
ಬೆಂಗಳೂರು, (ನ.28): 'ಬಿಜೆಪಿ ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಸಿಎಂ ಮಾಡಬಲ್ಲದು...' ಎಂದು ಕೆಲವು ದಿನಗಳ ಹಿಂದೆ ಬಿಜೆಪಿಯ ಪ್ರಭಾಕರ್ ಕೋರೆ ನೀಡಿದ ಹೇಳಿಕೆ ಇದೀಗ ಮುನ್ನೆಲೆಗೆ ಬರುತ್ತಿದ್ದು, ರಾಜ್ಯ ರಾಜಕೀಯದ ಕೆಲವು ನಡೆಗಳು ವಿಪರೀತ ಕುತೂಹಲವನ್ನು ಹುಟ್ಟಿಸಿದೆ.
ಬಿ.ಎಸ್.ಯಡಿಯೂರಪ್ಪ ಸಿಂಗಂದೂರಿನ ಸೇತುವೆ ನೆಪದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಅಷ್ಟೇ ಆಲ್ಲ, ಕೆಲ ಹೊತ್ತು ಗುಪ್ತ ಮಾತುಕತೆ ನಡೆಸಿದ್ದು, ಆಗ ಸಂಬಂಧಿಸಿದ ಅಧಿಕಾರಿಗಳನ್ನು ಹೊರ ಕಳುಹಿಸಿದ್ದಾರೆನ್ನುವುದು ಹಲವು ಕುತೂಹಲಗಳಿಗೆ ಎಡೆ ಮಾಡಿ ಕೊಟ್ಟಿದೆ. ಅದೂ ಅಲ್ಲದೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಕೆಲವು ಅಮಸಾಧಾನಗಳನ್ನು ಕೆಲವರು ಹೊರ ಹಾಕಿದ್ದು, ಇದೀಗ ಈ ನಾಯಕರ ಭೇಟಿ ಮತ್ತಷ್ಟು ಕುತೂಹಲಗಳಿಗೆ ಕಾರಣವಾಗಿವೆ.
ಪ್ರವಾಸ ಭೇಟಿ ಮಾಡಿ ಬಿಎಸ್‌ವೈ ಭೇಟಿ:
ಯಾಕಂದ್ರೆ ಮೈತ್ರಿ ಸರ್ಕಾರ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರು ಹೈದರಾಬಾದ್ ಪ್ರವಾಸ ರದ್ದುಗೊಳಿಸಿ ದಿಢೀರ್ ಆಗಿ ಯಡಿಯೂರಪ್ಪ ಅವರನ್ನ ಭೇಟಿಯಾಗುದ್ದು, ರಾಜ್ಯ ರಾಜಕಾರಣದಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.
ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಯಡಿಯೂರಪ್ಪ ಅವರು ಡಿಕೆಶಿ ಭೇಟಿ ಮಾಡಿರುವುದು ಎಲ್ಲೋ ಒಂದು ಕಡೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮುನ್ನುಗ್ಗಿದಂತಿದೆ.
ಡಿಕೆಶಿ ಸಿಎಂ ಆಗ್ತಾರೆ ಎಂಬ ಪೇಪರ್ ಕಟಿಂಗ್ಸ್
ಹೌದು, ಭೇಟಿ ವೇಳೆ ಪ್ರಭಾಕರ್ ಕೊರೆ ಅವರು ತಾವು ಈ ಹಿಂದೆ ಹೇಳಿಕೆ ನೀಡಿದ್ದ ಡಿ.ಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂಬ ಪೇಪರ್ ಕಟಿಂಗ್ಸ್ ಡಿಕೆಶಿಗೆ ನೀಡಿದ್ದು, ಇದುಬಿಜೆಪಿ ಡಿಕೆಶಿಗೆ ಸಿಎಂ ಆಫರ್ ಕೊಟ್ಟಿರುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.
ಸಿಎಂ ಅನ್ನ ಕೆಳಗಿಳಿಸುವ, ಒಬ್ಬರನ್ನ ಸಿಎಂ ಮಾಡುವ ಶಕ್ತಿ ಬಿಜೆಪಿಗಿದೆ ಎಂದು ಈ ಹಿಂದೆ ಇದೇ ಪ್ರಭಾಕರ್ ಕೊರೆ ಹೇಳಿದ್ದರು.
ಇದೀಗ ಯಡಿಯೂರಪ್ಪ ಜೊತೆಗೆ ಡಿಕೆಶಿಯನ್ನು ದಿಢೀರ್ ಸೀಕ್ರೆಟ್ ಮಿಟಿಂಗ್ ಮಾಡಿರುವುದಂತೂ ಎಲ್ಲಾ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.