ದೋಸ್ತಿ ಸರ್ಕಾರ ಉಳಿಸಲು 5 ಸಚಿವರ ರಾಜೀನಾಮೆ ?

Published : Feb 07, 2019, 05:18 PM ISTUpdated : Feb 07, 2019, 05:29 PM IST
ದೋಸ್ತಿ ಸರ್ಕಾರ ಉಳಿಸಲು 5 ಸಚಿವರ ರಾಜೀನಾಮೆ ?

ಸಾರಾಂಶ

ದೋಸ್ತಿ ಸರಕಾರ ಮತ್ತು ಕಾಂಗ್ರೆಸ್ ಉಳಿಸಲು ಐವರು ಸಚಿವರು ತಮ್ಮ ಸ್ಥಾನ ತ್ಯಜಿಸಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್ ರಿವರ್ಸ್ ಆಪರೇಶನ್‌ಗೆ ಮುಂದಾಗಿದ್ಯಾ? ಆ ಐವರು ಸಚಿವರು ಯಾರು?

ಬೆಂಗಳೂರು[ಫೆ.07] ದೋಸ್ತಿ ಸರ್ಕಾರ ಉಳಿಸಲು ಅಂತಿಮ ಹಂತದ ಕಸರತ್ತು ನಡೆಯುತ್ತಿದೆ. ಒಂದು ಕಡೆ ಬಂಡಾಯ ಶಾಸಕರನ್ನು ಕಾಂಗ್ರೆಸ್ ಅನರ್ಹ ಮಾಡುವ ಮಟ್ಟಕ್ಕೆ ತೀರ್ಮಾನ ತೆಗೆದುಕೊಂಡಿದ್ದರೂ ಇನ್ನೊಂದು ಕಡೆ ಸುರಕ್ಷಾ ತಂತ್ರ ಎಂಬ ಕಾರಣಕ್ಕೆ 5 ಜನ ಸಚಿವರನ್ನು ರಾಜೀನಾಮೆ ಪಡೆದುಕೊಳ್ಳಲು ಕಾಂಗ್ರೆಸ್ ಮುಂದಾಗಿದೆ.

ಹಿಂದಿನ ಸರಕಾರದಲ್ಲಿಯೂ ಸಚಿವರಾಗಿದ್ದ ಯು.ಟಿ ಖಾದರ್, ಕೃಷ್ಣ ಭೈರೇಗೌಡ, ಕೆ.ಜೆ ಜಾರ್ಜ್ ವಿಧಾನ ಪರಿಷತ್‌ ಸದಸ್ಯೆಯಾಗಿ ಸಚಿವೆಯಾಗಿರುವ ಜಯಮಾಲಾ, ಭ್ರಷ್ಟಾಚಾರದ ಆರೋಪ ಕೇಳಿ ಬಂದಿದ್ದ ಪುಟ್ಟರಂಗಶೆಟ್ಟಿ ಅವರ ರಾಜೀನಾಮೆ ಪಡೆದುಕೊಳ್ಳಲಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ.

ಕಮಲ-ದಳ ದೋಸ್ತಿಗೂ ವೇದಿಕೆ ಸಿದ್ಧ

ಬಿಜೆಪಿಯ ಆಪರೇಶನ್‌ಗೆ ಪ್ರತಿಯಾಗಿ ಕಾಂಗ್ರೆಸ್‌ನ ಪ್ರಭಾವಿ ಸಚಿವರೊಬ್ಬರು ಅಖಾಡಕ್ಕೆ ಇಳಿದು ರಿವರ್ಸ್ ಆಪರೇಶನ್‌ಗೆ ಮುಂದಾಗಿದ್ದಾರೆ. ಕಮಲ ಮಪಾಳಯದಿಂದಲೇ ಜನರನಬ್ನು ಕರೆತಂದು ಅವರಿಗೆ ವಿವಿಧ ಜವಾಬ್ದಾರಿ ವಹಿಸುಕೊಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ
ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