ನಾನು ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲ ಎಂದು ಹೇಳುವ ನರೇಂದ್ರ ಮೋದಿ ಚುನಾವಣಾ ಬಾಂಡ್‌ನಲ್ಲಿ ನರೇಂದ್ರ ಮೋದಿ ಅವರ ಮುಖವಾಡ ಬಯಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಬಸವನಬಾಗೇವಾಡಿ (ಏ.15): ನಾನು ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲ ಎಂದು ಹೇಳುವ ನರೇಂದ್ರ ಮೋದಿ ಚುನಾವಣಾ ಬಾಂಡ್‌ನಲ್ಲಿ ನರೇಂದ್ರ ಮೋದಿ ಅವರ ಮುಖವಾಡ ಬಯಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಶಾದಿಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಕುದರಿಸಾಲವಾಡಗಿ ಜಿಪಂ ವ್ಯಾಪ್ತಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರಕ್ಕೆ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ೨೦೧೮ರಲ್ಲಿ ಬಿಜೆಪಿ ನೀಡಿದ ಭರವಸೆಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸಿಲ್ಲ. ಅಚ್ಛೇ ದಿನ ಬರುತ್ತದೆ ಎಂದು ನರೇಂದ್ರಿ ಮೋದಿ ಹೇಳುತ್ತಾ ಪೆಟ್ರೋಲ್, ಡಿಸೇಲ್, ಗ್ಯಾಸ್, ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದರು.
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಈ ಸಲ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ವರ್ಷಕ್ಕೆ ₹1.25 ಲಕ್ಷದ ಆರೋಗ್ಯ ವಿಮೆ ಸೇರಿದಂತೆ ೨೫ ಗ್ಯಾರಂಟಿಗಳನ್ನು ಜಾರಿಗೆ ತರಲಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಜಾರಿಗೆ ತಂದಿರುವ ೫ ಗ್ಯಾರಂಟಿ ಯೋಜನೆಯಲ್ಲಿ ಶೇ. ೮೫ ರಷ್ಟು ಜನರು ಲಾಭ ಪಡೆಯುತ್ತಿದ್ದಾರೆ. ಗ್ಯಾರಂಟಿ ಫಲಾನುಭವಿಗಳಿಗೆ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ನೀಡಲಿದ್ದಾರೆ. ಇದರಿಂದಾಗಿ ಅವರು ಆಯ್ಕೆಯಾಗುವುದು ನಿಶ್ಚಿತ ಎಂದರು.
undefined
ಶೀಘ್ರದಲ್ಲೇ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ: ನಿಖಿಲ್ ಕುಮಾರಸ್ವಾಮಿ
ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ,ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಬಾಪುಗೌಡ ಪಾಟೀಲ, ಪರಶುರಾಮ ದಿಂಡವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ, ಆನಂದಗೌಡ ದೊಡ್ಡಮನಿ, ಬಿ.ಎಸ್.ಪಾಟೀಲ, ಅಶೋಕಗೌಡ ಪಾಟೀಲ, ಬಾಳಾಸಾಹೇಬಗೌಡ ಪಾಟೀಲ, ಗೌರಮ್ಮ ಮುತ್ತತ್ತಿ, ಬಿ.ಎಸ್.ಛಾಯಾಗೋಳ, ಬಸವರಾಜ ದೇಸಾಯಿ, ಶಬ್ಬೀರ ಢವಳಗಿ, ಸರಿತಾ ನಾಯಕ, ರಮಿಜಾ ನದಾಫ, ರಮಜಾನ ಮುಜಾವರ, ಗುರು ಗುಡಿಮನಿ, ಅಶೋಕ ಚಲವಾದಿ, ನಜೀರ ಬೀಳಗಿ, ಸಂಗನಗೌಡ ಹರನಾಳ ಇತರರು ಇದ್ದರು.ಡಾ.ಪ್ರಭಗೌಡ ಪಾಟೀಲ ಲಿಂಗದಳ್ಳಿ ಸ್ವಾಗತಿಸಿದರು.ಪ್ರಕಾಶ ಪಾಟೀಲ ನಿರೂಪಿಸಿದರು. ಪ್ರಚಾರ ಸಭೆಗೆ ಜಿಪಂ ಮತಕ್ಷೇತ್ರದ ವಿವಿಧೆಡೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು.
ಅಂಬೇಡ್ಕರ್ ಹೆಸರು ಬಳಸಿ ಕಾಂಗ್ರೆಸ್ ರಾಜಕೀಯ: ರೇಣುಕಾಚಾರ್ಯ ಆರೋಪ
ದಾರಿ ತಪ್ಪಿದ ಹೇಳಿಕೆ ನೀಡ್ತಾ ಇದ್ದಾರೆ: ಕುಮಾರಸ್ವಾಮಿ ಬಿಜೆಪಿಗೆ ಹೋಗಿ ದಾರಿ ತಪ್ಪಿದ್ದಾರೆ. ದಾರಿ ತಪ್ಪಿದ ಮೇಲೆ ದಾರಿ ತಪ್ಪಿದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಸಚಿವ ಎಂ.ಬಿ.ಪಾಟೀಲ ಕಿಡಿಕಾರಿದರು. ದಾರಿ ತಪ್ಪಿದ್ದಾರೆ ಎಂದರೆ ಅರ್ಥ ಏನು ಎಂದು ಕುಮಾರಸ್ವಾಮಿಗೆ ಕೇಳಿ, ಅವರೇ ಅದನ್ನು ಸ್ಪಷ್ಟಪಡಿಸಲಿ ಎಂದು ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಗ್ಯಾರಂಟಿ ಯೋಜನೆಗಳ ಹಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸೋದು ದಾರಿ ತಪ್ಪಿದ ಹಾಗೇನಾ? ಅನ್ನಭಾಗ್ಯದಿಂದ ಹಸಿದ ಹೊಟ್ಟೆಗೆ ಊಟ ಮಾಡಿದ್ದು ದಾರಿ ತಪ್ಪಿದ ಹಾಗೇನಾ? ಒಳ್ಳೆಯ ಬಟ್ಟೆ ಹಾಕಿಕೊಂಡಿದ್ದು ದಾರಿ ತಪ್ಪಿದ ಹಾಗೇನಾ? ಗ್ಯಾಸ್ ಸಿಲಿಂಡರ್ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆ ಮಧ್ಯೆ ಸಮಾಧಾನ ಪಟ್ಟು ಮನೆ ನಡೆಸಿದ್ದು ದಾರಿ ತಪ್ಪಿದಂಗಾ? ದಾರಿ ತಪ್ಪಿದ್ದು ಏನು ಎಂಬುದನ್ನು ಎಚ್‌ಡಿಕೆ ಅವರನ್ನೇ ಕೇಳಿ? ಎಂದರು.