ಯದುವಂಶದ ಕುಡಿ ಯದುವೀರ್ ಅವರಿಗೆ ಮತ ನೀಡಿ ಅವರ ಋಣ ತೀರಿಸಬೇಕು. ನಾನು ಬಿಜೆಪಿ ಎಂಎಲ್ಸಿ ಆಗಿರುವುದರಿಂದ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಮೈಸೂರು (ಏ.11): ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸರ್ಕಾರ ಇಲಾಖೆ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು. ಪರೀಕ್ಷೆ ನಡೆಸುವ, ಪ್ರಶ್ನೆ ಪತ್ರಿಕೆ ಮುದ್ರಿಸುವ ಕಾರ್ಯದಲ್ಲಿ ನಡೆದಿರುವ ಕೋಟ್ಯಂತರ ರು. ಅವ್ಯವಹಾರ ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಶ್ನೆ ಪತ್ರಿಕೆಯ ಪ್ರತಿ ಪುಟಕ್ಕೂ ಕಿಕ್ ಬ್ಯಾಕ್ ಪಡೆದ ಬಗ್ಗೆ ಇಲಾಖೆಯಲ್ಲಿ ಗುಸುಗುಸು ನಡೆಯುತ್ತಿದೆ. ಇದರಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಬೇಕು. ಇಲಾಖೆಯನ್ನು ನಿರ್ವಹಿಸುವಲ್ಲಿ ಸಚಿವ ಮಧು ಬಂಗಾರಪ್ಪ ವಿಫಲರಾಗಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ತನ್ನ ಒಣ ಪ್ರತಿಷ್ಠೆ ಬಿಟ್ಟು ಮಕ್ಕಳ ಹಿತಾಸಕ್ತಿ ಗೌರವಿಸಬೇಕು. ಮಂಡಳಿಯ ಪರೀಕ್ಷೆಯ ಎಲ್ಲಾ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಶಾಲಾ ಹಂತದಲ್ಲಿ ನಡೆದಿರುವ ಮಕ್ಕಳ ನಿರಂತರ, ವ್ಯಾಪಕ ಮೌಲ್ಯಮಾಪನ ಆಧಾರದಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದರು. 5, 8 ಹಾಗೂ 9ನೇ ತರಗತಿಗೆ ಬೋರ್ಡ್ ಪರೀಕ್ಷೆ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿರುವುದನ್ನು ಸುಪ್ರಿಂ ಕೋರ್ಟ್ ತಡೆ ಹಿಡಿದಿರುವುದು ಸ್ವಾಗತಾರ್ಹ. ಶಿಕ್ಷಣ ಹಕ್ಕು ಕಾಯ್ದೆ 30 ಮಕ್ಕಳು 8ನೇ ತರಗತಿ ಮುಗಿಯುವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ತೇರ್ಗಡೆ ಮಾಡುವ ಅಗತ್ಯ
ಕಾಂಗ್ರೆಸ್‌ನಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ: ಮಾಜಿ ಸಚಿವ ಎಚ್.ಆಂಜನೇಯ
ಆದರೆ, ಸರ್ಕಾರ ಬೋರ್ಡ್ ಪರೀಕ್ಷೆ ಮಾಡಲು ಮುಂದಾಗಿದ್ದು ಸರಿಯಲ್ಲ. ದೇಶಾದ್ಯಂತ ಯುಪಿಎಸರ್ಕಾರ 2010ರಲ್ಲಿ ಜಾರಿಗೊಳಿಸಿದ ಶಿಕ್ಷಣ ಹಕ್ಕು ಕಾಯಿದೆ ಜಾರಿಯಲ್ಲಿದ್ದು, ಮೌಲ್ಯಮಾಪನ ಮತ್ತು ಕಲಿಕಾ ಫಲಿತಾಂಶ ಕುರಿತ ನಿಯಮ 23ರ ಅನ್ವಯ ನಿರಂತರ, ವ್ಯಾಪಕ ಮೌಲ್ಯಮಾಪನಕ್ಕೆ ಮಾತ್ರ ಅವಕಾಶವಿದೆ ಎಂದು ಅವರು ಹೇಳಿದರು. ಬಿಸಿಲಿನ ತಾಪ ಹೆಚ್ಚಾಗಿ, ಭೂಮಿ ಕೊರೆದರೂ ನೀರು ಬರುತ್ತಿಲ್ಲ. ಬೋರ್ವೆಲ್ ಕೊರೆಯುವವರು ಅಡಿಗೆ 100 ರು. ಏರಿಸಿದ್ದಾರೆ. ರೈತರನ್ನು ದಲ್ಲಾಳಿಗಳು ಸುಲಿಗೆ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲಿದ್ದಾರೆ ಗೊತ್ತಿಲ್ಲ. ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲಿ. ಆದರೆ ಅದಕ್ಕಾಗಿ ಸಚಿವ ಸ್ಥಾನಕ್ಕೆ ರಜಾ ಹಾಕಬೇಕಿಲ್ಲ. ಕೂಡಲೇ ರೈತರ ಸಮಸ್ಯೆ ನಿವಾರಿಸಲಿ ಎಂದು ಅವರು ಒತ್ತಾಯಿಸಿದರು. ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ಜನರಿಗೆ ಅನುಕೂಲ ಆಗಿದೆ. ಆದರೆ, ನೂರಕ್ಕೆನೂರರಷ್ಟು ಮತವಾಗಿ ಪರಿವರ್ತನೆ ಆಗುತ್ತವೆ ಎನ್ನಲು ಸಾಧ್ಯವಿಲ್ಲ. ಹಿಂದೆ ದೇವರಾಜ ಅರಸು ಅವರು ಉಳುವವನನ್ನೆ ಭೂಮಿ ಒಡೆಯನ್ನಾಗಿ ಮಾಡಿ 20 ಲಕ್ಷ ಭೂಮಿ ನೀಡಿದರು.
