Assembly election: ವಿವಿಧ ಪಕ್ಷಗಳ ಮುಖಂಡರೊಂದಿಗೆ ಟೆಂಪಲ್‌ ರನ್‌ ಮಾಡಿದ ಜನಾರ್ಧನರೆಡ್ಡಿ

By Sathish Kumar KHFirst Published Dec 22, 2022, 3:52 PM IST
Highlights

ಮಾಜಿ ಸಚಿವ ಜನಾರ್ಧನರೆಡ್ಡಿಯ ಇತ್ತೀಚಿನ ರಾಜಕೀಯ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಗಂಗಾವತಿಯಲ್ಲಿ ಮನೆ ಮಾಡಿದ ಬಳಿಕ‌ ಇದೇ ಮೊದಲನೇ ಬಾರಿಗೆ ರೆಡ್ಡಿ ಗಂಗಾವತಿಗೆ ಆಗಮಿಸಿದ್ದರು.‌ ಇವರೆಲ್ಲರೊಂದಿಗೆ ರೆಡ್ಡಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು.

ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಪ್ಪಳ (ಡಿ.22): ಗಣಿ ಧಣಿ, ಮಾಜಿ ಸಚಿವ ಜನಾರ್ಧನರೆಡ್ಡಿಯ ಇತ್ತೀಚಿನ ರಾಜಕೀಯ ನಡೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಗಂಗಾವತಿಯಲ್ಲಿ ಮನೆ ಮಾಡಿದ ಬಳಿಕ‌ ಇದೇ ಮೊದಲನೇ ಬಾರಿಗೆ ರೆಡ್ಡಿ ಗಂಗಾವತಿಗೆ ಆಗಮಿಸಿದ್ದರು.‌ ಇವರೆಲ್ಲರೊಂದಿಗೆ ರೆಡ್ಡಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದರು.

ಕಳೆದ ನಾಲ್ಕೈದು ದಿನಗಳಿಂದ ಮಾಜಿ ಸಚಿವ ಜನಾರ್ಧನರೆಡ್ಡಿ ವಿವಿಧ ಊರುಗಳಿಗೆ ತೆರಳಿ,ಹಲವು ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ಆದರೆ ಗಂಗಾವತಿಯಲ್ಲಿ ಮಾತ್ರ ಇದು ಉಲ್ಟಾ ಆಗಿದೆ. ಇಂದು ಗಂಗಾವತಿ ನಗರದ ಕನಕಗಿರಿ ರಸ್ತೆಯಲ್ಲಿರುವ ಕ್ರಿಯೇಟಿವ್ ಪಾರ್ಕ್ ನಲ್ಲಿರುವ ಅವರ ಕಚೇರಿಗೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಆಗಮಿಸಿ ಜನಾರ್ಧನರೆಡ್ಡಿಯನ್ನ ಭೇಟಿ ಮಾಡಿದರು. ಅದರಲ್ಲಿ ವಿಶೇಷವಾಗಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಯಮನೂರಪ್ಪ ಚೌಡ್ಕಿ ಜನಾರ್ಧನರೆಡ್ಡಿಯನ್ನು ಭೇಟಿ ಮಾಡಿ, ಇಡೀ ದಿನದ ಸಮಯವನ್ನು ಅವರ ಜೊತೆಗೆ ಕಳೆದರು. ಜೊತೆಗೆ ಬಿಜೆಪಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಹಲವು ಮುಖಂಡರು ಸಹ ಜನಾರ್ಧನರೆಡ್ಡಿ ಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಗಂಗಾವತಿ ಗೃಹಪ್ರವೇಶ.. ಕಲ್ಯಾಣ ಪ್ರಗತಿ ಪಕ್ಷ.. ಜನಾರ್ಧನ ರೆಡ್ಡಿ ಹೊಸ ಆಟ!

