ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸದೆ ಕೇವಲ ಅಧಿಕಾರದ ಆಸೆಗಾಗಿ ಜೆಡಿಎಸ್ ಕೋಮುವಾದಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಈಗ ಎರಡೂ ಪಕ್ಷಗಳೂ ರಾಜ್ಯದ ಜನರನ್ನು ಮತ್ತೊಮ್ಮೆ ಏಮಾರಿಸಲು ಮುಂದಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಟೀಕಿಸಿದರು.
ಕೋಲಾರ (ಏ.11): ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸದೆ ಕೇವಲ ಅಧಿಕಾರದ ಆಸೆಗಾಗಿ ಜೆಡಿಎಸ್ ಕೋಮುವಾದಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಈಗ ಎರಡೂ ಪಕ್ಷಗಳೂ ರಾಜ್ಯದ ಜನರನ್ನು ಮತ್ತೊಮ್ಮೆ ಏಮಾರಿಸಲು ಮುಂದಾಗಿವೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಟೀಕಿಸಿದರು. ತಾಲೂಕಿನ ಕ್ಯಾಲನೂರಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ವಿ ಗೌತಮ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಜೆಡಿಎಸ್ ಹೆಸರಿಗೆ ಮಾತ್ರ ಜಾತ್ಯತೀತ ಪಕ್ಷವಾಗಿದ್ದು, ಮತದಾರರನ್ನು ಇಷ್ಟು ವರ್ಷ ಏಮಾರಿಸಿದ್ದು ಸಾಕು. ಮತದಾರರು ಇನ್ನೂ ಮುಂದೆಯಾದರೂ ಎಚ್ಚರಿಕೆ ವಹಿಸಬೇಕು ಎಂದು ಕೋರಿದರು.
ಕೇಂದ್ರ ಭರವಸೆಗೆ ಸೀಮಿತ: ಜೆಡಿಎಸ್ ಮತ್ತು ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು ಎಲ್ಲ ಜಾತಿ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾಂಗ್ರೆಸ್ ಅನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಕೆ.ವಿ ಗೌತಮ್ ಅವರನ್ನು ಗೆಲ್ಲಿಸಬೇಕು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕಳೆದ ಹತ್ತು ವರ್ಷಗಳಿಂದ ದೇಶದ ಜನರನ್ನು ಕೇವಲ ಭರವಸೆಗಳನ್ನು ಅಷ್ಟೇ ನೀಡಿದ್ದಾರೆ ಅವುಗಳನ್ನು ಜಾರಿ ಮಾಡಿಲ್ಲ ಎಂದು ಆರೋಪಿಸಿದರು. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷವು ಚುನಾವಣೆಯ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣವೇ ಜಾರಿ ಮಾಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಬೆಂಬಲಿಸಿ ದೇಶವನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
Chikkamagaluru: ಮಲೆನಾಡಿನಲ್ಲಿ ಧಾರಾಕಾರ ಮಳೆ: ಕಾಫಿ ಬೆಳೆಗಾರರಲ್ಲಿ ಹರ್ಷ
ಹೋಬಳಿ ಕೇಂದ್ರವಾಗಿ ಕ್ಯಾಲನೂರು: ಶಾಸಕ ಕೊತ್ತೂರು ಜಿ ಮಂಜುನಾಥ್ ಮಾತನಾಡಿ ಮುಂದಿನ ದಿನಗಳಲ್ಲಿ ಕ್ಯಾಲನೂರು ಗ್ರಾಮವನ್ನು ಹೋಬಳಿ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸುವ ಚಿಂತನೆ ಮಾಡಲಾಗಿದೆ. ಈಗಾಗಲೇ ನಿಮ್ಮ ಒಂದು ಗ್ರಾಮಕ್ಕೆ ಸುಮಾರು ೧೬.೫ ಕೋಟಿ ಅನುದಾನವನ್ನು ತರಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರವು ಯಾವಾಗಲೂ ಮುಂದೆ ಇರುತ್ತದೆ. ತಾಲೂಕಿನ ಜನತೆಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಜನರ ಮಧ್ಯದಲ್ಲೇ ಇದ್ದು ಎಲ್ಲಾ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದೇವೆ ಎಂದರು. ಕಾಂಗ್ರೆಸ್ ಸರಕಾರವು ಇದ್ದ ಸಂದರ್ಭದಲ್ಲಿ ಕೆ.ಸಿ ವ್ಯಾಲಿ ನೀರನ್ನು ತಂದು ಜಿಲ್ಲೆಯ ಅಂತರ್ಜಲ ಮಟ್ಟವನ್ನು ಏರಿಕೆ ಮಾಡಲಾಗಿದೆ ಬರಗಾಲ ರಾಜ್ಯದಲ್ಲಿ ಉಂಟಾಗಿದ್ದರೂ ನೀರಿನ ಸಮಸ್ಯೆ ಕೋಲಾರದಲ್ಲಿ ಉಂಟಾಗಿಲ್ಲ. ಎತ್ತಿನಹೊಳೆ ನೀರನ್ನು ಕೋಲಾರ ಜಿಲ್ಲೆಗೆ ತರುವುತ್ತೇವೆ ಕೊಟ್ಟು ಮಾತನ್ನು ಉಳಿಸಿಕೊಳ್ಳತ್ತೇವೆ ಎಂದರು.
ಯದುವಂಶದ ಋಣ ತೀರಿಸುವ ಸಮಯ ಬಂದಿದೆ, ಪ್ರಚಾರಕ್ಕೆ ಹೋಗುತ್ತೇನೆ: ಎಚ್.ವಿಶ್ವನಾಥ್
ಗೌತಮ್‌ಗೆ ಮತ ನೀಡಿ ಗೆಲ್ಲಿಸಿ: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿಯಾಗಿದ್ದು ನಾವೆಲ್ಲರೂ ಹುಷಾರಾಗಿರಬೇಕು ತೆನೆ ಗದ್ದೆಯಲ್ಲಿ ಇರಬೇಕು, ಕಮಲ ಕೆಸರಿನಲ್ಲಿರಬೇಕು ಕೈ ಅಧಿಕಾರದಲ್ಲಿ ಇರಬೇಕು ಹಾಗಾಗಿ ಪ್ರತಿಯೊಬ್ಬರು ಕೆ.ವಿ ಗೌತಮ್ ಅವರನ್ನು ಬೆಂಬಲಿಸಿ ಹೆಚ್ಚು ಮತಗಳಿಂದ ಗೆಲ್ಲಿಸಿ ದೆಹಲಿಗೆ ಕಳುಹಿಸುವಲ್ಲಿ ತಾವೆಲ್ಲಾ ಮುಂದಾಗಬೇಕು ಎಂದರು. ಎಂಎಲ್ಸಿ ಎಂ. ಎಲ್ ಅನಿಲ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ್, ಮಾಜಿ ಸಭಾಪತಿ ವಿ.ಆರ್ ಸುದರ್ಶನ್, ಮುಖಂಡರಾದ ನಾಗನಾಳ ಸೋಮಣ್ಣ, ಮುನಿಅಂಜಪ್ಪ, ವಕ್ಕಲೇರಿ ರಾಜಪ್ಪ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಕೆ.ವಿ ದಯಾನಂದ್, ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ನಾಗೇಶ್, ಚೌಡರೆಡ್ಡಿ, ಬಾಬಾ ಸಾಬ್, ತಮೀಮ್, ಪ್ರಕಾಶ್, ಮದ್ದೇರಿ ಶ್ರೀನಿವಾಸ್, ಕಿಟ್ಟಿ ಇದ್ದರು.