ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಇಡೀ ಬಸವಕಲ್ಯಾಣವನ್ನು ಕೇಸರಿಮಯವಾಗಿಸಿರುವ ಶಾಸಕ ಶರಣು ಸಲಗರ ಚುನಾವಣಾ ಚಾಣಕ್ಯ ಎಂದೇ ಹೆಸರುವಾಸಿಯಾದ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಉಡುಗೊರೆಯಾಗಿ ನೀಡಲು ಒಟ್ಟಾರೆ 5 ಕೆ.ಜಿ ತೂಕದ ಬೆಳ್ಳಿಯ ಕಿರೀಟ ಹಾಗೂ ಗಧೆಯನ್ನು ಮಾಡಿಸಿ ತರಿಸಿಟ್ಟಿದ್ದಾರೆ.
ಬೀದರ್ (ಮಾ.3) : ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಇಡೀ ಬಸವಕಲ್ಯಾಣವನ್ನು ಕೇಸರಿಮಯವಾಗಿಸಿರುವ ಶಾಸಕ ಶರಣು ಸಲಗರ ಚುನಾವಣಾ ಚಾಣಕ್ಯ ಎಂದೇ ಹೆಸರುವಾಸಿಯಾದ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಉಡುಗೊರೆಯಾಗಿ ನೀಡಲು ಒಟ್ಟಾರೆ 5 ಕೆ.ಜಿ ತೂಕದ ಬೆಳ್ಳಿಯ ಕಿರೀಟ ಹಾಗೂ ಗಧೆಯನ್ನು ಮಾಡಿಸಿ ತರಿಸಿಟ್ಟಿದ್ದಾರೆ.
ಬಸವಕಲ್ಯಾಣ(Basavakalyana)ದ ಥೇರ್ ಮೈದಾನದಲ್ಲಿ ಮಾ.3ರಂದು ನಡೆಯಲಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ(BJP Vijaya sankalpa yatre)ಯ ನಿಮಿತ್ತ ನಗರಕ್ಕೆ ಆಗಮಿಸುತ್ತಿರುವ ಅಮಿತ್ ಶಾ(Amit shah), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಸ್ವಾಗತಿಸಲು ಶಾಸಕ ಶರಣು ಸಲಗರ(MLA Sharanu salagar) ವಿನೂತನ ರೀತಿಯಲ್ಲಿ ತಯಾರಿಗಳನ್ನು ಮಾಡಿಟ್ಟುಕೊಂಡಿದ್ದಾರೆ.
undefined
ಕರ್ನಾಟಕದಲ್ಲಿ ಇಂದು ಮತ್ತೆ ಅಮಿತ್ ಶಾ ಸಂಚಲನ
ಬೆಂಗಳೂರಿನ ಖ್ಯಾತ ಸುವರ್ಣಕಾರರ ಬಳಿ ವಿಶಿಷ್ಟಕಲಾತ್ಮಕ ಕುಸರಿವುಳ್ಳ ಕಿರೀಟ ಹಾಗೂ ಗಧೆಯನ್ನು ಬೆಳ್ಳಿಯಲ್ಲಿ ತಯಾರಿಸಿದ್ದು ಒಟ್ಟು 5 ಕೆ.ಜಿ ತೂಕವಿರುವ ಇವುಗಳು ಬೆಳ್ಳಿಯ ಬೆಲೆಗಿಂತ ಅದರ ತಯಾರಿಯಲ್ಲಿಯೇ ಹೆಚ್ಚು ಹಣ ವ್ಯಯವಾಗಿದೆ ಎಂದು ಹೇಳಲಾಗಿದೆ.
ಇನ್ನು ಕಲ್ಯಾಣದ ಮೂಲೆ ಮೂಲೆಗೂ ಶಾಸಕ ಶರಣು ಸಲಗರ ಅವರ ಬ್ಯಾನರ್‌ಗಳು ರಾರಾಜಿಸುತ್ತಿವೆ. 2 ಸಾವಿರಕ್ಕೂ ಹೆಚ್ಚು ಬ್ಯಾನರ್‌ಗಳು, ಅಮಿತ್ ಶಾ ಫೋಟೋವುಳ್ಳ 25ಕ್ಕೂ ಹೆಚ್ಚು ಬಲೂನ್‌ಗಳು ಆಗಸದಲ್ಲಿ ಹಾರುತ್ತಿದ್ದರೆ ವಿವಿಧೆಡೆ ಎಲ್‌ಇಡಿ ಪರದೆಗಳು, ಲೆಕ್ಕವಿಲ್ಲದಷ್ಟುಬಿಜೆಪಿ ಬಾವುಟಗಳ ಹಾರಾಟ ಎಲ್ಲೆಡೆ ಕೇಸರಿಮಯವಾಗಿಸಿದೆ.
ಇನ್ನು ಈ ಕುರಿತಂತೆ ಶಾಸಕ ಶರಣು ಸಲಗರ ಕನ್ನಡಪ್ರಭಕ್ಕೆ ಮಾತನಾಡಿ, ಈ ಭಾಗಕ್ಕೆ ಸ್ವಾತಂತ್ರ್ಯ ತಂದುಕೊಟ್ಟಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲ್ ಅವರನ್ನಂತೂ ನಾವು ನೋಡಿಲ್ಲ. ಆದರೆ, ಅದೇ ಸ್ವಭಾವದವರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾವು ಸತ್ಕರಿಸುವದು ನಮ್ಮ ಕರ್ತವ್ಯವಾಗುತ್ತದೆ. ಹೀಗಾಗಿ ವಿಶೇಷವಾಗಿ ಬೆಳ್ಳಿಯ ಕಿರೀಟ ಹಾಗೂ ಗಧೆಯನ್ನು ನೀಡಿ ಸ್ವಾಗತಿಸುತ್ತಿದ್ದೇವೆ ಎಂದರು.
ಮೆಘಾಲಯದಲ್ಲೂ ಬಿಜೆಪಿ ಸರ್ಕಾರ, ಅಮಿತ್ ಶಾಗೆ ಕರೆ ಮಾಡಿ ಬೆಂಬಲ ಕೇಳಿದ 26 ಸ್ಥಾನ ಗೆದ್ದ NPP!
ಬಸವಕಲ್ಯಾಣದ ಜನ ಅಮಿತ್ ಶಾ ಅವರ ಆಗಮನಕ್ಕಾಗಿ ಕಾತುರರಾಗಿದ್ದಾರೆ. ಸುಮಾರು 50 ಸಾವಿರ ಜನ ಸೇರುವ ಎಲ್ಲ ಸಾಧ್ಯತೆಗಳಿವೆ. ಕಾರ್ಯಕರ್ತರು, ಮುಖಂಡರು, ಹಿರಿಯರು ಒಟ್ಟಾರೆಯಾಗಿ ಈ ಕಾರ್ಯಕ್ರಮದಲ್ಲಿ ಶ್ರಮ ಹಾಕುತ್ತಿದ್ದು ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಾಣುತ್ತದೆ ಎಂದು ಸಲಗರ ಭರವಸೆ ವ್ಯಕ್ತಪಡಿಸಿದರು.