ಎನ್ ಡಿಎ ಮೈತ್ರಿಕೂಟದ ಭಾಗವಾಗಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಈಗ ತೆಲುಗು ಸ್ಟಾರ್ ಪವನ್ ಕಲ್ಯಾಣ ರಾಯಚೂರಿಗೆ ಎಂಟ್ರಿ ಕೊಡಲಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಬರಲಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
ರಾಯಚೂರು (ಏ.15): ರಾಯಚೂರಿನಲ್ಲಿ ದಿನೇ ದಿನೇ ಬಿಸಿಲು ಹೆಚ್ಚಾಗುತ್ತಿದೆ. ಬಿಸಿಲಿನ ಜೊತೆಗೆ ಲೋಕಸಭಾ ಚುನಾವಣಾ ಪ್ರಚಾರವೂ ಸಹ ರಂಗೇರುತ್ತಿದೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕವೆಂದು ಘೋಷಣೆ ಆದ ಬಳಿಕ ಕೆಲ ದಿನಗಳವರೆಗೆ ಬಂಡಾಯದ ಮಾತುಗಳು ಕೇಳಿಬಂದಿತ್ತು. ಇದನ್ನ ಸರಿಪಡಿಸಲು ಖುದ್ದು ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ರಾಯಚೂರಿಗೆ ಆಗಮಿಸಿ ಬಂಡಾಯವೆದ್ದ ಬಿಜೆಪಿ ಮುಖಂಡರಿಗೆ ಸಮಾಧಾನಪಡಿಸಿದ್ದರು.
undefined
ಅಲ್ಲದೇ ಬಂಡಾಯಗೊಂಡ ನಾಯಕರಿಂದಲ್ಲೇ ಬಿಜೆಪಿ ಅಭ್ಯರ್ಥಿಗೆ ಬಿ.ಫಾರ್ಮ್ ಕೊಡಿಸಿ ಬಂಡಾಯ ಶಮನಗೊಳಿಸಿದ್ದರು. ಹೀಗಾಗಿ ಎಲ್ಲಾ ಮುಖಂಡರು ಈಗ ಒಂದಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಎನ್ ಡಿಎ ಮೈತ್ರಿಕೂಟದ ಭಾಗವಾಗಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಈಗ ತೆಲುಗು ಸ್ಟಾರ್ ಪವನ್ ಕಲ್ಯಾಣ ರಾಯಚೂರಿಗೆ ಎಂಟ್ರಿ ಕೊಡಲಿದ್ದಾರೆ.
ಏಪ್ರಿಲ್ 18ಕ್ಕೆ ರಾಯಚೂರಿಗೆ ನಟ ಪವನ್ ಕಲ್ಯಾಣ್
ಆಂಧ್ರಪ್ರದೇಶದ ಜನಸೇನಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ತೆಲುಗು ಸ್ಟಾರ್ ಪವನ್ ಕಲ್ಯಾಣ್ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಪ್ರಚಾರಕ್ಕೆ ರಾಯಚೂರಿಗೆ ಆಗಮಿಸಲಿದ್ದಾರೆ. ಹೈದರಾಬಾದ್ ನಿಂದ ವಿಶೇಷ ಹೆಲಿಕಾಪ್ಟರ್ ಮುಖಾಂತರ ರಾಯಚೂರಿನ ಯರಮರಸ್ ಸ್ಟಾರ್ ನಟ ಪವನ್ ಕಲ್ಯಾಣ್ ಆಗಮಿಸಲಿದ್ದಾರೆ.
ಬೆಳಗ್ಗೆ 11ರಿಂದ 12ಗಂಟೆವರೆಗೆ ರಾಯಚೂರಿನಲ್ಲಿ ಪವನ್ ಕಲ್ಯಾಣ್ ಅಬ್ಬರದ ರೋಡ್ ಶೋ ನಡೆಸಲಿದ್ದಾರೆ. ರಾಯಚೂರಿನ ಗಂಜ್ ವೃತ್ತದಿಂದ ಆರ್ ಟಿಒ ಕಚೇರಿವರೆಗೆ ಪವನ್ ಕಲ್ಯಾಣ್ ರೋಡ್ ಶೋ ನಡೆಯಲಿದೆ. ಗಂಜ್ ಸರ್ಕಲ್ ನಿಂದ ಆರಂಭವಾಗುವ ರೋಡ್ ಶೋ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ರೈಲ್ವೆ ನಿಲ್ದಾಣ ಹಾಗೂ ಆರ್ ಟಿಒ ಸರ್ಕಲ್ ವರೆಗೆ ನಡೆಯಲಿದೆ. ರಾಯಚೂರು ನಗರದಲ್ಲಿ ಸುಮಾರು 5 ಕಿ.ಮೀ.ವರೆಗೆ ಪವನ್ ಕಲ್ಯಾಣ್ ರೋಡ್ ಶೋ ನಡೆಸಲಿದ್ದು, ನಟ ಪವನ್ ಕಲ್ಯಾಣ್ ನೋಡಲು ಸಾವಿರಾರು ಅಭಿಮಾನಿಗಳು ರಾಯಚೂರಿಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ಸಕಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
PM Modi Mysuru Visit: ಕೈ ಅಭ್ಯರ್ಥಿಗಳ ಗೆಲುವಿಗೆ ರಾಜ್ಯ ಕಾಂಗ್ರೆಸ್‌ನಿಂದ ನೂರಾರು ಕೋಟಿ ಕಪ್ಪುಹಣ, ಮೋದಿ ಆರೋಪ
ಪವನ್ ಕಲ್ಯಾಣ್ ರಾಯಚೂರಿನ ರೋಡ್ ಶೋ ಮುಗಿಸಿಕೊಂಡು ಕಲಬುರಗಿಗೆ ಪ್ರಯಾಣ ಬೆಳೆಸಲಿದ್ದಾರೆ. ಕಲಬುರಗಿಯಿಂದ
ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಪವನ್ ಕಲ್ಯಾಣ್ ಪ್ರಯಾಣ ಮಾಡಲಿದ್ದಾರೆ. ಆ ಬಳಿಕ ಮಧ್ಯಾಹ್ನ ಚಿಕ್ಕಬಳ್ಳಾಪುರದಲ್ಲಿ ಪವನ್ ಕಲ್ಯಾಣ ಪ್ರಚಾರ ನಡೆಸಲಿದ್ದು, ಸಂಜೆ ವೇಳೆ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಮತಬೇಟೆ ನಡೆಸಲಿದ್ದಾರೆ.
