ರಾಜ್ಯದಲ್ಲಿ ಜೆಡಿಎಸ್ ಸ್ವತಂತ್ರ್ಯವಾಗಿ ಅಧಿಕಾರಕ್ಕೆ ಬಂದರೆ ಎಚ್.ಡಿ. ಕುಮಾರಸ್ವಾಮಿ ಅವರು ಎಲ್ಲ ಸ್ರ್ತೀ ಶಕ್ತಿ ಸಂಘಗಳ ಮನ್ನಾ ಮಾಡುತ್ತಾರೆ. ನೀವು ಎಷ್ಟು ಬೇಕಾದರೂ ಸಾಲ ಮಾಡಿ ಎಂದು ಅನಿತಾ ಕುಮಾರಸ್ವಾಮಿ ಅವರು ಹಾಸ್ಯಾಸ್ಪದ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
ರಾಮನಗರ (ಡಿ.22): ಜೆಡಿಎಸ್ ಪಕ್ಷದ ಸ್ವತಂತ್ರ ಸರ್ಕಾರ ಬಂದರೆ ರಾಜ್ಯಾದ್ಯಂತ ಎಲ್ಲ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಎಚ್.ಡಿ. ಕುಮಾರಸ್ವಾಮಿ ಅವರು ಮನ್ನಾ ಮಾಡುತ್ತಾರೆ. ನೀವು ಎಷ್ಟು ಬೇಕಾದರೂ ಸಾಲ ಮಾಡಿ ಎಂದು ಹೇಳುವ ಮೂಲಕ ಅನಿತಾ ಕುಮಾರಸ್ವಾಮಿ ಅವರು ಹಾಸ್ಯಾಸ್ಪದ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸಚಿವ ಸಿ.ಪಿ. ಯೋಗೇಶ್ವರ ಹೇಳಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಅನಿತಾ ಕುಮಾರಸ್ವಾಮಿ ಅವರು, ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಎಲ್ಲ ಸ್ತ್ರೀಶಕ್ತಿ ಸಾಲವನ್ನು ಕುಮಾರಸ್ವಾಮಿ ಮನ್ನಾ ಮಾಡ್ತಾರೆ.! ಸಾಲ ಎಷ್ಟು ಬೇಕಾದ್ರೂ ತಗೊಳಿ ಎಂದು ಹೇಳುವುದನ್ನು ಜನರು ನಂಬಬೇಡಿ. ಕೇವಲ ಓಟ್ ಹಾಕಿಸಿಕೊಳ್ಳಲು ಸುಳ್ಳು ಹೇಳ್ತಾರೆ. ಜೆಡಿಎಸ್ ನವರು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ನನ್ನ ವಿರುದ್ದವಾಗಿ ಸ್ಪರ್ಧೆ ಮಾಡಲು ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧೆ ಮಾಡಲು ಬಯಸಿದ್ದಾರೆ. ನಾನು ಕೂಡ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದೇನೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಮಾಡಲೇಬೇಕು: ಸಿ.ಪಿ.ಯೋಗೇಶ್ವರ್
ಒಂದು ಕುಟುಂಬದಲ್ಲಿ ಎಷ್ಟು ಜನ ಸ್ಪರ್ಧೆ ಮಾಡ್ತಾರೆ: ಸಾಮಾಜಿಕ ಜಾಲತಾಣದಲ್ಲಿ ಒಂದು ಮೇಸೆಜ್ ನೋಡಿದ್ದೇನೆ. ಜೆಡಿಎಸ್‌ನ ಕಾರ್ಯಕರ್ತರೇ ಅವರ ಮುಖಂಡರುಗಳನ್ನು ಪ್ರಶ್ನೆ ಮಾಡ್ತಾ ಇದ್ದಾರೆ. ಒಂದು ಕುಟುಂಬದಲ್ಲಿ ಎಷ್ಟು ಜನ ಸ್ಪರ್ಧೆ ಮಾಡ್ತಾರೆ? ಜನಸಾಮಾನ್ಯರ ಮನಸ್ಸಿನಲ್ಲಿ ಈ ರೀತಿ ಒಂದು ಪ್ರಶ್ನೆ ಮೂಡುತ್ತಾ ಇದೆ. ನಮ್ಮ ಪಕ್ಷದ ಒಂದು ಕಾರ್ಯಕ್ರಮದಲ್ಲಿ ಸಂತೋಷ್ ಜೀ ಅವರು ಒಂದು ಅಂಶವನ್ನು ಉಲ್ಲೇಖ ಮಾಡಿದ್ದಾರೆ. ಚುನಾವಣೆ ಬಂದ ಸಂದರ್ಭದಲ್ಲಿ ಜನರ ಮುಂದೆ ಹೋಗ್ತಾರೆ ಕಣ್ಣೀರು ಹಾಕ್ತಾರೆ. ರಾಜ ಮನೆತನದ ರೀತಿ ಒಂದೇ ಕುಟುಂಬದವರು ಸ್ಪರ್ಧೆ ಮಾಡ್ತಾರೆ. ಅನ್ನೋ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ ಎಂದು ಹೇಳಿದರು.
