ಪ್ರಧಾನಿ ಅವಹೇಳನ ವಿಚಾರ: ಶಾಸಕ ಪಿಟಿ ಪರಮೇಶ್ವರ ಬಂಧಿಸುವಂತೆ ಆಗ್ರಹ

By Kannadaprabha News  |  First Published Nov 27, 2022, 1:25 PM IST
  • ಶಾಸಕ ಪಿಟಿ ಪರಮೇಶ್ವರ ಬಂಧಿಸುವಂತೆ ಆಗ್ರಹ
  • ಪ್ರಧಾನಿ ನರೇಂದ್ರ ಮೋದಿ ಅವಹೇಳನ
  • ಶಾಸಕ ಪಿ.ಟಿ.ಪಿ ವಿರುದ್ಧ ದೂರು ದಾಖಲು

ಹೂವಿನಹಡಗಲಿ (ನ.27) : ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನ ಮಾತನಾಡಿರುವ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ವಿರುದ್ಧ ಪಟ್ಟಣದ ಠಾಣೆಯಲ್ಲಿ ಮಂಡಲ ಬಿಜೆಪಿ ಶನಿವಾರ ದೂರು ದಾಖಲು ಮಾಡಿದೆ.

ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಬಿ.ಚಂದ್ರನಾಯ್ಕ ಮಾತನಾಡಿ, ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಪಾಪದ ಕೊಡ ತುಂಬಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ ಶಾಸಕರನ್ನು ಈ ಕೂಡಲೇ ಪೊಲೀಸರು ಬಂಧಿಸಬೇಕೆಂದು ಆಗ್ರಹಿಸಿದ ಅವರು, ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಬಾಡೂಟ ಆಯೋಜಿಸುತ್ತಿದ್ದಾರೆ.ಮತದಾರರನ್ನು ಹಣದಲ್ಲಿ ಖರೀದಿ ಮಾಡುವ ಹುನ್ನಾರ ನಡೆಸಿದ್ದಾರೆಂದು ಆರೋಪಿಸಿದರು.

Tap to resize

Latest Videos

undefined

ಪ್ರಧಾನಿಗೆ ಅವಾಚ್ಯ ನಿಂದನೆ : ಕ್ಷಮೆಯಾಚಿಸಿದ ಶಾಸಕ ಪರಮೇಶ್ವರ ನಾಯ್ಕ

ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಎಚ್‌.ಹನುಮಂತಪ್ಪ ಮಾತನಾಡಿ, ಈ ಕ್ಷೇತ್ರದ ಪ್ರಬುದ್ಧ ಮತದಾರರ ಮಾನ ಹರಾಜು ಹಾಕಿದ ಶಾಸಕರಿಗೆ ಸಂಸ್ಕೃತಿಯೇ ಗೊತ್ತಿಲ್ಲ,ವಿಶ್ವ ಮಾನ್ಯ® ಾಯಕನ ಚಾರಿತ್ರಿಕ ವಧೆ ಮಾಡಿರುವ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಇವರ ವಿರುದ್ಧ ದೂರು ದಾಖಲಿಸಿದ್ದೇವೆ. ಪೊಲೀಸರು ಕೂಡಲೇ ಪ್ರಮಾಣಿಕವಾಗಿ ತನಿಖೆ ಮಾಡಿ ಅವರ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕೆಂದು ಒತ್ತಾಯಿಸಿದರು.

ಪ್ರಧಾನಿ ಬಗ್ಗೆ ಕೀಳು ಮಟ್ಟದ ಶಬ್ಧಗಳಿಂದ ನಿಂದಿಸಿರುವ ಶಾಸಕ ಪಿಟಿಪಿ ಇವರ ಸದಸ್ಯತ್ವವನ್ನು ಸಭಾಧ್ಯಕ್ಷರು ರದ್ದು ಮಾಡಬೇಕೆಂದು ಆಗ್ರಹಿಸಿದ ಅವರು,ಈ ಸುಸಂಸ್ಕೃತ ಕ್ಷೇತ್ರಕ್ಕೆ ಇಂತಹ ದುರಂಹಕಾರಿ ಶಾಸಕರನ್ನು ಆಯ್ಕೆ ಮಾಡಿಕೊಂಡಿರುವುದು ದುರಂತ ಎಂದರು.

ಜಿಪಂ ಮಾಜಿ ಸದಸ್ಯ ಪಿ. ವಿಜಯಕುಮಾರ, ಬಿಜೆಪಿ ಜಿಲ್ಲಾ ವಕ್ತಾರ ಬಸವರಾಜ ಮಾತನಾಡಿ, ಕ್ಷೇತ್ರದ ಸ್ಥಳೀಯ ಗ್ರಾಪಂ ಸದಸ್ಯರ ಮೇಲೆ ಗೂಂಡಾಗಿರಿ ಮಾಡಿರುವ ಪಿ.ಟಿ. ಪರಮೇಶ್ವರ ನಾಯ್ಕ ರೌಡಿ ಎಂಎಲ್‌ಎ ಆಗಿದ್ದಾರೆ. ಇಂತಹ ದುಷ್ಟಶಾಸಕರನ್ನು ಕಿತ್ತು ಹಾಕುವ ಕಾಲ ಸನಿಹದಲ್ಲಿದೆ ಎಂದರು.

