ಬೆಂಗಳೂರು, (ಸೆ.19): ಮಂತ್ರಿ ಮಂಡಲ ವಿಸ್ತರಣೆ ಕುರಿತು ನಿಖರ ಮಾಹಿತಿ ಇಲ್ಲ, ನಾನೂ ದೆಹಲಿಗೆ ಹೋಗಿ ಬಂದಿದ್ದೇನೆ. ನಾಳೆ, ನಾಡಿದ್ದು ಆಗಬಹುದು ಅಥವಾ ಅಧಿವೇಶನ ಆದ ಬಳಿಕವೂ ಆಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಅವರು ಶನಿವಾರ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ವಿಷಯ ಕುರಿತಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ವಿಸ್ತರಣೆ ಆಗೇ ಆಗುತ್ತೆ. ಸಮಯದ ಕೊರತೆಯಿಂದ ಮುಂದೆ ಹೋಗಬಹುದು. ಪಕ್ಷ ಹಾಗೂ ಸಿಎಂ ತೀರ್ಮಾನಕ್ಕೆ ಬದ್ಧ. ಪಕ್ಷದ ಹಿರಿಯರು ಕುಳಿತು ತೀರ್ಮಾನ ಮಾಡ್ತಾರೆ. ಮಂತ್ರಿ ಸ್ಥಾನ ಕೊಡದೇ ಇದ್ದರೆ, ಪಕ್ಷದ ಕೆಲಸ ಮಾಡುವೆ ಎಂದು ಸ್ಪಷ್ಟಪಡಿಸಿದರು.
ದಿಲ್ಲಿಯಿಂದಲೇ ಬ್ರೇಕಿಂಗ್ ನ್ಯೂಸ್ ಕೊಟ್ಟ ಬಿಎಸ್‌ವೈ, ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ಸದ್ಯ ನನಗೆ ಇರುವ ತಿಳುವಳಿಕೆ ಪ್ರಕಾರ ಮುಖ್ಯಮಂತ್ರಿ ಬದಲಾವಣೆ ಯೋಚನೆ ಹೈಕಮಾಂಡ್ಗೆ ಇಲ್ಲ. ಬಿಜೆಪಿ ಹಿಂದೆಯೂ ನನಗೆ ಮಂತ್ರಿ ಆಗೋಕೆ ಅವಕಾಶ ಕೊಟ್ಟಿತ್ತು. ನನಗೆ ಅವಕಾಶ ಕೊಡೋದು ಬಿಡೋದು ಹೈಕಮಾಂಡ್ಗೆ ಬಿಟ್ಟಿದ್ದು, ಕುಮಾರಸ್ವಾಮಿ, ಡಿಕೆಶಿ ನಮ್ಮ ರಾಜಕೀಯ ವಿರೋಧಿಗಳು. ಅವರು ನಮ್ಮ ಪಕ್ಷದಲ್ಲಿ ಪರಿಣಾಮ ಬೀರೋಕೆ ಆಗಲ್ಲ. ಅವರು ನನಗೆ ಅವಕಾಶ ತಪ್ಪಿಸುವಷ್ಟು ಅವರು ಶಕ್ತರೇನಲ್ಲ ಎಂದರು.
ಮೈತ್ರಿ ಸರ್ಕಾರ ಹೋಗಬೇಕಿತ್ತು, ಹೋಯ್ತು. ನನಗೆ ಮಂತ್ರಿ ಸ್ಥಾನ ಕೊಡೋದು ಪಾರ್ಟಿ ತೀರ್ಮಾನವೇ ಅಂತಿಮ ಎಂದು ಡಿಕೆಶಿ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು
ಇನ್ನು ಕೆಲ ದಿನಗಳ ಹಿಂದೆ ಎಚ್.ಡಿ ಕುಮಾರಸ್ವಾಮಿ ಭೇಟಿಯಾದ ವಿಚಾರದ ಬಗ್ಗೆ ಮಾತನಾಡಿದ ಅವರು, ಕುಮಾರಸ್ವಾಮಿ ನಮ್ಮ ಪಕ್ಷದಲ್ಲಿ ಪ್ರಭಾವ ಬೀರ್ತಾರೆ ಅಂತ ನಾನು ಅಂದುಕೊಂಡಿಲ್ಲ. ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಅವರಿಗೆ ಉಳಿದಿಲ್ಲ. ಸಂಪುಟ ವಿಸ್ತರಣೆ ಕುರಿತು ಏನು ಅಂತ ಗೊತ್ತಾಗುತ್ತೆ ಎಂದು ಸಿಪಿವೈ ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.