ಸಂತೋಷ್‌ಜೀ ಬಡ ಕುಟುಂಬದಿಂದ ಬಂದವರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅವರು ಒಂದು ಸಾಮಾನ್ಯ ಕುಟುಂಬದಿಂದ ಬಂದವರು. ಇಡೀ ದೇಶದಲ್ಲಿ ಅವರು ಪರಿಚಿತರಾಗಿ ಕೆಲಸ ಮಾಡ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಅಪಾರವಾದ ಗೌರವ ಇದೆ. ಸಂತೋಷ್ ಜೀ ಅವರ ಬಗ್ಗೆ ಕುಮಾರಸ್ವಾಮಿ ಅಗೌರವದಿಂದ ಮಾತನಾಡಿದ್ದಾರೆ. ಜಿಲ್ಲೆಯಲ್ಲಿ ನಿಮ್ಮದೇ ಕುಟುಂಬ ಅಧಿಕಾರ ನಡೆಸಬೇಕಾ? ನಮ್ಮ ಜಿಲ್ಲೆಯ ಜನರಿಗೆ ಸ್ವಾಭಿಮಾನ ಇದೆ. ಈ ಬಾರಿ ಯಾರಿಗೆ ಮತ ಹಾಕುತ್ತಾರೆ ಎಂಬುದು ತಿಳಿಯಲಿದೆ ಎಂದು ತಿಳಿಸಿದರು.
Assembly election: ಪಂಚರತ್ನ ರಥಯಾತ್ರೆ ತಡೆಯಲು ಕೊರೊನಾ ಭೂತ ಬಿಡಲಾಗುತ್ತಿದೆ: ಕುಮಾರಸ್ವಾಮಿ
ಕಾರ್ಯಕ್ರಮ ಮಾಡೋಕೆ ಎಲ್ಲಿಂದ ದುಡ್ಡು ಬಂತು: ರಾಮನಗರ - ಚನ್ನಪಟ್ಟಣದಲ್ಲಿ ಪ್ಲೆಕ್ಸ್ ಹಾಕೋರು ರಿಯಲ್ ಎಸ್ಟೇಟ್ ಮಾಡೋರು ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ನಾವು ಏನೇ ಮಾಡಿದ್ರು ತಪ್ಪು, ಅದೇ ನೀವು ಮಾಡಿದ್ರೆ ಏನು ತಪ್ಪಿಲ್ಲ. ನಿಮ್ಮ ದಬ್ಬಾಳಿಕೆ ದೌರ್ಜನ್ಯನಾ ಎಷ್ಟು ಅಂತಾ ಸಹಿಸೋದು? ನೀವು ಸತ್ಯ ಹರಿಶ್ಚಂದ್ರ ಅಂತೀರಲ್ಲ, ನಿಮಗೆ ಕಾರ್ಯಕ್ರಮ ಮಾಡೋಕೆ ದುಡ್ಡು ಎಲ್ಲಿಂದ ಬಂತು? ಕುಮಾರಸ್ವಾಮಿ ಅವರೇ ಬೇನಾಮಿಯಿಂದ ಕಂಟ್ರ್ಯಾಕ್ಟರ್ ಕೆಲಸ ಮಾಡಿ ದಂಧೆ ಮಾಡಿಸಿದ್ದೀರಾ? ಹೆಲಿಕಾಪ್ಟರ್ ನಲ್ಲಿ ಹಾಕಿಸಿಕೊಂಡಿರೋದು ಹೂ ಅಲ್ಲ. ಜನರ ಪಾಪದ ಹಣ ನಿಮ್ಮ ಮೇಲೆ ಹಾಕಿಸಿಕೊಂಡಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸ್ತ್ರೀ ಸಂಘದ ಸಾಲ ಮನ್ನಾ ಸುಳ್ಳು ಭರವಸೆ: ಕಳೆದ ಬಾರಿ ಚುನಾವಣೆ ವೇಳೆ ಸ್ರ್ರೀ ಶಕ್ತಿ ಸಂಘದ ಸಾಲ ಮನ್ನಾ ಮಾಡ್ತೀನಿ ಅಂತಾ ಹೇಳಿದ್ದರು. ಆದರೆ, ಸಾಲ ಎಲ್ಲಿ ಮನ್ನಾ ಮಾಡಿದ್ದಾರೆ. ಚುನಾವಣೆ ವೇಳೆ ನೀವು ಜನರಿಗೆ ಮಂಕುಬೂದಿ ಎರೆಚುತ್ತೀದ್ದೀರಾ. ಬಹಳಷ್ಟು ಜನರು ತುಂಬಾ ಸಂಕಟ ಅನುಭವಿಸಿದ್ದಾರೆ. ರಾಮನಗರ ಜಿಲ್ಲೆಯ ಜನರು ಕುಮಾರಸ್ವಾಮಿಯ ಮಾತುಗಳನ್ನು ನಂಬಬೇಡಿ. ಕುಮಾರಸ್ವಾಮಿ ಶಾಸಕರಾದ ಮೇಲೆ ಚನ್ನಪಟ್ಟಣದಲ್ಲಿ ಒಂದೇ ಒಂದು ನಿವೇಶನ, ಮನೆ ಹಂಚಿಲ್ಲ. ನಾವು ಫಲಾನಿಭವಿಗಳಿಗೆ ಜಮೀನು ಹಂಚಿದ್ದೇವೆ. ಕ್ಷೇತ್ರದಲ್ಲಿ ಕುಮಾರಸ್ವಾಮಿಯ ಶ್ರಮ ಏನಿಲ್ಲ. ಮೂರು ಸಾವಿರ ಮನೆಗಳು ಕ್ಷೇತ್ರಕ್ಕೆ ಬಂದಿವೆ. ಈಗಾಗಲೇ ಪಂಚಾಯಿತಿಯಿಂದ ಅನುಮೋದಿಸಿಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಮನೆ ಹಂಚಿಕೆ ಮಾಡುವ ಕೆಲಸ ಆಗುತ್ತದೆ ಎಂದರು.
ಉಡಾಫೆ ಮಾತುಗಳನ್ನು ಬಿಡಬೇಕು: ಇನ್ನಾದರೂ ಕುಮಾರಸ್ವಾಮಿ ಉಡಾಫೆ ಮಾತುಗಳನ್ನು ಆಡೋದು ಬಿಡಬೇಕು. ಅವರ ಪಂಚರತ್ನ ರ್ಯಾಲಿಯನ್ನು ನೋಡಿದ್ದೇನೆ. ಮುಸ್ಲಿಂ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ ಕೂಗಿದ್ದನ್ನು ನೋಡಿದ್ದೇನೆ. ನಮ್ಮ ಸರ್ಕಾರದಲ್ಲಿ ಅತಿ ಹೆಚ್ಚು ಮುಸ್ಲಿಂ ಜನರಿಗೆ ಅನುಕೂಲವಾಗಿದೆ. ಟೋಪಿ ಹಾಕಿಕೊಂಡು ಮಸೀದಿಗೆ ಹೋಗಿ ವೋಟ್ ಕೇಳೊದಲ್ಲ. ನಾವು ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಜಿಲ್ಲೆಯ ಒಬ್ಬರೇ ಒಬ್ಬ ಮುಖಂಡನನ್ನು ಅವರ ಮನೆಯ ಒಳಗಡೆ ಸೇರಿಸಿಕೊಳ್ಳುತ್ತಿರಲಿಲ್ಲ. ಒಂದೇ ಒಂದು ರಾಜಕೀಯ ಸ್ಥಾನ ಮಾನವನ್ನು ಜಿಲ್ಲೆಯ ಮುಖಂಡರಿಗೆ ಕೊಡಲಿಲ್ಲ. ಇಡೀ ಜಿಲ್ಲೆಯ ಜನರನ್ನು ಗುಲಾಮರ ರೀತಿ ಅವರ ಅಪ್ಪ ಮಗ ನೋಡಿಕೊಳ್ಳುತ್ತಿದ್ದಾರೆ. ಜನರ ಇವರ ಮಾತಿಗೆ ಮನ್ನಣೆ ಕೊಡೊದಿಲ್ಲ ಎಂದರು.
