ದೇವದುರ್ಗ: ಜೆಡಿಎಸ್‌ ಪ್ರಚಾರ ವಾಹನ ಜಖಂಗೊಳಿಸಿದ ಬಿಜೆಪಿ ಕಾರ್ಯಕರ್ತರು!

Published : May 05, 2023, 10:38 AM ISTUpdated : May 05, 2023, 10:55 AM IST
ದೇವದುರ್ಗ: ಜೆಡಿಎಸ್‌ ಪ್ರಚಾರ ವಾಹನ ಜಖಂಗೊಳಿಸಿದ ಬಿಜೆಪಿ ಕಾರ್ಯಕರ್ತರು!

ಸಾರಾಂಶ

ಪಟ್ಟಣದ ಬಸ್‌ನಿಲ್ದಾಣ ಬಳಿ ಪ್ರಚಾರ ಮಾಡುತ್ತಿದ್ದ ಜೆಡಿಎಸ್‌ ಪ್ರಚಾರ ವಾಹನವನ್ನು ಕೆಲ ಬಿಜೆಪಿ ಕಾರ್ಯಕರ್ತರು ಜಖಂಗೊಳಿಸಿದ ಘಟನೆ ಗುರುವಾರ ಜರುಗಿದೆ.  ಜಖಂಗೊಂಡ ವಾಹನ ಸಮೇತ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ದೇವದುರ್ಗ (ಮೇ.5):  ಈ ಕ್ಷೇತ್ರದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಸಾಕಷ್ಟುಅಭಿವೃದ್ಧಿ ಮಾಡಿದ್ದಾರೆ. ಎಜ್ಯುಕೇಶನ್‌ ಲೇಔಟ್‌, ಮೆಡಿಕಲ್‌, ಎಂಜನಿಯರಿಂಗ್‌ ಸೇರಿದಂತೆ ಮೂಲ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಕಲ್ಪಿಸಿದ್ದಾರೆ. ಫ್ರತಿಫಲವಾಗಿ ಈ ಕ್ಷೇತ್ರದ ಮತದಾರರು ಈಗಾಗಲೇ ನಾಲ್ಕು ಬಾರಿ ಶಾಸಕರನ್ನಾಗಿ ಆರಸಿದ್ದು, 5ನೇ ಬಾರಿ ಗೆಲುವಿಗಾಗಿ ಅವ​ರಿಗೆ ಮತ ಹಾಕುವ ಮೂಲಕ ಅಭಿವೃದ್ಧಿಗೆ ಪೋ›ತ್ಸಾಹಿಸಬೇಕೆಂದು ನಟ ಸುದೀಪ ಮನವಿ ಮಾಡಿದರು.

ಖ್ಯಾತ ಚಲನಚಿತ್ರನಟ ಸುದೀಪ್‌, ದೇವದುರ್ಗವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡನಾಯಕ ಪರ ಗುರುವಾರ ಮತಯಾಚನೆ ಮಾಡಿದರು. ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಬೃಹತ್‌ ರೋಡ್‌ ಶೋ ಮೂಲಕ ಕೆ.ಶಿವನಗೌಡ ನಾಯಕರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

Kichcha Sudeep: ಮಾನ್ವಿಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ಗೆಲ್ಲುತ್ತೆ: ಕಿಚ್ಚ

ಈ ಸಂದರ್ಭದಲ್ಲಿ ಶಾಸಕ ಕೆ.ಶಿವನಗೌಡ ನಾಯಕ, ವಿಧಾನಪರಿಷತ್‌ ಸದಸ್ಯ ಚಲವಾದಿ ನಾರಾಯಣಸ್ವಾಮಿ, ಮುಖಂಡರಾದ ತ್ರಿವಿಕ್ರಮ ಜೋಷಿ, ಅಮರೇಶ ಬನಹಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಜಂಬಣ್ಣ ನಿಲೊಗಲ್‌ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

ಪಟ್ಟಣಕ್ಕೆ ಚಲನ ಚಿತ್ರನಟ ಸುದೀಪ್‌ ಆಗಮಿಸುತ್ತಿದ್ದಂತೆಯೇ ಅವರ ಅಭಿಮಾನಿಗಳು ಏಕಾಏಕಿ ಹೆಲಿಪ್ಯಾಡ್‌ಗೆ ನುಗ್ಗಿದ್ದರಿಂದ ಪೊಲೀಸರು, ಮಿಲಿಟರಿ ಪಡೆ ಲಘು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ ಘಟನೆ ಜರುಗಿತು.

ಜೆಡಿಎಸ್‌ ಪ್ರಚಾರ ವಾಹನ ಜಖಂಗೊಳಿಸಿದ ಬಿಜೆಪಿ ಕಾರ್ಯಕರ್ತರು  

ಪಟ್ಟಣದ ಬಸ್‌ನಿಲ್ದಾಣ ಬಳಿ ಪ್ರಚಾರ ಮಾಡುತ್ತಿದ್ದ ಜೆಡಿಎಸ್‌ ಪ್ರಚಾರ ವಾಹನ(JDS Campaing vehicle)ವನ್ನು ಕೆಲ ಬಿಜೆಪಿ ಕಾರ್ಯಕರ್ತರು ಜಖಂಗೊಳಿಸಿದ ಘಟನೆ ಗುರುವಾರ ಜರುಗಿದೆ.

ಡಾ.ಅಂಬೇಡ್ಕರ್‌ ವೃತ್ತದಿಂದ ಚಲನಚಿತ್ರ ನಟ ಸುದೀಪ್‌ ರೋಡ್‌ ಶೋ ಪ್ರಾರಂಭಗೊಂಡ ಬಳಿಕ, ಬಿಜೆಪಿ ಕಾರ್ಯಕರ್ತರು ಬಸ್‌ನಿಲ್ದಾಣ ಮಾರ್ಗವಾಗಿ ಸಾರ್ವಜನಿಕ ಕ್ಲಬ್‌ ಆವರಣಕ್ಕೆ ಹೋಗುತ್ತಿರುವ ವೇಳೆ ಈ ಘಟನೆ ಜರುಗಿದೆ ಎನ್ನಲಾಗಿದೆ.

Karnataka election 2023: ಮಾನ್ವಿಗಿಂದು ಮಾಜಿ ಸಿಎಂ ಸಿದ್ದರಾಮಯ್ಯ: ಬೋಸ​ರಾ​ಜು

ಕಿಡಿಗೇಡಿಗಳು ಜೆಡಿಎಸ್‌ ಅಭ್ಯರ್ಥಿ ಕರೆಮ್ಮ ಜಿ.ನಾಯಕ ಮತ್ತು ಪಕ್ಷದ ಹಿರಿಯ ಮುಖಂಡರ ಭಾವಚಿತ್ರ ಇರುವ ಬ್ಯಾನರ್‌ನ್ನು ಹರಿದಿದ್ದು, ಪ್ರಚಾರಕ್ಕೆ ಕಟ್ಟಲಾಗಿದ್ದ ಮೈಕ್‌ನ್ನು ಕಲ್ಲಿನಿಂದ ಜಖಂಗೊಳಿಸಿದ್ದಾರೆ. ಜೆಡಿಎಸ್‌ ಮುಖಂಡರು ಜಖಂಗೊಂಡ ವಾಹನ ಸಮೇತ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್