್ ಬುಡಕ್ಕೆ ಇದೀಗ ಬೆಂಕಿಬಿದ್ದಿದೆ.

ಕಾಂಗ್ರೆಸ್ ನ ಕೆಲ ಅತೃಪ್ತ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದುಕೊಂಡು ಮೈತ್ರಿ ಸರ್ಕಾರವನ್ನು ಅಲುಗಾಡಿಸುತ್ತಿದ್ದಾರೆ. ಇದೀಗ ಜೆಡಿಎಸ್ ಶಾಸಕರೊಬ್ಬರು ಬಜೆಟ್ ಅಧಿವೇಶನಕ್ಕೆ ಕೈಕೊಟ್ಟು ಅತೃಪ್ತ ಬಣಕ್ಕೆ ಜಿಗಿದಿದ್ದಾರೆ.

ಅಧಿವೇಶನಕ್ಕೆ ಆಬ್ಸೆಂಟ್: ಕೈ ಎತ್ತಿದ JDS ಶಾಸಕ

ಇದ್ರಿಂದ ಎಚ್ಚೆತ್ತುಕೊಂಡ ಜೆಡಿಎಸ್ ನಾಯಕರು ಕೆಟ್ಟ ಮೇಲೆ ಬುದ್ಧಿಬಂತು ಎನ್ನುವಂತೆ ಇದೀಗ ತನ್ನೆಲ್ಲ ಶಾಸಕರಿಗೆ ವಿಪ್ ಜಾರಿ ಮಾಡಿದೆ. 

ನಾಳೆ [ಶುಕ್ರವಾರ] ರಾಜ್ಯ ಸಮ್ಮೀಶ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನಲೆಯಲ್ಲಿ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಜೆಡಿಎಸ್ ನ ಎಲ್ಲ ಶಾಸಕರಿಗೆ ಮುಖ್ಯಮಂತ್ರಿ ಹೆಚ್‍.ಡಿ. ಕುಮಾರಸ್ವಾಮಿ ವಿಪ್ ಜಾರಿಗೊಳಿಸಿದ್ದಾರೆ.

ದೋಸ್ತಿ ಸರ್ಕಾರ ಉಳಿಸಲು 5 ಸಚಿವರ ರಾಜೀನಾಮೆ ?

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಶಾಸಕ ನಾರಾಯಣಸ್ವಾಮಿ ಅವರು ನಿನ್ನೆಯಿಂದ ಸದನಕ್ಕೆ ಹಾಜರಾಗದೆ ಮುಂಬೈಗೆ ತೆರಳಿ ಕಾಂಗ್ರೆಸ್ ಅತೃಪ್ತ ಗುಂಪಿಗೆ ಸೇರಿರುವುದು ಪಕ್ಕಾ ಎನ್ನಲಾಗಿದೆ.

ಈಗಾಗಲೇ ಅವರನ್ನು ಸಂಪರ್ಕಿಸಲು ಯತ್ನಿಸುತ್ತಿರುವ ಜೆಡಿಎಸ್ ನಾಯಕರು ಅವರ ಮೊಬೈಲ್ ನಾಟ್ ರಿಚೇಬಲ್ ಆಗಿರುವುದು ನಾಯಕರಿಗೆ ಕಸಿವಿಸಿ ಉಂಟು ಮಾಡಿದೆ. ಅಲ್ಲದೆ, ಇನ್ನುಳಿದ ಶಾಸಕರನ್ನು ಹದ್ದುಬಸ್ತಿನಲ್ಲಿಡಲು ಬಜೆಟ್ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿ ಮಾಡಲಾಗಿದೆ.

ಇಷ್ಟು ದಿನ ನಮ್ಮ ಜೆಡಿಎಸ್ ಶಾಸಕರು ಎಲ್ಲಿಗೂ ಹೋಗಲ್ಲ ಎಂದು ಬಿಗುತ್ತಿದ್ದ ಸಿಎಂ ಕುಮಾರಸ್ವಾಮಿ ಯಾಮಾರಿದ ಮೇಲೆ ಎಚ್ಚೆತ್ತುಕೊಂಡಿರುವುದು ಒಂದು ರೀತಿಯಲ್ಲಿ ಮುಜುಗರಕ್ಕೆ ಸಿಲುಕಿದ್ದಾರೆ.

click me!