ಕಾಂಗ್ರೆಸ್‌ಗೆ ಸೆಡ್ಡುಹೊಡೆದು ಬಿಜೆಪಿ ಸೇರಿದ ನಾಗರಾಜ್‌ ಛಬ್ಬಿ: ಸಂತೋಷ್‌ ಲಾಡ್‌ಗೆ ಪೈಪೋಟಿ

By Sathish Kumar KH  |  First Published Apr 9, 2023, 6:10 PM IST

ಕಲಘಟಗಿ ವಿಧಾನಸಭೆಯ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ ನಡೆಸಿದರೂ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಮಾಜಿ ಶಾಸಕ ನಾಗರಾಜ್‌ ಛಬ್ಬಿ ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.


ಬೆಂಗಳೂರು (ಏ.09): ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ಗೆ ಭರ್ಜರಿ ಪೈಪೋಟಿ ನಡೆಸಿದರೂ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಮಾಜಿ ಶಾಸಕ ನಾಗರಾಜ್‌ ಛಬ್ಬಿ ಅವರು ಇಂದು ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.

ಹಲವು ವರ್ಷಗಳಿಂದ ಕಾಂಗ್ರೆಸ್‌ಗಾಗಿ ಕಾರ್ಯಕರ್ತನಾಗಿ, ಮುಖಂಡನಾಗಿ ಕೆಲಸ ಮಾಡದರೂ ನನಗೆ ಕಾಂಗ್ರೆಸ್ ಟಿಕೆಟ್‌ ನೀಡದೇ ವಂಚನೆ ಮಾಡಲಾಗಿದೆ. ಇದಕ್ಕೆ ನಾನು ಕಾಂಗ್ರೆಸ್‌ಗೆ ತಕ್ಕ ಪಾಠವನ್ನು ಕಲಿಸುತ್ತೇನೆ ಎಂದು ಸವಾಲು ಹಾಕಿದ್ದ ನಾಗರಾಜ್‌ ಛಬ್ಬಿ ಅವರು ಇಂದು ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿಯ ಕಮಲವನ್ನು ಮುಡಿದಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಕುರಿತಂತೆ ಬಿಜೆಪಿ ಹೈಕಮಾಂಡ್‌ನೊಂದಿಗೆ ರಾಜ್ಯದ ನಾಯಕರು ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದ್ದಾರೆ.

Latest Videos

undefined

ಮಾಜಿ ಡಿಸಿಎಂ ಪರಮೇಶ್ವರ್ ಸ್ವಕ್ಷೇತ್ರದ ಬರೋಬ್ಬರಿ 13 ಗ್ರಾಮದಿಂದ ಮತದಾನ ಬಹಿಷ್ಕಾರ!

ಮುಖ್ಯಮಂತ್ರಿ ಕಾಲಿಗೆ ಬಿದ್ದು ಆಶಿರ್ವಾದ: ವಿಧಾನಸಭಾ ಟಿಕೆಟ್‌ ಹಂಚಿಕೆ ಕುರಿತ ಸಭೆ ನಡೆಸಲು ರಾಜ್ಯ ನಾಯಕರು ಬೀಡು ಬಿಟ್ಟ ದೆಹಲಿಗೇ ತೆರಳಿದ ಮಾಜಿ ಶಾಸಕ ನಾಗರಾಜ್‌ ಛಬ್ಬಿ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಸಚಿವ ಗೋವಿಂದ್‌ ಕಾರಜೋಳ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಸಿಎಂ ಬೊಮ್ಮಾಯಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು.

