ರಾಜ್ಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದ್ದು, ಮೊದಲಿಗೆ ಜೆಡಿಎಸ್ ಪ್ರಬಲ ನಾಯಕರೊಬರು ಇಂದು (ಶನಿವಾರ) ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಇದಕ್ಕೆ ಮುನ್ನುಡಿ ಬರೆದಿದ್ದಾರೆ.
ಬೆಂಗಳೂರು, (ಸೆ .19): ಮಾಜಿ ಎಂಎಲ್‌ಸಿ, ವಕೀಲ ರಮೇಶ್ ಬಾಬು ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.
ಇಂದು (ಶನಿವಾರ) ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಈ ಮೂಲಕ ಮುಂಬರುವ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಗಿ ರಮೇಶ್ ಬಾಬು ಕಾಂಗ್ರೆಸ್ನಿಂದ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತಿದೆ.
undefined
ಪುತ್ರ ಶರತ್ ಬಚ್ಛೇಗೌಡ ಕಾಂಗ್ರೆಸ್‌ಗೆ: ತಂದೆ ಬಿಎನ್ ಬಚ್ಚೇಗೌಡ್ರ ಖಡಕ್ ಪ್ರತಿಕ್ರಿಯೆ..!
ಆಗ್ನೇಯ ಪದವೀಧರರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಪಕ್ಷಕ್ಕೆ ಮಾರ್ಚ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು.
ವಿಧಾನಪರಿಷತ್ಗೆ ನಡೆದಿದ್ದ ಆಗ್ನೇಯ ಪದವೀಧರ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಮೇಶ್ ಬಾಬು ಗೆಲುವು ಸಾಧಿಸಿದ್ದರು. ಜೆಡಿಎಸ್ ಪಕ್ಷದ ವಕ್ತಾರ ಹುದ್ದೆಯನ್ನೂ ನಿಭಾಯಿಸಿದ್ದರು.
ಸಮ್ಮಿಶ್ರ ಸರ್ಕಾರ ಬಂದ ಬಳಿಕ ಪಕ್ಷದಲ್ಲಿ ರಮೇಶ್ ಬಾಬುರನ್ನು ಕಡೆಗಣಿಸಲಾಯಿತು. ಲೋಕಸಭಾ ಚುನಾವಣೆಯಲ್ಲೂ ದೇವೇಗೌಡರ ಪರ ಕ್ಷೇತ್ರ ಸುತ್ತಿದ್ದ ರಮೇಶ್ ಬಾಬುಗೆ ಪಕ್ಷದೊಳಗೆ ಪ್ರಾಮುಖ್ಯತೆ ಕಡಿಮೆ ಆಗಿ ಮೂಲೆಗುಂಪು ಮಾಡಲಾಯಿತು. ಇದರಿಂದ ಬೇಸತ್ತ ರಮೇಶ್ಬಾಬು, ಇತ್ತೀಚೆಗಷ್ಟೇ ಜೆಡಿಎಸ್‌ಗೆ ಗುಡ್ ಬೈ ಹೇಳಿದ್ದರು.
ಪಕ್ಷ ವಿರೋಧಿಗಳಿಗೆ ವರಿಷ್ಠರ ಬೆಂಬಲ: ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಜೆಡಿಎಸ್ ಶಾಸಕ
60 ನಾಯಕರು ಕಾಂಗ್ರೆಸ್ ಸೇರಲು ಅರ್ಜಿ
ಹೌದು...60 ನಾಯಕರು ಕಾಂಗ್ರೆಸ್ ಸೇರಲು ಅರ್ಜಿ ಹಾಕಿದ್ದಾರೆ ಎಂದು ಈ ಮಾತನ್ನ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ರಮೇಶ್ ಬಾಬು ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, 60 ನಾಯಕರು ಕಾಂಗ್ರೆಸ್ ಸೇರಲು ಅರ್ಜಿ ಸಲ್ಲಿಸಿದ್ದಾರೆ. 60 ಬೇರೆ ಬೇರೆ ಪಕ್ಷದ ನಾಯಕರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಲ್ಲಮ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಚರ್ಚೆ ನಡೆಸ್ತಿದೆ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ನಾಯಕರ ಅಭಿಪ್ರಾಯ ಪಡೆದುಕೊಂಡೇ ಮುಖಂಡರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ತೀರ್ಮಾನ ಮಾಡ್ತೇವೆ. ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ರಮೇಶ್ ಬಾಬು ಅವರ ಸೇರ್ಪಡೆ ಬೇಗ ಆಗಿದೆ ಎಂದು ಹೇಳಿದರು.