ಸಿದ್ದರಾಮಯ್ಯ-ವಿಶ್ವನಾಥ್‌ ಮಧ್ಯೆ ‘ಸಮನ್ವಯ’ ಸಾಧ್ಯವೇ?

By Web DeskFirst Published Nov 29, 2018, 4:38 PM IST
Highlights

ಹಳ್ಳಿ ಹಕ್ಕಿ ಸಿದ್ದರಾಮಯ್ಯ ಗೂಡು ಸೇರಲಿದ್ದು, ವಿಶ್ವನಾಥ್‌- ಸಿದ್ದರಾಮಯ್ಯ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ.

ಬೆಂಗಳೂರು, (ನ.29): ರಾಜ್ಯ ಮೈತ್ರಿ ಸರ್ಕಾರದ 5 ಜನರ ಸಮನ್ವಯ ಸಮಿತಿಗೆ ಇನ್ನಿಬ್ಬರು ಸದಸ್ಯರು ಸೇರ್ಪಡೆಯಾಗಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಅಧ್ಯಕ್ಷ ಎಚ್. ವಿಶ್ವನಾಥ್ ಸಮನ್ವಯ ಸಮಿತಿಯನ್ನ ಸೇರಿಕೊಳ್ಳಲಿದ್ದು, ಇದೇ ಡಿಸೆಂಬರ್ 3 ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ.

ಈ ಸಭೆ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಎಚ್‌.ವಿಶ್ವನಾಥ್‌ ಹಣಾಹಣಿಗೆ ವೇದಿಕೆ ನಿರ್ಮಿಸಿದಂತಾಗಲಿದೆ. ಸಮನ್ವಯ ಸಮಿತಿಗೆ ಎಚ್ ವಿಶ್ವನಾಥ್ ಸೇರ್ಪಡೆಗೆ ಈ ಹಿಂದೆ ಸಿದ್ದರಾಮಯ್ಯ ಅವರು ವಿರೊಧ ವ್ಯಕ್ತಪಡಿಸಿದ್ದರು.

ಸಿದ್ದರಾಮಯ್ಯ ಅವರ ನಡೆಗೆ ಬೇಸತ್ತು ವಿಶ್ವಾನಥ್ ಅವರು ಕಾಂಗ್ರೆಸ್ ತೊರೆದಿದ್ದರು. ಬಳಿಕ ವಿಶ್ವನಾಥ್ ಜೆಡಿಎಸ್ ಸೇರಿ ಕಡು ವೈರಿಗಳಂತೆ ಇಬ್ಬರು ಆರೋಪ-ಪ್ರತ್ಯಾರೋಪಗಳನ್ನ ಮಾಡುತ್ತಿದ್ದರು.

ಇದೀಗ ಸಮನ್ವಯ ಸಮಿತಿಗೆ ವಿಶ್ವನಾಥ್ ಸೇರ್ಪಡೆಯಿಂದ ಸಿದ್ದರಾಮಯ್ಯ ಇಕ್ಕಟ್ಟಿಗೆ ಸಿಲುಕಿದ್ದು, ವಿಶ್ವನಾಥ್ ಅವರನ್ನ ಸಭೆಯಲ್ಲಿಟ್ಟುಕೊಂಡು ಚರ್ಚೆ ನಡೆಸ್ತಾರಾ ಎನ್ನುವುದು ಮಾತ್ರ ಕುತೂಹಲ ಮೂಡಿಸಿದೆ.

ಆದ್ರೆ ಒಂದಂತೂ ನಿಜ ರಾಜಕೀಯದಲ್ಲಿ ಯಾರು ಕೂಡ ಶಾಶ್ವತವಾಗಿ ಮಿತ್ರರೂ ಅಲ್ಲ ಮತ್ತು ಶತ್ರುಗಳು ಅಲ್ಲ.

click me!