ಮುಖಂಡ ಓದೋ ಗಂಗಪ್ಪ ಮಾತನಾಡಿ, ಸಂವಿಧಾನದ ಆಶಯ ಗೊತ್ತಿಲ್ಲದ ಸರ್ವಾಧಿಕಾರಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ, ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ಗಳನ್ನು ದಾಖಲಿಸಿ ಜನರಿಗೆ ಹಿಂಸೆ ನೀಡಿದ್ದಾರೆ. ಮಹಿಳೆಯರ ಬಗ್ಗೆ ಗೌರವ ಇಲ್ಲ, ಮತ ಹಾಕಿದ ಮತದಾರರನ್ನು ಅವಮಾನಿಸುವ ಇವರನ್ನು 2023ರ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಹೇಳಿದರು.

ಮುಖಂಡರಾದ ಎಸ್‌.ದೂದಾನಾಯ್ಕ, ಶಿವಪುರ ಸುರೇಶ, ರಾಮಾನಾಯ್ಕ ಮಾತನಾಡಿ, ಸುಸಂಸ್ಕೃತ ರಾಜಕಾರಣಿ ಎಂ.ಪಿ.ಪ್ರಕಾಶರು ನಿಮಗೆ ರಾಜಕೀಯ ಮರು ಜೀವ ನೀಡಿದ್ದಾರೆ,ಅವರ ಮನೆತನಕ್ಕೆ ದ್ರೋಹ ಬಗೆಯುತ್ತಿರುವ ನಿಮ್ಮಂತ ಮೋಸದ ರಾಜಕಾರಣಿ ಕ್ಷೇತ್ರಕ್ಕೆ ಬಂದಿರುವುದು ದುರಂತ. ಕ್ಷೇತ್ರದ ಜನ ಅಭಿವೃದ್ಧಿಗಾಗಿ ಆಯ್ಕೆ ಮಾಡಿದ್ದಾರೆ ಹೊರತು, 60 ಪರ್ಸೆಂಟ್‌ ಕಮಿಷನ್‌ ತಿನ್ನಲು ಅಲ್ಲ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಎಸ್‌. ಸಂಜೀವರೆಡ್ಡಿ ಮಾತನಾಡಿ, ನರೇಂದ್ರ ಮೋದಿ 13 ವರ್ಷ ಗುಜರಾತ್‌ ಸಿಎಂ, 9 ವರ್ಷ ದೇಶದ ಪ್ರಧಾನಿಯಾಗಿ ಸಾರ್ವಜನಿಕ ಜೀವನದಲ್ಲಿದ್ದಾರೆ.ದೇಶಕ್ಕಾಗಿ ಸೇವಕನಂತೆ ಕೆಲಸ ಮಾಡುತ್ತಿದ್ದಾರೆ.ನಿಮ್ಮಂತೆ ಮಗನನ್ನು ಬೇರೆಡೆ ಎಂಎಲ್‌ಎ ಮಾಡಲು ಪ್ರಯತ್ನ ಮಾಡುತ್ತಿಲ್ಲ, ಈ ಹೋರಾಟಕ್ಕೆ ಇಲ್ಲಿಗೆ ನಿಲ್ಲುವುದಿಲ್ಲ, ಪ್ರತಿಯೊಂದು ಹಳ್ಳಿಗಳಲ್ಲಿಯೂ ಹೋರಾಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆಂದು ಹೇಳಿದರು.

ಜನವರಿಗೆ ಕಾಂಗ್ರೆಸ್‌ನಿಂದ ದಲಿತ ಸಮಾವೇಶ: ಪರಂಗೆ ಸಂಪೂರ್ಣ ಜವಾಬ್ದಾರಿ

ವಿಜಯಲಕ್ಷ್ಮೇ,ಭಾಗ್ಯಮ್ಮ, ಈಟಿ ಲಿಂಗರಾಜ, ಕೊಟ್ರನಾಯ್ಕ, ಉಚ್ಚೆಂಗೆಪ್ಪ ಸೇರಿದಂತೆ ಇತರರು ಮಾತನಾಡಿದರು. ಎಂ.ಬಿ.ಬಸವರಾಜ, ಕೆ.ಬಿ.ವೀರಭದ್ರಪ್ಪ, ಮೋಹನ್‌ರೆಡ್ಡಿ, ಬಿ.ಶಿರಾಜ್‌, ಪರಶುರಾಮ ಸೇರಿದಂತೆ ಇತರರಿದ್ದರು. ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಬಿಜೆಪಿ ರಾರ‍ಯಲಿ ಹೊರಟು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ ಬಳಿಕ ಲಾಲ್‌ ಬಹದ್ಧೂರ್‌ ಶಾಸ್ತ್ರ ವೃತ್ತದಿಂದ ಡಾ.ಬಿ.ಆರ್‌.ಅಂಬೇಡ್ಕರ ರವರ ವೃತ್ತದ ಬಳಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

click me!