ಆಡಳಿತ ವಿರೋಧಿ ಅಲೆ: ಕೌನ್ ಬನೇಗಾ ಮುಖ್ಯಮಂತ್ರಿ

By Web DeskFirst Published Nov 27, 2018, 5:14 PM IST
Highlights

ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ರಾಜಸ್ಥಾನದಲ್ಲಿ ಆಡಳಿತ ವಿರೋಧ ಅಲೆ ಜೋರಾಗಿದೆ. ಆದ್ರೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ?

ಜೈಪುರ, [ನ .27]: ಪಂಚರಾಜ್ಯಗಳ ಚುನಾವಣೆ ದಿನದಿಂದ ದಿನಕ್ಕೆ ಪಕ್ಷಗಳ ಮೇಲಿರುವ ಒಲವು ಬದಲಾಗುತ್ತಿದೆ. ಅದರಲ್ಲೂ ರಾಜಸ್ಥಾನದಲ್ಲಿ ಬಿಜೆಪಿಯ ವಸುಂಧರಾ ರಾಜೆ ವಿರುದ್ಧ ಆಡಳಿತ ವಿರೋಧಿ ಅಲೆ ಬಹಿರಂಗವಾಗಿಯೇ ಕಾಣಿಸುತ್ತಿದೆ.

ಈಗಾಗಲೇ ರಾಜಸ್ಥಾನದಲ್ಲಿ ಹಲವು ನಾಯಕರು ಬಿಜೆಪಿ ತೊರೆದಿದ್ದು, ಕಾಂಗ್ರೆಸ್ ಪರ ಅಲೆ ಎದ್ದಿದೆ. ಆದರೆ ಕಾಂಗ್ರೆಸ್‌ನಿಂದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದೇ ಸ್ಪಷ್ಟವಾಗುತ್ತಿಲ್ಲ.

ಹಿರಿಯ ನಾಯಕರ ನೆಚ್ಚಿನ ಗೆಹ್ಲೋಟ್ ಮತ್ತು ಯುವಕರು ಇಷ್ಟಪಡುವ ಸಚಿನ್ ಪೈಲಟ್ ಇಬ್ಬರೂ ಮುಖ್ಯಮಂತ್ರಿ ಆಗುವ ಆಸೆಯಿಂದ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದು, ಡಿಸೆಂಬರ್ 11ರ ಸಂಜೆ ಈ ಪ್ರಶ್ನೆಗೆ ಉತ್ತರವನ್ನು ರಾಹುಲ್ ಕಂಡುಹಿಡಿಯಬೇಕಿದೆ.

ಮಧ್ಯಪ್ರದೇಶದಲ್ಲೂ ಕೂಡ ಅದೇ ಪರಿಸ್ಥಿತಿ ಇದೆ.  ಜ್ಯೋತಿರಾದಿತ್ಯರನ್ನು ಸಿಎಂ ಮಾಡಲು ರಾಹುಲ್ ಒಲವು ಹೊಂದಿದ್ದರೂ ಪರಿಸ್ಥಿತಿ ಮಾತ್ರ ಕಮಲನಾಥ್ ಕಡೆಗೆ ವಾಲುತ್ತಿದೆ. 

ಟಿಕೆಟ್ ಹಂಚಿಕೆ, ಪ್ರಚಾರ, ದುಡ್ಡು, ತಂತ್ರಗಾರಿಕೆ ಎಲ್ಲವನ್ನೂ ನೋಡಿಕೊಳ್ಳುತ್ತಿರುವ ಕಮಲನಾಥ್ ಪರವಾಗಿ ದಿಗ್ವಿಜಯ್ ಸಿಂಗ್ ಕೂಡ ಇದ್ದಾರೆ.

 ಅಹ್ಮದ್ ಪಟೇಲ್, ಗುಲಾಂ ನಬಿ, ವೀರಪ್ಪ ಮೊಯ್ಲಿ ಕೂಡ ಅಧಿಕಾರ ಬಂದರೆ ಕಮಲನಾಥ್ ಕಾರಣದಿಂದ ಎಂದು ಈಗಲೇ ಹೇಳುತ್ತಿದ್ದಾರೆ. 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

click me!