
ಯಾದಗಿರಿ (ಮಾ.30): ನಮ್ಮ ಸರ್ಕಾರದ ಗ್ಯಾರಂಟಿಗಳಿಂದ ಸಾಕಷ್ಟು ಜನರಿಗೆ ಸಹಾಯವಾಗಿದೆ. ಪ್ರತಿಯೊಂದು ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗಿದೆ. ಅನ್ನಭಾಗ್ಯ ಯೋಜನೆಯಡಿ 4 ಲಕ್ಷ ಜನ ಫಲಾನುಭವಿಗಳಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ರಾಜ್ಯಾದ್ಯಂತ ಪ್ರತಿಯೊಂದು ದೇವಸ್ಥಾನಕ್ಕೆ ಉಚಿತವಾಗಿ ಪ್ರಯಾಣಿಸಿ ದರ್ಶನ ಪಡೆಯುತ್ತಿದ್ದಾರೆ ಎಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇಂದು ಯಾದಗಿರಿಯ ಗುರುಮಠಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ, ಹಿಂದೆ ಬಿಜೆಪಿಯವರು ದೇವಸ್ಥಾನಕ್ಕೆ ಹೋಗಿ ಅಂದ್ರೂ ಜನರು ಹೋಗಲಿಲ್ಲ. ಆದರೆ ಶಕ್ತಿ ಯೋಜನೆಯಿಂದಾಗಿ ಜನರು ಉಚಿತವಾಗಿ ಹೋಗುತ್ತಿದ್ದಾರೆ. ಈ ಯೋಜನೆಯಿಂದ ಇಂದು ದೇವಸ್ಥಾನಗಳು ತುಂಬಿ ತುಳುಕುತ್ತಿವೆ. ಇದನ್ನ ನಾನು ಹೇಳ್ತಿಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗಡೆ ಅವರೇ ಹೇಳಿದ್ದಾರೆ ಎಂದರು.
ನನ್ನ ಹೆಣ ಬೀಳಿಸಿಯಾದ್ರೂ ಗೆಲ್ಲಲು ಬಿಜೆಪಿ ಪ್ಲಾನ್: ಸಚಿವ ಪ್ರಿಯಾಂಕ್ ಖರ್ಗೆ
ನಾವು ಈ ಎಲ್ಲ ಯೋಜನೆಗಳಿಗೆ ವಾರ್ಷಿಕವಾಗಿ 52 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರು ಇದನ್ನ "ಬಿಟ್ಟಿ ಭಾಗ್ಯ' ಅಂತಾ ಗೇಲಿ ಮಾಡ್ತಿದ್ದಾರೆ. ನಾವು ನಿಮ್ಮ ದುಡ್ಡು ನಿಮ್ಗೆ ಕೊಡಬೇಕು ಅಂತ ಅಂದುಕೊಂಡಿದ್ದೆವೆ. ಆದ್ರೆ ಬಿಜೆಪಿಯವರು ನಿಮ್ಮ ದುಡ್ಡು ಅವರ ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರದ್ದು 40% ಪರ್ಸೆಂಟ್ ಸರ್ಕಾರ ಅಂತ ಹೇಳಿದ್ದು ಎಂದರು.
ಇನ್ನು ಉಮೇಶ್ ಜಾಧವ ಕಲಬುರಗಿ ಸಂಸದರಲ್ಲ ಚಿಂಚೋಳಿ ಸಂಸದರು. ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೈಯಬೇಕು ಅಂದ್ರೆ ಮಾತ್ರ ಜಾಧವ್ ಬಾಯಿ ತೆಗೆಯುತ್ತಾರೆ. ಆದರೆ ಅಭಿವೃದ್ಧಿ ವಿಚಾರ ಬಂದಾಗ ಯಾವುದೇ ಕಾರಣಕ್ಕೂ ಬಾಯಿ ತೆಗೆಯೋದಿಲ್ಲ. ಮೋದಿ ಅವರು ಉಕ್ರೇನ್ ರಷ್ಯಾ ಯುದ್ದ ನಿಲ್ಲಿಸಿದವರು ಕರ್ನಾಟಕ ಜನರಿಗೆ ಬರ ಪರಿಹಾರ ಕೊಡಕೆ ಆಗಲ್ವಾ? ಏನ್ರಿ ಮೋದಿ ಗ್ಯಾರಂಟಿ ಎಲ್ಲಿದೆ? ಮೋದಿ ಗ್ಯಾರೆಂಟಿ ಟಿವಿಯಲ್ಲಿ, ನಮ್ಮ ಗ್ಯಾರೆಂಟಿ ನಿಮ್ಮ ಕೈಯಲ್ಲಿ! ಇದನ್ನ ನಂಬಿಕೊಂಡು ಕೋಲಿ, ಕುರುಬ ಸಮುದಾಯದ ಜನ ಓಟ್ ಹಾಕಿದ್ರು. ಆದ್ರೆ ಎಲ್ಲಿ ಯಾರಿಗೆ ಎಸ್‌ಟಿ ಸೇರಿಸಿದ್ರು? ನಾವು ಏನೇನು ಮಾಡಿದ್ದೇವೆ ಅಂತಾ ಕೇಳಿ ಲೆಕ್ಕ ಕೊಡ್ತೇವೆ. ಮೋದಿ ಅವರ ಪ್ರತಿಯೊಂದು ಗ್ಯಾರಂಟಿಗಳಲ್ಲಿ 50% ನಮ್ಮ ಕನ್ನಡಿಗರಿದ್ದಿದೆ. ಆದ್ರೆ ನಮ್ಮ ಐದು ಗ್ಯಾರಂಟಿಗಳಲ್ಲಿ 100% ನಮ್ದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಕುರ್ಚಿಯಲ್ಲಿ ಕುಳಿತ್ತಿದ್ದಾರೆ ಅಂದ್ರೆ ಅದಕ್ಕೆ ಗುರುಮಠಕಲ್ ಜನರ ಆಶೀರ್ವಾದ ಎಂದರು.
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಪತ್ರ: ಎನ್ಕೌಂಟರ್ ಮಾಡೋದಾಗಿ ಧಮಕಿ
ಗುರುಮಠಕಲ್ ಜನರ ಒಡನಾಟ ನನಗಿಂತ ರಾಧಾಕೃಷ್ಣ ಅವರಿಗೆ ಹೆಚ್ಚಿದೆ. ಹೀಗಾಗಿ ಅವರಿಗೆ ಒಂದು ಬಾರಿ ಆಶೀರ್ವಾದ ಮಾಡಿ. ನಾವೆಲ್ಲ ಸೇರಿ ಯಾದಗಿರಿ ಜಿಲ್ಲೆಗೆ ಎತ್ತು ದುಡಿದ ಹಾಗೆ ದುಡಿಯುತ್ತೆವೆ. ಹೋದ ಬಾರಿ ನಮ್ಮ ತಪ್ಪಿನಿಂದ ಸೋಲಾಯ್ತು. ಬೇರೆ ಏನೋ ಆಯ್ತೋ ಇರಲಿ ಈಗ ಆ ತಪ್ಪು ಮಾಡೋದು ಬೇಡಾ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.