ಹೊಸ ಸಂಪುಟಕ್ಕೆ ವಲಸಿಗರು : ಈ ಬಗ್ಗೆ ಬಿಎಸ್‌ವೈರಿಂದಲೇ ಅಂತಿಮ ನಿರ್ಣಯ

By Kannadaprabha NewsFirst Published Jul 30, 2021, 7:56 AM IST
Highlights
  • ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರ ಆಡಳಿತದಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ
  • ನಾನು ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೂ ಹೇಳಿದ್ದೇನೆ
  • ನಿಮ್ಮ ಏನೇ ಕೆಲ ಕಾರ್ಯಗಳಿದ್ದರೂ ಸಿಎಂ ಕಂಡು ಮಾತನಾಡಬೇಕು ಎಂದು

 ಬೆಂಗಳೂರು (ಜು.30): ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ಅವರ ಆಡಳಿತದಲ್ಲಿ ನಾನು ಹಸ್ತಕ್ಷೇಪ  ಮಾಡಲು ಹೋಗುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಯಾವುದಕ್ಕೂ ಮಧ್ಯ ಪ್ರವೇಶ ಮಾಡುವುದಿಲ್ಲ. ನಾನು ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೂ ಹೇಳಿದ್ದೇನೆ. ನಿಮ್ಮ ಏನೇ ಕೆಲ ಕಾರ್ಯಗಳಿದ್ದರೂ ಸಿಎಂ ಕಂಡು ಮಾತನಾಡಬೇಕು ಎಂದು ಎಂದರು. 

ಅಧಿಕಾರ ಇಲ್ಲದಿದ್ದರೂ ಕೆಲಸ ಮಾಡಿ ತೋರಿಸುವೆ: ಬಿಎಸ್‌ವೈ!

ಸಂಪುಟ ರಚನೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು ತಮಗೆ ಯಾರೂ ಸೂಕ್ತ ಎನಿಸುತ್ತಾರೋ ಅವರನ್ನು ಸಂಪುಟಕ್ಕೆ  ತೆಗೆದುಕೊಂಡು  ಕೆಲಸ ಮಾಡುವ ಪೂರ್ಣ ಸ್ವಾತಂತ್ರ್ಯ ಮುಖ್ಯಮಂತ್ರಿಗಳಿಗಿದೆ. 

ಬೊಮ್ಮಾಯಿ ಅವರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಬರಬೇಕು. ಬಂದ ಮೇಲೆ ಆ ಬಗ್ಗೆ ತೀರ್ಮಾನ ಮಾಡುವುದು ಅವರ ಕೆಲಸ ಎಂದರು. 

ವಲಸಿಗ ಶಾಸಕರಿಗೆ ಬೊಮ್ಮಾಯಿ ಅವರ ಸಂಪುಟದಲ್ಲಿ ಅವಕಾಶ ಸಿಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಯಾರು ನಮ್ಮ ಸರ್ಕಾರ ಬರಲು ಕಾರಣರಾಗಿದ್ದಾರೋ ಅವರ ಪರವಾಗಿ ನಾನು ಸಿಎಂ ಬೊಮ್ಮಾಯಿ ಅವರ ಬಳಿ ಮಾತನಾಡುತ್ತೇನೆ. ಅವರು ಯೋಚಿಸುತ್ತಾರೆ. ನಾನು ಸಲಹೆ ನೀಡುತ್ತೇನೆ ಎಂದರು. 

click me!