ರಾಜ್ಯದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ವು ಮುಂದಿನ ದಿನಗಳಲ್ಲಿ ವರೊಷ್ಠರೊಂದಿಗೆ ಚರ್ಚೆಯಾದ ನಂತರ ಬಿಜೆಪಿಯೊಂದಿಗೆ ವಿಲೀನವಾಗುವ ಆಶಾಭಾವನೆ ಇದೆ.
ರಾಮನಗರ (ಡಿ.26): ರಾಜ್ಯದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ)ವು ಮುಂದಿನ ದಿನಗಳಲ್ಲಿ ವರೊಷ್ಠರೊಂದಿಗೆ ಚರ್ಚೆಯಾದ ನಂತರ ಬಿಜೆಪಿಯೊಂದಿಗೆ ವಿಲೀನವಾಗುವ ಆಶಾಭಾವನೆ ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಪಿ.ಯೋಗೇಶ್ವರ್, ಜನಾರ್ಧನ ರೆಡ್ಡಿ ಅವರು ಬಿಜೆಪಿಯಲ್ಲೇ ಇರಬೇಕು. ಈ ಹಿಂದೆ ಹಲವಾರು ಬಾರಿ ತಾವು ಬಿಜೆಪಿ ಸೇರಬೇಕು ಎಂದು ನನ್ನ ಬಳಿ ಚರ್ಚೆ ಮಾಡಿದ್ದಾರೆ. ಅದು ಈಡೇರದ ಹಿನ್ನೆಲೆಯಲ್ಲಿ ಹೊಸದಾಗಿ ಕಲ್ಯಾಣರಾಜ್ಯ ಪ್ರಗತಿ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಆದರೆ, ನಮ್ಮ ವರಿಷ್ಠರು ಮಾತನಾಡಿದ ನಂತರ ಬಿಜೆಪಿ ಜೊತೆ ಪಕ್ಷ ವಿಲೀನ ಮಾಡುತ್ತಾರೆಂಬ ಆಶಾಭಾವನೆ ಇದೆ. ಅವರು ಕೂಡ ಈವರೆಗೆ ಬಿಜೆಪಿ ಪರವಾಗಿಯೇ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Assembly election: ಕುಮಾರಸ್ವಾಮಿ ಕುಟುಂಬದ ಮೋಸದ ಕಣ್ಣೀರನ್ನು ನಂಬಬೇಡಿ: ಸಿ.ಪಿ. ಯೋಗೇಶ್ವರ
ಬೊಮ್ಮಾಯಿ ಅವರಿಂದ ಮಾಹಿತಿ ರವಾನೆ: ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳುತ್ತಿದ್ದಾರೆ. ಅವರು ವರಿಷ್ಠರ ಮುಂದೆ ಹೊಸ ಪಕ್ಷದ ವಿಚಾರ ಸೇರಿ ಉಳಿದ ಎಲ್ಲ ರಾಜಕೀಯ ವಿಚಾರಗಳನ್ನು ಪ್ರಸ್ತಾಪ ಮಾಡುವ ಸಾಧ್ಯತೆಯಿದೆ. ವರಿಷ್ಠರ ಮನವೊಲಿಕೆ ನಂತರ ಜನಾರ್ಧನರೆಡ್ಡಿ ಅವರು ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆ ಆಗುತ್ತಾರೆ. ಬಹಳ ವರ್ಷಗಳಿಂದ ಪಕ್ಷದಿಂದ ದೂರವಿದ್ದರೂ, ಮತರಳಿ ಪಕ್ಷಕ್ಕೆ ತೆಗೆದುಕೊಳ್ಳಲು ಹತ್ತು ಹಲವಾರು ಹಂತಗಳಿವೆ. ಬಿಜೆಪಿ ಸದೃಢವಾಗ್ತಿದೆ, ಬಹಳ ಜನ ಬಿಜೆಪಿ ಸೇರುತ್ತಾರೆ. ಹಳೇ ಮೈಸೂರು ಭಾಗದಲ್ಲಿ ನಮ್ಮ ಸಂಘಟನೆ ಹೆಚ್ಚಾಗಲಿದೆ ಎಂದು ಹೇಳಿದರು.
ಕ್ಷೇತ್ರಕ್ಕೆ ಉತ್ಸವಮೂರ್ತಿಯಾದ ಕುಮಾರಸ್ವಾಮಿ: ಚನ್ನಪಟ್ಟಣದ ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹಲವು ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಂಡರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿ.ಪಿ. ಯೋಗೇಶ್ವರ್ ಅವರು, ಕಳೆದ ನಾಲ್ಕು ವರ್ಷಗಳಿಂದ ಕುಮಾರಸ್ವಾಮಿ ಕ್ಷೇತ್ರದಲ್ಲಿ ನಿಷ್ಕ್ರಿಯರಾಗಿದ್ದಾರೆ. ಅವರು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ತಾಲೂಕಿನ ಆಡಳಿತದಲ್ಲಿ ಯಾವುದೇ ರೀತಿಯ ಹಿಡಿತವಿಲ್ಲ. ಶಾಸಕರಾಗಿ ಅವರ ಕರ್ತವ್ಯವನ್ನ ಸರಿಯಾಗಿ ಪಾಲಿಸಿಲ್ಲ. ಕ್ಷೇತ್ರಕ್ಕೆ ಉತ್ಸವಮೂರ್ತಿ ತರಹ ಬಂದು ಹೋಗುತ್ತಿದ್ದು, ಇದರಿಂದ ಜನರು ಬೇಸತ್ತಿದ್ದಾರೆ ಎಂದು ತಿಳಿಸಿದರು.
Pancharatna Yatre: ಪಂಚರತ್ನ ಯಾತ್ರೆಗೆ ನಾನು ನಯಾಪೈಸೆ ಕೊಟ್ಟಿಲ್ಲ: ಸಿ.ಪಿ.ವೈಗೆ ಕುಮಾರಸ್ವಾಮಿ ತಿರುಗೇಟು
ಕುಮಾರಸ್ವಾಮಿ ಆಯ್ಕೆ ನಿರ್ಧಾರ ತಪ್ಪು ಎಂಬ ಅರಿವಾಗಿದೆ: ಇನ್ನು ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿದ್ದರೂ ಅಭಿವೃದ್ಧಿ ಕಾಮಗಾರಿಗಳು ಆಗದ ಹಿನ್ನೆಲೆಯಲ್ಲಿ ಜನರು ಬೇಸತ್ತಿದ್ದಾರೆ. ಅವರನ್ನು ಆಯ್ಕೆ ಮಾಡಿದ ಬಗ್ಗೆ ತಾಲೂಕಿನ ಜನರಲ್ಲಿ ತುಂಬಾ ನೋವಿದೆ. ನಾವು ತಪ್ಪು ಮಾಡಿದೆವು ಎಂಬ ಮನೋಭಾವ ಬಂದಿದೆ. ಹಾಗಾಗಿ ಹಲವಾರು ಜನರು ಬಿಜೆಪಿ ಸೇರುತ್ತಿದ್ದಾರೆ. ಚುನಾವಣೆವರೆಗೂ ಈ ಪ್ರಕ್ರಿಯೆ ಮುಂದುವರೆಯಲಿದೆ. ಹಳೇ ಮೈಸೂರು ಭಾಗದಲ್ಲಿಯೂ ಸಹ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದರು.