ಸಿದ್ದರಾಮಯ್ಯ ಕಣ್ಣಿಟ್ಟಿರುವ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಅಬ್ಬರದ ಪ್ರಚಾರ

Published : Apr 09, 2023, 08:06 PM IST
ಸಿದ್ದರಾಮಯ್ಯ ಕಣ್ಣಿಟ್ಟಿರುವ ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಅಬ್ಬರದ ಪ್ರಚಾರ

ಸಾರಾಂಶ

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಅಂತಿಮವಾಗಿಲ್ಲ.  ಕಳೆದ ಬಾರಿ 45 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿರುವ ಜೆಡಿಎಸ್ ಪಕ್ಷ ಮಾತ್ರ ಒಂದೂ ಕ್ಷಣವೂ ಕಾಲಾಹರಣ ಮಾಡದೇ ನಿರಂತರ ಪ್ರಚಾರದ ಜೊತೆಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡ್ತಿದ್ದಾರೆ.

ವರದಿ : ದೀಪಕ್ ,ಏಷಿಯಾನೆಟ್ ಸುವಣ೯ ನ್ಯೂಸ್ 

ಕೋಲಾರ (ಏ.9): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಅರ್ಜಿ ಕೋಲಾರದಲ್ಲಿ ಹಾಕಿ ಸ್ಫರ್ಧೆ ಮಾಡ್ತಾರೆ ಅಂತ ಒಂದೂ ಕಡೆ ಕಾಂಗ್ರೆಸ್ ನ ಕಾರ್ಯಕರ್ತರು ಕಾದು ಕುಳಿತ್ತಿದ್ದಾರೆ. ಸಾಕಷ್ಟೂ ನಿರೀಕ್ಷೆಗಳನ್ನು ಇಟ್ಕೊಂಡು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿರುವ ಅಹಿಂದಾ ಮತದಾರರನ್ನು ನಂಬಿ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವ ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಅದ್ಯಾಕೋ ಎರಡನೇ ಪಟ್ಟಿ   ಘೋಷಣೆ ಮಾಡೋದಕ್ಕೆ ತಡ ಮಾಡ್ತಿದೆ. ಹೀಗಾಗಿ ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಈ ಬೆಳವಣಿಗೆ ನಿರಾಸೆ ಮೂಡಿಸಿದ್ದು ಸಿದ್ದರಾಮಯ್ಯ ಸ್ಪರ್ಧೆಗಾಗಿ ಕಾದು ಕುಳಿತಿದ್ದಾರೆ.

ಇನ್ನು ಸಿದ್ದರಾಮಯ್ಯ ನವರನ್ನು ಹೊರತು ಪಡಿಸಿ ಉಳಿದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಕಥೆಯಂತು ಟಿಕೆಟ್ ನೀಡಿದ್ರು ಕೆಲಸ ಮಾಡುವ ಹುಮ್ಮಸು ಇಲ್ಲ. ಸಿದ್ದರಾಮಯ್ಯನವರಿಗೆ ಟಿಕೆಟ್ ನೀಡದೇ ಬೇರೆ ಯಾರಿಗೆ ಆದ್ರೂ ಬಿ ಫಾರಂ ನೀಡಿದ್ರು ಇಲ್ಲಿರುವ ಬಣ ರಾಜಕೀಯದ ಜೊತೆ ಕಾರ್ಯಕರ್ತರನ್ನು  ಒಗ್ಗೂಡಿಸಿಕೊಂಡು ಕೆಲಸ ಆರಂಭ ಮಾಡುವ ವೇಳೆಗೆಲ್ಲಾ ಚುನಾವಣೆನೇ ಮುಗಿದು ಹೋಗುತ್ತೆ ಅಂತ ನಿರಾಸಕ್ತಿ ತೋರಿಸುತ್ತಿದ್ದಾರೆ.

ಹೀಗಿದ್ರೂ ಸಹ ಕಳೆದ ಬಾರಿ 45 ಸಾವಿರ ಮತಗಳ ಅಂತರದಲ್ಲಿ ಜಯ ಗಳಿಸಿರುವ ಜೆಡಿಎಸ್ ಪಕ್ಷ ಮಾತ್ರ ಒಂದೂ ಕ್ಷಣವೂ ಕಾಲಾಹರಣ ಮಾಡದೇ ನಿರಂತರ ಪ್ರಚಾರದ ಜೊತೆಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡ್ತಿದ್ದಾರೆ. ಈಗಾಗಲೇ ಜೆಡಿಎಸ್ ಪಕ್ಷದ ಅಭ್ಯರ್ಥಿ ಶ್ರೀನಾಥ್ ಒಂದೂ ಸುತ್ತಿನ ಪ್ರವಾಸ ಮುಗಿಸಿ ಎರಡನೇ ಸುತ್ತಿನ ಪ್ರವಾಸ ಆರಂಭ ಮಾಡುವ ಮೂಲಕ ಮನೆ ಮನೆಗ ತೆರಳಿ ಮತಯಾಚನೆ ಮಾಡ್ತಿದ್ದಾರೆ. ಮತದಾರರಿಗೆ ಜೆಡಿಎಸ್ ನ ಪಂಚರತ್ನಾ ಕಾರ್ಯಕ್ರಮದ ಜೊತೆ ಜೊತೆ ಸ್ಥಳೀಯವಾಗಿ ಏನೆಲ್ಲಾ ಅಭಿವೃದ್ದಿ ಕಾಯ೯ ಮಾಡ್ತೇವೆ ಅಂತ ಶ್ರೀನಾಥ್ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮತಯಾಚನೆ ಮಾಡ್ತಿದ್ದಾರೆ.