ಸದನದಲ್ಲಿ ಸಮಸ್ಯೆ ಚರ್ಚಿಸದೇ ಪಂಚರತ್ನ ರಥಯಾತ್ರೆ ಮಾಡುವ ಶಾಸಕರು: ಚಲುವರಾಯಸ್ವಾಮಿ ಟೀಕೆ
ಇಬ್ರಾಹಿಂ ಒಬ್ಬ ಕಾಮಿಡಿಯನ್: ಸಂತೋಷ್ ಜೀ ಅವರು ಪಂಚೆ ಹಾಕಿಕೊಳ್ತಾರೆ ಎಂದು ಹೇಳಿರುವ ಸಿಎಂ ಇಬ್ರಾಹಿಂ ಒಬ್ಬ ಕಾಮಿಡಿಯನ್ ಆಗಿದ್ದಾರೆ. ಪಂಚೆ ಹಾಕಿಕೊಳ್ಳೊದು ನಮ್ಮ ಸಂಸ್ಕೃತಿ. ನೀವೊಬ್ಬ ರಾಜ್ಯಾಧ್ಯಕ್ಷ ನಿಮ್ಮ ಮಾತಿನ ಮೇಲೆ ಹಿಡಿತವಿರಬೇಕು. ರಾಮನಗರ- ಚನ್ನಪಟ್ಟಣ ಕ್ಷೇತ್ರದಲ್ಲಿ 2023 ಕ್ಕೆ ಜನ ತಕ್ಕ ಉತ್ತರ ಕೊಡ್ತಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆರ್ ಟಿಇ ನಲ್ಲಿ ಅವಕಾಶ ಇತ್ತು. ಅದನ್ನು ತೆಗೆದುಹಾಕಿದ್ದು ಇದೇ ಕುಮಾರಸ್ವಾಮಿ. ಇವಾಗ ಏನೋ ಪುಂಗ್ತಾ ಇದ್ದಾರಲ್ಲ ಅದೆಲ್ಲಾ ಸುಳ್ಳು. ಚುನಾವಣೆ ಬಂದ್ರೆ ಕಣ್ಣೀರು ಹಾಕಿ, ಇದೇ ಕೊನೆ ಚುನಾವಣೆ ಅಂತಾ ಹೇಳ್ತಾರೆ. ಕುಮಾರಸ್ವಾಮಿ ಅವರು ಹಗಲು ಕನಸು ಕಾಣೋದು ಬಿಡಬೇಕು ಎಂದು ಹೇಳಿದರು.
ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೇನೆ: ನನಗೆ ಮಾತೃ ಪಕ್ಷ ಬಿಜೆಪಿ ಆಗಿದೆ. ನಾನು 2023 ಕ್ಕೆ ಬಿಜೆಪಿಯಿಂದಲೇ ಸ್ಪರ್ಧೆ ಮಾಡ್ತೇನೆ. ನಮ್ಮ ಕ್ಷೇತ್ರ ಅಭಿವೃದ್ಧಿ ಆಗಿರೋದು ಬಿಜೆಪಿಯಿಂದ. ನನಗೆ ವೈಯಕ್ತಿಕವಾಗಿ ಬಿಜೆಪಿ ಪಕ್ಷದಿಂದ ಹೆಸರು ಗಳಿಸಿದ್ದೇನೆ. ಕುಮಾರಸ್ವಾಮಿ ಕೂಡ ಬಿಜೆಪಿಗೆ ಥ್ಯಾಂಕ್ಸ್ ಹೇಳಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಏನು ಮಾಡಲಿಲ್ಲ. ಬಿಜೆಪಿ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಕುಮಾರಸ್ವಾಮಿ ಈ ಹಿಂದೆ ಒಂದೇ ಸಲ ನನ್ನನ್ನು ಮೋಸ ಮಾಡಿ ಸೋಲಿಸಿದ್ದಾರೆ. ಜನರಿಗೆ ಸುಳ್ಳು ಆಶ್ವಾಸನೆ ಕೊಟ್ಟು ವೋಟ್ ಹಾಕಿಸಿಕೊಂಡಿದ್ದಾರೆ. ನನ್ನನ್ನು ತೀರಿಸುವವರು, ಉಳಿಸುವವರು ನನ್ನ ಕ್ಷೇತ್ರದ ಮತದಾರರು ಎಂದು ಭಾವನಾತ್ಮಕವಾಗಿ ಹೇಳಿದರು.