ದೆಹಲಿಯಲ್ಲೇ ಬಿಜೆಪಿ ಸೇರಿದ ಛಬ್ಬಿ:  ಹುಬ್ಬಳ್ಳಿ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಟಿಕೆಟ್‌ ನೀಡುವಂತೆ ಪೈಪೋಟಿ ನಡೆಸಿ ಹಲವು ನಾಯಕರನ್ನು ಭೇಟಿ ಮಾಡಿದರೂ ಉಪಯೋಗ ಆಗಲಿಲ್ಲ. ತಾನು ಇಷ್ಟು ವರ್ಷ ಕಾಂಗ್ರೆಸ್‌ ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದರೂ ತಮ್ಮ ಸೇವೆಗೆ ಬೆಲೆ ಸಿಗುತ್ತಿಲ್ಲ ಎಂದು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಇನ್ನು ಬಿಜೆಪಿಯಿಂದ ಟಿಕೆಟ್‌ ಪಡೆಯಲು ಲಾಭಿ ನಡೆಸಿದ್ದು, ಒಂದು ವೇಳೆ ಟಿಕೆಟ್‌ ಕೊಟ್ಟರೆ ಸಂತೋಷ್‌ ಲಾಡ್‌ ವಿರುದ್ಧವೇ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ. ಇನ್ನು ನಾಗರಾಜಕ್‌ ಛಬ್ಬಿಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಕೂಡ ಸಾಥ್‌ ನೀಡಲಿದ್ದು, ಬಿಜೆಪಿ ಟಿಕೆಟ್‌ ಕೊಟ್ಟರೆ ಗೆಲ್ಲುತ್ತೇನೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಟಿಕೆಟ್‌ ತಪ್ಪಿಸಿದ ಸಿದ್ದರಾಮಯ್ಯ: ಇನ್ನು ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ನಡೆಯುತ್ತಿರುವುದು ಬೂದಿಯಲ್ಲಿ ಮುಚ್ಚಿಟ್ಟ ಕೆಂಡದಷ್ಟೇ ಸತ್ಯವಾಗಿದೆ. ಆದರೆ, ಆಗಿಂದಾಗ್ಗೆ ಹೊಗೆ ಆಡುತ್ತಿದ್ದರೂ ಬೆಂಕಿ ಹೊತ್ತಿಕೊಳ್ಳದಂತೆ ಕಾಂಗ್ರೆಸ್‌ ನಾಯಕರು ಅದನ್ನು ತಡೆಯುತ್ತಿದ್ದಾರೆ. ಇನ್ನು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ನಡುವೆ ಬಣ ರಾಜಕೀಯ ನಡೆಯುತ್ತಿದ್ದು, ಟಿಕೆಟ್‌ ಪಡೆಯುವ ನಿಟ್ಟಿನಲ್ಲಿ ಪೈಪೋಟಿಯನ್ನೂ ಮಾಡಲಾಗುತ್ತಿತ್ತು. ಇನ್ನು ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಬಣದಲ್ಲಿ ಗುರತಿಸಿಕೊಂಡಿದ್ದ ಸಂತೋಷ್‌ ಲಾಡ್‌ಗೆ ಟಿಕೆಟ್‌ ನೀಡಲಾಗಿದೆ.  ಆದರೆ, ಡಿ.ಕೆ. ಶಿವಕುಮಾರ್‌ ಬಳಗದಲ್ಲಿ ಕಾಣಿಸಿಕೊಂಡಿದ್ದ ನಾಗರಾಜ್‌ ಛಬ್ಬಿಗೆ ಟಿಕೆಟ್‌ ಸಿಕ್ಕಿಲ್ಲ. ಇದರಿಂದ ಆಕ್ರೋಶಗೊಂಡು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.

ಅಂತೂ ಇಂತು ಅಂತ್ಯಗೊಂಡ ಅಭ್ಯರ್ಥಿ ಆಯ್ಕೆ ಸಭೆ, ಬಿಜೆಪಿ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

ಕಾಂಗ್ರೆಸ್‌ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ: ದೆಹಲಿಗೆ ಹೋಗುವ ಮುನ್ನವೇ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಕೊಡುವ ಬಗ್ಗೆ ಮಾಜಿ ಶಾಸಕ ನಾಗರಾಜ್‌ ಛಬ್ಬಿ ನಿರ್ಧಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಇನ್ನು ಪತ್ರದಲ್ಲಿ "ಕಾಂಗ್ರೆಸ್‌ ಪಕ್ಷದಲ್ಲಿ ಆಗು - ಹೋಗುಗಳ ಬಳೆವಣಿಗೆಗಳ ಬಗ್ಗೆ ಮನನೊಂದು ನನ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇನೆ" ಎಂದು ಬರೆದಿದ್ದಾರೆ. 

click me!