ಅಂತೂ ಇಂತು ಅಂತ್ಯಗೊಂಡ ಅಭ್ಯರ್ಥಿ ಆಯ್ಕೆ ಸಭೆ, ಬಿಜೆಪಿ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

ಜೆಡಿಎಸ್ ಅಭ್ಯರ್ಥಿ ಶ್ರೀನಾಥ್ ಅವರ ಪತ್ನಿ ಭವ್ಯಾ ಹಾಗೂ ಕುಟುಂಬಸ್ಥರಿಂದಲೂ ಬಿರುಸಿನ ಪ್ರಚಾರ!
ಒಂದೂ ಕಡೆ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ದ ಶ್ರೀನಾಥ್ ಅಬ್ಬರದ ಪ್ರಚಾರ ಮಾಡ್ತಿದ್ರೆ ಮತ್ತೊಂದು ಕಡೆ ಶ್ರೀನಾಥ್ ಅವರ ಪತ್ನಿ ಭವ್ಯಾ ಅವರು ಸಹ ಪತಿಯ ಪರವಾಗಿ ಮತಯಾಚನೆ ಮಾಡ್ತಿದ್ದು,ಮಹಿಳಾ ಮತದಾರರನ್ನು ಸೆಳೆಯುತ್ತಿದ್ದಾರೆ. ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಪತಿಯ ಪರವಾಗಿ ಕಳೆದ 10 ದಿನಗಳಿಂದ ಮತಯಾಚನೆ ಮಾಡ್ತಿದ್ದು,ಸಾಕಷ್ಟೂ ಭರವಸೆ ನೀಡುತ್ತಾ ಬತಿ೯ದ್ದಾರೆ .ಶ್ರೀನಾಥ್ ಅವರ ಇಡೀ ಕುಟುಂಬವೇ ಪ್ರಚಾರದಲ್ಲಿ ಮುಳುಗಿದ್ದು, ಕಳೆದ ಬಾರಿ 45 ಸಾವಿರ ಮತಗಳ ಅಂತರದಲ್ಲಿ ಜೆಡಿಎಸ್  ಗೆದ್ದಿರುವ ಮಾದರಿಯಲ್ಲಿ ಈ ಬಾರಿಯೂ ಗೆಲ್ಲಬೇಕು ಅಂತ ಪಣತೊಟ್ಟಿದ್ದಾರೆ.

ಕರ್ನಾಟಕದಲ್ಲಿ ಗುಜರಾತ್ ಮಾಡೆಲ್‌ ಗೆ ವಿರೋಧ, ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ನಾಯಕರ ಸೆಡ್ಡು!

ಇನ್ನು ಭ್ಯವ್ಯಾ ಶ್ರೀನಾಥ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಂಚರತ್ನ ಕಾರ್ಯಕ್ರಮದ ಪ್ರಚಾರದ ಜೊತೆ ಕೋವಿಡ್ ಸಂದರ್ಭದಿಂದಲೂ ನನ್ನ ಪತಿ ಶ್ರೀನಾಥ್ ಮಾಡಿರುವ ಸಮಾಜಮುಖಿ ಕಾರ್ಯಕ್ರಮಗಳು ಈ ಬಾರಿ ನಮ್ಮನ್ನು ಕೈ ಹಿಡಿಯಲಿದೆ, ಕೋಲಾರದಲ್ಲಿ ಯಾರೇ ಸ್ಪರ್ಧೆ ಮಾಡಿದ್ರು ಪರವಾಗಿಲ್ಲ ನಮಗೆ ಇಲ್ಲಿ ಯಾರು ಎದುರಾಳಿ ಇಲ್ಲ, ಕೋಲಾರ ಜೆಡಿಎಸ್ ಭದ್ರಕಟೆ ಅಂತ ತಿಳಿಸಿದ್ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ - ಸಿಎಂ ಡಿಸಿಎಂ