ಆದರೆ ಚುನಾವಣೆಯಲ್ಲಿ ಅವರು ಅಧಿಕಾರ ಕಳೆದುಕೊಂಡರು. ಅಂತೆಯೇ ಈ ಚುನಾವಣೆಯಲ್ಲೂ ಗ್ಯಾರಂಟಿಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ ಎಂದು ಹೇಳಲಾಗದು ಎಂದರು. ತಪ್ಪು ಮಾಡಿದ್ದು ಯಾವುದೇ ಪಕ್ಷದವರಾದರೂ ನಾನು ಮಾತನಾಡುತ್ತೇನೆ. ನಾನು ಬಿಜೆಪಿ ವಿಧಾನ ಪರಿಷತ್ ಸದಸ್ಯನಾದೆ ಎಂದ ಮಾತ್ರಕ್ಕೆ ಬಿಜೆಪಿ ಹೊಗಳಬೇಕಿಲ್ಲ. ನಾನು ಕಾಂಗ್ರೆಸ್ ಟಿಕೆಟ್ ಕೇಳಿದ್ದು ನಿಜ. ಯದುವೀರ್ ಅವರನ್ನು ಅವಿರೋಧವಾಗಿ ಗೆಲ್ಲಿಸಿ ಎಂದು ಹೇಳಿದ್ದೂ ನಿಜ. ಆದರೆ ಯದುವೀರ್ ಅವರಿಗೆ ಟಿಕೆಟ್ ಘೋಷಣೆಯಾದ ಬಳಿಕ ನನಗೆ ಕಾಂಗ್ರೆಸ್ ನೀಡಿದ್ದರೆ ನಿರಾಕರಿಸುತ್ತಿದ್ದೆ ಎಂದರು.
ಯದುವಂಶದ ಋಣ ತೀರಿಸಿ: ರಾಜ್ಯಕ್ಕೆ ಯದುವಂಶದ ಕೊಡುಗೆ ಅಪಾರ. ಕುಡಿಯುವ ನೀರಿನಿಂದ, ಓಡಾಡುವ ರಸ್ತೆ, ವಿದ್ಯುತ್ ವರೆಗೂ ಅವರ ಕೊಡುಗೆ ಇದೆ. ಈಗ ಅವರ ಋಣ ತೀರಿಸುವ ಸಮಯ ಬಂದಿದೆ. ಯದುವಂಶದ ಕುಡಿ ಯದುವೀರ್ ಅವರಿಗೆ ಮತ ನೀಡಿ ಅವರ ಋಣ ತೀರಿಸಬೇಕು. ನಾನು ಬಿಜೆಪಿ ಎಂಎಲ್ಸಿ ಆಗಿರುವುದರಿಂದ ಹಳೆ ಮೈಸೂರು ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತೇನೆ ಎಂದರು.
ಮಣಿಪಾಲ: ವೈದ್ಯಕೀಯ ಸ್ಯಾಂಪಲ್ ಸಾಗಾಟಕ್ಕೆ ಅತ್ಯಾಧುನಿಕ ಡ್ರೋನ್ ಬಳಕೆ!
ಪಕ್ಷ ರಾಜಕಾರಣ ಸತ್ತು ಹೋಗಿದೆ: ರಾಜಕಾರಣ ನಿಂತ ನೀರಲ್ಲ, ಹರಿಯುವ ಗಂಗೆ. ಇಡೀ ದೇಶದಲ್ಲೇ ರಾಜಕೀಯ ಧ್ರುವೀಕರಣ ಆಗುತ್ತಿದೆ. ಜತೆಗೆ ಪಕ್ಷ ರಾಜಕಾರಣ ಸತ್ತು ಬಹಳ ವರ್ಷವಾಗಿದೆ. ಈಗ ಇರುವುದು ವ್ಯಕ್ತಿ ರಾಜಕಾರಣ ಮಾತ್ರ. ಇಂದು ಯಾರೂ ಪಕ್ಷದ ಹೆಸರು ಹೇಳುತ್ತಿಲ್ಲ. ಬದಲಿಗೆ ವ್ಯಕ್ತಿ ರಾಜಕಾರಣದ ವೈಭವೀಕರಣ ಆಗುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವುದನ್ನು ಯಾರೂ ತಪ್ಪಿಸಲು ಆಗುವುದಿಲ್ಲ. ಅಂತೆಯೇ ಕಾಂಗ್ರೆಸ್‌ಗೆ ಬಹುಮತ ಬಂದರೆ ಖರ್ಗೆ ಪ್ರಧಾನಿ ಆಗಬಹುದು ಎಂದರು.