
ಶಿವಮೊಗ್ಗ (ಮಾ.31): ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತವರ ಬೆಂಬಲಿಗರು ನನ್ನನ್ನು ಆಶೀರ್ವದಿಸಿದ ಮಠಾಧೀಶರಿಗೆ ಬೆದರಿಕೆ ಹಾಕಿದ್ದಾರೆ ಎಂಬುದು ಸತ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮಠಾಧೀಶರಿಗೆ ಬೆದರಿಕೆ ಹಾಕಿದ್ದೇನೆ ಎಂಬುದು ಸುಳ್ಳು. ಈ ಬಗ್ಗೆ ಈಶ್ವರಪ್ಪ ಅವರು ಚಂದ್ರಗುತ್ತಿಗೆ ಬಂದು ಆಣೆ-ಪ್ರಮಾಣ ಮಾಡಲಿ ಎಂಬ ಬಿ.ವೈ.ರಾಘವೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ಜೀವನದಲ್ಲಿ ಇಂತಹ ಆಣೆ ಪ್ರಮಾಣ ಮಾಡಿಲ್ಲ. ಇದರಲ್ಲಿ ನಂಬಿಕೆಯೂ ನನಗಿಲ್ಲ.
ಆದರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಭಾವ ಬರಬಾರದು ಎಂಬ ಕಾರಣಕ್ಕೆ ಅವರ ಆಹ್ವಾನಕ್ಕೆ ನಾನು ಸಿದ್ಧ ಎಂದು ಈಶ್ವರಪ್ಪ ಹೇಳಿದರು. ಚಂದ್ರಗುತ್ತಿ ಅಥವಾ ಅಯೋಧ್ಯೆಯೇ ಆಗಲಿ, ನಾನು ಬಂದು ಪ್ರಮಾಣ ಮಾಡಲು, ಗಂಟೆ ಹೊಡೆಯಲು ಸಿದ್ಧ. ಆದರೆ, ರಾಘವೇಂದ್ರ ಅಥವಾ ಅವರ ಬೆಂಬಲಿಗರು ಸಾಧು ಸಂತರಿಗೆ, ನನ್ನ ಬೆಂಬಲಿಸಿದ ಹೆಣ್ಣುಮಕ್ಕಳಿಗೆ ಕಣ್ಣೀರು ಹಾಕಿಸಿ ನೋವು ಕೊಟ್ಟಿಲ್ಲ ಎಂದು ಪ್ರಮಾಣ ಮಾಡಬೇಕು. ನನ್ನ ಮಗ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್ ಕೊಡಿಸಿ ಗೆಲ್ಲಿಸುವುದಾಗಿ ಹೇಳಿಲ್ಲ ಎಂದು ಪ್ರಮಾಣ ಮಾಡಲಿ. ಸುಳ್ಳು ಹೇಳಿದ್ದನ್ನು ಒಪ್ಪಿಕೊಳ್ಳಲಿ ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಅನ್ಯಾಯ: ಕೆ.ಎಸ್.ಈಶ್ವರಪ್ಪ ಆರೋಪ
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ವಾಟ್ಸಪ್ ಮೂಲಕ ನನಗೆ ಕರೆ ಮಾಡಿದ್ದರು. ಆದರೆ, ನಾನು ಕರೆ ಸ್ವೀಕರಿಸಲಿಲ್ಲ. ಬಳಿಕ ವಾಪಸ್ ಕಾಲ್ ಮಾಡುವಂತೆ ಮೆಸೆಜ್ ಹಾಕಿದರು. ಅದಕ್ಕೂ ನಾನು ಪ್ರತಿಕ್ರಿಯಿಸಲಿಲ್ಲ. ಬಹುಶಃ ಟಿಕೆಟ್ ನೀಡುವ ಉದ್ದೇಶದಿಂದ ಕರೆ ಮಾಡಿರಬಹುದು. ಆದರೆ, ಬಿಜೆಪಿ ನನ್ನ ತಾಯಿ. ಹೀಗಾಗಿ ಬೇರೆ ಪಕ್ಷದಿಂದ ಸ್ಪರ್ಧಿಸುವ ಆಲೋಚನೆ ಕೂಡ ಮಾಡಲಾರೆ ಎಂದು ಈಶ್ವರಪ್ಪ ಹೇಳಿದರು.