ಚನ್ನಬಸವಸ್ವಾಮಿ ದೇವಸ್ಥಾನಕ್ಕೆ ರೆಡ್ಡಿ ಭೇಟಿ: ತಮ್ಮ ನಿವಾಸದಲ್ಲಿ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಜನಾರ್ಧನರೆಡ್ಡಿ ನೇರವಾಗಿ ಗಂಗಾವತಿ ನಗರದ ಶ್ರೀ ಚನ್ನಬಸವಸ್ವಾಮಿ ದೇವಸ್ಥಾನಕ್ಕೆ ತೆರಳಿದರು. ಈ ವೇಳೆ ಮಹಿಳೆಯರು ಆರತಿ ಬೆಳಗಿ ರೆಡ್ಡಿಯನ್ನು ಸ್ವಾಗತಿಸಿದರು. ಬಳಿಕ ಚನ್ನಬಸವಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಧ್ಯಾನ ಮಾಡಿದರು. ಇದೇ ವೇಳೆ ದೇವಸ್ಥಾ ದೇವಸ್ಥಾನದ ಆಡಳಿತ ಮಂಡಳಿಯವರು ಚನ್ನಬಸವಸ್ವಾಮಿಯ ಪುಸ್ತಕ ನೀಡಿ ಗೌರವಿಸಿದರು.  

ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ: ಚನ್ನಬಸವಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಜನಾರ್ಧನರೆಡ್ಡಿ  ಗಂಗಾವತಿಯ ಗ್ರಾಮದೇವತೆಯಾದ ಶ್ರೀದುರ್ಗಾದೇವಿ ದೇವಸ್ಥಾನಕ್ಕೆ ಜನಾರ್ಧನರೆಡ್ಡಿ ಭೇಟಿ ನೀಡಿದರು. ಇನ್ನು ಕಳೆದ ಎರಡು ದಿನಗಳಿಂದ ಗ್ರಾಮದೇವತೆ ದುರ್ಗಾದೇವಿಯ ಜಾತ್ರೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಜನಾರ್ಧನರೆಡ್ಡಿ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ದೇವಿಯ ವೇಷಧಾರಿಗಳೊಂದಿಗೆ ಫೋಟೋ ತೆಗೆಯಿಸಿಕೊಂಡರು.‌ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿಯವರು ಜನಾರ್ಧನರೆಡ್ಡಿ ಗೆ ಸನ್ಮಾನಿಸಿದರು. ಈ ವೇಳೆ ಮಾತನಾಡಿದ ರೆಡ್ಡಿ ದುರ್ಗಾದೇವಿಯ ದರ್ಶನ ಪಡೆದದ್ದು, ನನ್ನ ಭಾಗ್ಯ ಎಂದರು.

Koppal: ಜನಾರ್ಧನ ರೆಡ್ಡಿಯಿಂದ 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ' ಸ್ಥಾಪನೆ?

ಸಂಜೆ ಮುಸ್ಲಿಂ ಸಮುದಾಯದವರ ಮನೆಗೆ ಭೇಟಿ: ಜನಾರ್ಧನರೆಡ್ಡಿ ಗಂಗಾವತಿಯಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳ ಈಗಾಗಲೇ ಬಲವಾಗಿ ಕೇಳಿಬರುತ್ತಿವೆ. ಇದರ ಮದ್ಯೆ ಇದೀಗ ಗಂಗಾವತಿಯಲ್ಲಿ ಜನಾರ್ಧನರೆಡ್ಡಿ ಟೆಂಪಲ್ ರನ್ ಆರಂಭಿಸಿದ್ದಾರೆ. ಇನ್ನು ಸಂಜೆ ಮುಸ್ಲಿಂ ಸಮುದಾಯದ ಮುಖಂಡರ ಮನೆಗಳಿಗೆ ಹಾಗೂ ದರ್ಗಾಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇನ್ನು ತಮ್ಮ ಮುಂದಿನ ರಾಜಕೀಯದ ನಡೆ ಕುರಿತು ಡಿಸೆಂಬರ್ 25 ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟ ಮಾಡುವುದಾಗಿ ರೆಡ್ಡಿ ಈಗಾಗಲೇ ತಿಳಿಸಿದ್ದಾರೆ. ಅಂದು ಮುಂದಿನ ರಾಜಕೀಯದ ನಡೆ ಏನಿರಲಿದೆ ಅನ್ನೋದನ್ನ ಕಾದುನೋಡಬೇಕಿದೆ.

click me!