* ರಾಮುಲು ರಮೇಶ್ ನಡುವೆ ಡಿಸಿಎಂ ಸ್ಥಾನಕ್ಕಾಗಿ ಬಿಗ್ ಫೈಟ್
* ರಮೇಶ್ ಒತ್ತಡಕ್ಕೆ ಮತ್ತೆ ರಾಮುಲುಗೆ ಡಿಸಿಎಂ ಮಿಸ್ ಆಗುವ ಸಾಧ್ಯತೆ
* ಶೀಘ್ರದಲ್ಲೇ ಸಿಡಿ ಪ್ರಕರಣ ಮುಗಿಯುವ ನಿರೀಕ್ಷೆಯಲ್ಲಿರೋ ಜಾರಕಿಹೊಳಿ
ಬಳ್ಳಾರಿ(ಜು.30): ಶ್ರೀರಾಮುಲು ಉಪಮುಖ್ಯಮಂತ್ರಿ ಕನಸಿಗೆ ರಮೇಶ್ ಜಾರಕಿಹೊಳಿ ಅಡ್ಡಗಾಲು ಹಾಕಿದ್ರಾ? ಎಂಬ ಮಾತುಗಳು ಕೇಳಿ ಬರುತ್ತಿವೆ. ಹೌದು, ಎಸ್ಟಿ ಕಮ್ಯುನಿಟಿಯ ಪ್ರಬಲ ನಾಯಕರಾಗಿರುವ ರಾಮುಲು ರಮೇಶ್ ನಡುವೆ ಡಿಸಿಎಂ ಸ್ಥಾನಕ್ಕಾಗಿ ಬಿಗ್ ಫೈಟ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಒತ್ತಡಕ್ಕೆ ಮತ್ತೆ ರಾಮುಲುಗೆ ಡಿಸಿಎಂ ಮಿಸ್ ಆಗುವ ಸಾಧ್ಯತೆ ಇದೆ. ರಾಮುಲುಗೆ ಡಿಸಿಎಂ ಕೊಟ್ಟರೆ ರಮೇಶ್ ಮುನಿಸು ಮಾಡಿಕೊಳ್ಳತ್ತಾರಂತೆ. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬರೋದಕ್ಕೆ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ಈಗ ರಾಮುಲುಗೆ ಡಿಸಿಎಂ ಆಗೋದಕ್ಕೆ ಸಾಹುಕಾರ್ ವಿರೋಧ ಮಾಡ್ತಿದ್ದಾರೆ ಅಂತ ಶ್ರೀರಾಮುಲು ಬೆಂಬಲಿಗರು ಆರೋಪಿಸಿದ್ದಾರೆ.
undefined
ಬೊಮ್ಮಾಯಿ ಜತೆ ಮೂವರಿಗೆ ಬಂಪರ್: ಶ್ರೀರಾಮುಲು ಕನಸು ನನಸು!
ಶೀಘ್ರದಲ್ಲೇ ಸಿಡಿ ಪ್ರಕರಣ ಮುಗಿಯುವ ನಿರೀಕ್ಷೆಯಲ್ಲಿರೋ ರಮೇಶ್ ಜಾರಕಿಹೊಳಿ ಒಮ್ಮೆ ರಾಮುಲುಗೆ ಡಿಸಿಎಂ ಕೊಟ್ರೇ ಎಸ್ಪಿ ಸಮುದಾಯದಲ್ಲಿ ಪ್ರಭಲರಾಗುತ್ತಾರೆ. ನಂತರ ರಮೇಶ್ ಜಾರಕಿಹೊಳಿಗೆ ಡಿಸಿಎಂ ಪಟ್ಟ ಮಿಸ್ ಆಗೋ ಸಾಧ್ಯತೆ ಇದೆ. ಒಂದೇ ಕಮ್ಯೂನಿಟಿಯ ಇಬ್ಬರು ನಾಯಕರು ಮುನಿಸಿಕೊಂಡ್ರೆ ಕಷ್ಟ. ಹೀಗಾಗಿ ಬಿಜೆಪಿ ಕೂಡ ಇದೀಗ ಅಂತಾ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ ಎಂದೇ ಹೇಳಲಾಗುತ್ತಿದೆ. ಕಳೆದ ಬಾರಿ ಇದೇ ಸನ್ನಿವೇಶ ಎದುರಾದಾಗ ಬಿಜೆಪಿ ಇಬ್ಬರನ್ನೂ ಸಚಿರನ್ನಾಗಿ ಮಾಡಿ, ಡಿಸಿಎಂ ನೀಡಿರಲಿಲ್ಲ ಹೈ ಕಮ್ಯಾಂಡ್. ಆದರೆ ಈ ಬಾರಿ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.