ಧರ್ಮ, ಸಂಸ್ಕೃತಿ ರಕ್ಷಿಸಿದವರು ನಮಗೆ ಆದರ್ಶವಾಗಲಿ: 15ನೇ ವರ್ಷಕ್ಕೆ ಕತ್ತಿ ಹಿಡಿದು ದೇಶ ಸಂರಕ್ಷಣೆ, ಧರ್ಮಜಾಗೃತಿಗಾಗಿ ತನ್ನ ಮುಡಿಪಾಗಿಟ್ಟ ಶಿವಾಜಿ ಮಹಾರಾಜರ ಜೀವನಗಾಥೆಯ ಸಮಾಜದ ತಾಯಂದಿರು ಮಕ್ಕಳಿಗೆ ಹೇಳಿ ಹುರಿದುಂಬಿಸಬೇಕು ಎಂದು ಧರ್ಮಸ್ಥಳ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ನಡೆದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ನಮಗೆ ದೇಶದ ಧರ್ಮ, ಸಂಸ್ಕೃತಿ ರಕ್ಷಿಸಿದವರು ಆದರ್ಶ ಹಾಗೂ ಮಾದರಿಯಾಗಬೇಕು.
ಮಹಾಭಾರತ, ರಾಮಾಯಣ ಮೊದಲಾದ ಗ್ರಂಥಗಳು ದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಬದಲಾಗಿ ತನ್ನೊಂದಿಗೆ ಇರುವವರ ಸಮಾನತೆಯಿಂದ ನೋಡುವ, ಪ್ರೀತಿ, ವಿಶ್ವಾಸ, ಸಹೋದರತೆಗಳ ಬೆಳೆಸುವ ಕೆಲಸ ಮಾಡಿದರು. ನಾವು ಮತ್ತೊಬ್ಬರ ಬಗ್ಗೆ ದ್ವೇಷ, ಅಸೂಯೆ, ವಿರೋಧಗಳ ಇಟ್ಟುಕೊಂಡು ಬದುಕುವುದು ಬಿಟ್ಟು, ದೇಶಕಟ್ಟುವ, ಸಂಸ್ಕೃತಿ, ಆಚಾರ-ವಿಚಾರಗಳ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ರಾಷ್ಟ್ರೀಯತೆ ಪ್ರತಿನಿಧಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ನಮ್ಮದು ಮೃತ್ಯುಂಜಯ ಸಮಾಜ:
ಈಶ್ವರಪ್ಪ ಬಿಜೆಪಿ ಪ್ರಾಯೋಜಿತ ಡಮ್ಮಿ ಅಭ್ಯರ್ಥಿ: ಆಯನೂರು ಮಂಜುನಾಥ್ ಟೀಕೆ
ದಿಕ್ಸೂಚಿ ಭಾಷಣ ಮಾಡಿದ ದಕ್ಷಿಣ ಪ್ರಾಂತ್ಯ ಗೋರಕ್ಷ ಪ್ರಮುಖ ಮುರಳಿಕೃಷ್ಣ ಭಟ್ ಅಸಂತಡ್ಕ, ಹಲವು ವಿದೇಶಿಗರಿಂದ ದೇಶದ ಮೇಲೆ ೮೦೦ಕ್ಕೂ ಹೆಚ್ಚು ವರ್ಷ ನಿರಂತರ ದಾಳಿ ನಡೆದು ನಮ್ಮತನ ಹಾಳು ಮಾಡುವ ಕೆಲಸ ನಡೆದಿತ್ತು. ಆದರೆ ನಮ್ಮದು ಮೃತ್ಯುಂಜಯ ಸಮಾಜವಾಗಿದ್ದು ಎಲ್ಲವನ್ನೂ ಮೆಟ್ಟಿ ನಿಂತಿದೆ. ಈಗ ಜಗತ್ತಿನ ಎಲ್ಲ ಇಸಂಗಳು, ಧರ್ಮಗಳು ಭಾರತದತ್ತ ನೋಡುತ್ತಿವೆ. ಹಿಂದೂಗಳನ್ನು ಖಾಫೀರರು ಎಂದು ಕರೆದ ದೇಶದಲ್ಲಿ ೨೭ ಎಕರೆ ಜಾಗದಲ್ಲಿ ದೇವಸ್ಥಾನ ಕಟ್ಟಿದ ಕಾಲವಿದು. ಇದು ಭೋಗ ಭೂಮಿಯಲ್ಲ, ಯೋಗ ಭೂಮಿ. ಜಗತ್ತಿನ ಏಕೈಕ ದೇವಭೂಮಿ ಭಾರತ ಮಾತ್ರ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.