ಕರ್ನಾಟಕದಲ್ಲಿ ಗುಜರಾತ್ ಮಾಡೆಲ್‌ ಗೆ ವಿರೋಧ, ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ನಾಯಕರ ಸೆಡ್ಡು!

Published : Apr 09, 2023, 06:19 PM IST
ಕರ್ನಾಟಕದಲ್ಲಿ ಗುಜರಾತ್ ಮಾಡೆಲ್‌ ಗೆ ವಿರೋಧ, ಬಿಜೆಪಿ ಹೈಕಮಾಂಡ್‌ಗೆ ರಾಜ್ಯ ನಾಯಕರ ಸೆಡ್ಡು!

ಸಾರಾಂಶ

ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಬೇಕಾ? ಕರ್ನಾಟಕದಲ್ಲಿ ಪತ್ಯೇಕ ಮಾದರಿ ಮಾಡಿ ಎಂದು ಕರ್ನಾಟಕ ಬಿಜೆಪಿ ನಾಯಕರು ಒತ್ತಾಯ ಮಾಡಿದ್ದಾರೆ.  ಗುಜರಾತ್ ಮತ್ತು ಯುಪಿ ಮಾಡೆಲ್ ಪ್ರಸ್ತಾಪಕ್ಕೆ ಕರ್ನಾಟಕ ನಾಯಕರು ಅಸಮ್ಮತಿ ಸೂಚಿಸಿದ್ದಾರೆ.

ಬೆಂಗಳೂರು (ಏ.9): ಕರ್ನಾಟಕದಲ್ಲಿ ಬಿಜೆಪಿ ಗೆಲ್ಲಬೇಕಾ? ಕರ್ನಾಟಕದಲ್ಲಿ ಪತ್ಯೇಕ ಮಾದರಿ ಮಾಡಿ ಎಂದು ಕರ್ನಾಟಕ ಬಿಜೆಪಿ ನಾಯಕರು ಒತ್ತಾಯ ಮಾಡಿದ್ದಾರೆ. ಕೇಂದ್ರ ಬಿಜೆಪಿ ವರಿಷ್ಟರ ಜೊತೆಗೆ ನಡೆದ 15 ಗಂಟೆಗಳ ಕಾಲದ ಸುದೀರ್ಘ ಸಭೆಯಲ್ಲಿ ಕರ್ನಾಟಕ ಮುಖಂಡರು ಈ ಒತ್ತಾಯ ಮಾಡಿದ್ದಾರೆ. ಮಾತ್ರವಲ್ಲ ಗುಜರಾತ್ ಮತ್ತು ಯುಪಿ ಮಾಡೆಲ್ ಪ್ರಸ್ತಾಪಕ್ಕೆ ಕರ್ನಾಟಕ ನಾಯಕರು ಅಸಮ್ಮತಿ ಸೂಚಿಸಿದ್ದಾರೆ. ಗುಜರಾತ್ ಮತದಾನ ವಿಧಾನ ಬೇರೆ, ಕರ್ನಾಟಕ ಮತದಾನ ವಿಧಾನ ಬೇರೆ. ಪ್ರತಿ ಎರಡು ಜಿಲ್ಲೆಗೂ ಒಂದೊಂದು ಹೊಸ ಪ್ಯಾಟರ್ನ್ ಇದೆ. ಹಾಗಾಗಿ ಸ್ಥಳೀಯ ಲೆಕ್ಕಾಚಾರಕ್ಕೆ ಆದ್ಯತೆ ನೀಡಿ ಎಂದು ಆಗ್ರಹಿಸಿದ್ದಾರೆ.

ಚುನಾವಣಾ ಉಸ್ತುವಾರಿ, ರಾಜ್ಯ ಉಸ್ತುವಾರಿ ಗಳಿಗೆ ಹಿರಿಯ ಮುಖಂಡರು ಖುದ್ದಾಗಿ ವಿವರಣೆ ನೀಡಿದ್ದಾರೆ. ಸಂಸದೀಯ ಮಂಡಳಿಯಲ್ಲಿ ನಿರ್ಣಯ ಅಂತಿಮ. ಈ ಕುರಿತು ಅಲ್ಲೇ ತೀರ್ಮಾನ ವಾಗಲಿದೆ ಎಂದು ಉಸ್ತುವಾರಿಗಳು ಹೇಳಿದ್ದಾರೆ. ಗುಜರಾತ್ ಮಾಡಲ್ ಬಂದ್ರೆ ಬಹುತೇಕ ಹಾಲಿ ಶಾಸಕರಿಗೆ ತೊಂದರೆಯಾಗಲಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಆಯ್ಕೆಯಾಗಿರುವ ಶಾಸಕರಿಗೆ ಮತ್ತೆ ಟಿಕೆಟ್ ಸಿಗೋದು ಕಷ್ಟವಿದೆ.