ರಾಯಚೂರಿನಲ್ಲಿ ಪವನ್ ಕಲ್ಯಾಣ್ ಪ್ರಚಾರದಿಂದ ಬಿಜೆಪಿಗೆ ಏನು ಲಾಭ?
ಸ್ಟಾರ್ ನಟ ಪವನ್ ಕಲ್ಯಾಣ್ ತನ್ನ ಸಿನಿಮಾದಿಂದ ಲಕ್ಷಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ರಾಜಕೀಯ ಆಸಕ್ತಿ ಇರುವ ನಟ ಪವನ್ ಕಲ್ಯಾಣ್ 2014 ರಲ್ಲಿ ಜನ ಸೇನಾ ಪಾರ್ಟಿ ಸ್ಥಾಪನೆ ಮಾಡಿದ್ರು. ಇಸಂ ಎಂಬ ಪುಸ್ತಕವನ್ನು ಬರೆದರು. ಆ ಪುಸ್ತಕವೇ ಈಗ ಜನಸೇನಾ ಪಕ್ಷದ ಸಿದ್ಧಾಂತವಾಗಿದೆ. ಆಂಧ್ರ- ತೆಲಂಗಾಣ ಎರಡೂ ತೆಲುಗು ರಾಜ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಖುದ್ದು ಪವನ್ ಕಲ್ಯಾಣ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತೆಲುಗು ದೇಶಂ ಪಕ್ಷ (TDP) ಮತ್ತು BJP ಮೈತ್ರಿಗಾಗಿ ವ್ಯಾಪಕ ಪ್ರಚಾರ ನಡೆಸಿದರು.
ಕಾಂಗ್ರೆಸ್ ಹಟಾವೋ, ದೇಶ್ ಬಚಾವೋ ಎಂಬ ಘೋಷಣೆಯನ್ನು ಹೇಳುವ ಮೂಲಕ ಕಾಂಗ್ರೆಸ್ ಪಕ್ಷದ ಆಡಳಿತವನ್ನು ವಿರೋಧಿಸಿದರು . ಈಗ ಲೋಕಸಭಾ ಚುನಾವಣೆ ಬಂದಿದೆ. ಎನ್ ಡಿಎ ಕೂಟದಲ್ಲಿ ಗುರುತಿಸಿಕೊಂಡ ಪವನ್ ಕಲ್ಯಾಣ್ ಬಿಜೆಪಿ ಅಭ್ಯರ್ಥಿಗಳ ಗೆಲ್ಲುವಿಗಾಗಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದರ ಭಾಗವಾಗಿ ಪವನ್ ಕಲ್ಯಾಣ್ ರಾಯಚೂರಿಗೆ ಆಗಮಿಸುತ್ತಿದ್ದಾರೆ. ಪವನ್ ಕಲ್ಯಾಣ್ ತನ್ನ ಸೂಪರ್ ಹಿಟ್ ಸಿನಿಮಾಗಳಿಂದ ಲಕ್ಷಾಂತರ ಅಭಿಮಾನಿಗಳ ದೇವರು ಆಗಿದ್ದು, ಆ ಅಭಿಮಾನಿಗಳ ಮನವೊಲಿಸಿ ಬಿಜೆಪಿಗೆ ಮತಬ್ಯಾಂಕ್ ಹೆಚ್ಚಿಸಲು ಪವನ್ ಕಲ್ಯಾಣ್ ರಾಯಚೂರಿಗೆ ಬರುತ್ತಿದ್ದಾರೆ.
ಪವನ್ ಕಲ್ಯಾಣ್ ನೋಡಲು ಸಾವಿರಾರು ಅಭಿಮಾನಿಗಳು ರಾಯಚೂರಿಗೆ ಆಗಮಿಸುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ಹೆಚ್ಚಾಗಿ ಯುವಕರೇ ಈ ರೋಡ್ ಶೋ ನಲ್ಲಿ ಭಾಗವಹಿಸಲಿದ್ದು ಇದು ಬಿಜೆಪಿಗೆ ಯಾವ ರೀತಿಯಲ್ಲಿ ಲಾಭ ಆಗುತ್ತೆ ಎಂಬುವುದು ಫಲಿತಾಂಶ ಹೊರಬಿದ್ದಾಗಲ್ಲೇ ತಿಳಿಯಲಿದೆ.