ಬಿಜೆಪಿಗೂ ತಟ್ಟಿದ ಕುಟುಂಬ ಕಗ್ಗಂಟು!
ಕುಟುಂಬ ಕಗ್ಗಂಟು ಬಿಜೆಪಿಗೂ ತಟ್ಟಿದೆ. ಈ ಕಗ್ಗಂಟು ಬಿಡಿಸಲು ಮೋದಿ ಅವರಿಗೆ ಮೊರೆ ಇಡಲಾಗಿದೆ. ಈ ಕಗ್ಗಂಟು ಬಿಡಸದ ಹೊರತು ಟಿಕೆಟ್ ಅಂತಿಮಗೊಳಿಸುವುದು ಕಷ್ಟ. ಈ ತೀರ್ಮಾನದ ಹಿಂದೆ ಹತ್ತಾರು ಹೊಸ ಮುಖಗಳ ಭವಿಷ್ಯ ಅಡಗಿದೆ. ತಂದೆ-ಮಗ, ಸಹೋದರರು, ಇದರಲ್ಲಿ ಯಾವುದಕ್ಕೆ ಕೋಕ್ ಕೊಡಲಾಗುತ್ತದ ಎನ್ನುವುದು ಹೈಕಮಾಂಡ್ ಈಗ ವಿವರಿಸಬೇಕಿದೆ. ಪಾಲಿಸಿ ಮ್ಯಾಟರ್ ಆಗಿ ಈಗ ತೀರ್ಮಾನ ಮಾಡಬೇಕಿದೆ. ಹಾಲಿ ಹಲವು ಶಾಸಕರು, ಸಚಿವರು ತಮ್ಮ ಮಕ್ಕಳಿಗೆ ಟಿಕೆಟ್ ಕೇಳಿದ್ದಾರೆ. ಸಂಸದರ ಮಕ್ಕಳೂ ಟಿಕೆಟ್ ಕೇಳಿದ್ದಾರೆ. ಈ ಎಲ್ಲದಕ್ಕೂ ಉತ್ತರ ಬಿಜೆಪಿ ಪಟ್ಟಿ ರಿಲೀಸ್ ಆದ ಬಳಿಕವಷ್ಟೇ ತಿಳಿಯಲಿದೆ.

ಅಂತೂ ಇಂತು ಅಂತ್ಯಗೊಂಡ ಅಭ್ಯರ್ಥಿ ಆಯ್ಕೆ ಸಭೆ, ಬಿಜೆಪಿ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್?
ಕೇಂದ್ರ ಬಿಜೆಪಿ ವರಿಷ್ಠರ ಜೊತೆಗಿನ ರಾಜ್ಯ ಬಿಜೆಪಿ ನಾಯಕರ ಸಭೆ 2 ದಿನಗಳ ಬಳಿಕ ಅಂತ್ಯಗೊಂಡಿದೆ.  ಬಿಜೆಪಿ ಮೊದಲ ಪಟ್ಟಿ ಬಿಡುಗಡೆಗೆ ನಾಳೆಯೇ ಮುಹೂರ್ತ ಇಡಲಾಗಿದೆಯಂತೆ. ಮೊದಲ ಪಟ್ಟಿಯಲ್ಲಿ ಸುಮಾರು 150 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಗೆ  ಬಿಜೆಪಿ ಸಿದ್ದಗೊಂಡಿದೆ ಎನ್ನಲಾಗಿದೆ.  ಇಂದು ಸಂಜೆ  ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆಯೋ ಸಭೆಯಲ್ಲಿ ಅಂತಿಮ ತಿರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಇಂದು ಸಂಜೆ 5 ಗಂಟೆ ಯ ಬಳಿಕ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸಭೆಯ ನಂತರ ಇಂದು ತಡ ರಾತ್ರಿ ಅಥವಾ ನಾಳೆ ಬೆಳಿಗ್ಗೆ ಮೊದಲ ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದೆ.

ಸಗಣಿ ಬಾಚೋ ತಾಯಂದಿರಿಗೆ 5 ರೂ ಸಬ್ಸಿಡಿ ನೀಡಿದ್ದೇವೆ : ಸಿಟಿ ರವಿ

ಏಪ್ರಿಲ್‌ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್‌ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ
20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