ಮೈಸೂರು ಮಹಾರಾಜರ ಸ್ಫೂರ್ತಿಯಿಂದ ವರುಣ ಮಾದರಿ ಕ್ಷೇತ್ರ ಮಾಡುವೆ: ಸಚಿವ ವಿ.ಸೋಮಣ್ಣ

By Kannadaprabha News  |  First Published Apr 28, 2023, 10:01 PM IST

ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡ ಕಟ್ಟಿದ್ದರೆ, ಮೈಸೂರನ್ನು ಮಹಾರಾಜರು ಬೆಳಸಿದ್ದಾರೆ. ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ವರುಣವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಕಟ್ಟುವ ಬಯಕೆ ಇದೆ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ. ಸೋಮಣ್ಣ ಹೇಳಿದರು. 


ಮೈಸೂರು (ಏ.28): ಬೆಂಗಳೂರನ್ನು ನಾಡಪ್ರಭು ಕೆಂಪೇಗೌಡ ಕಟ್ಟಿದ್ದರೆ, ಮೈಸೂರನ್ನು ಮಹಾರಾಜರು ಬೆಳಸಿದ್ದಾರೆ. ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ವರುಣವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಕಟ್ಟುವ ಬಯಕೆ ಇದೆ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ವಿ. ಸೋಮಣ್ಣ ಹೇಳಿದರು. ವರುಣ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ರೋಡ್‌ ಶೋ ಮೂಲಕ ಮತಯಾಚಿಸಿ ಅವರು ಮಾತನಾಡಿದರು. ವರುಣ ಕ್ಷೇತ್ರದಲ್ಲಿ ಜನರ ಜೀವನ, ಮೂಲ ಸೌಕರ್ಯಗಳು ಯಾವುದು ಸಮರ್ಪಕವಾಗಿಲ್ಲ. ಹಾಗಾಗಿ ನಿಮ್ಮ ಆಶೀರ್ವಾದ ಇದ್ದರೆ ನನ್ನ 45 ವರ್ಷಗಳ ರಾಜಕೀಯ ಜೀವನವನ್ನು ನಿಮ್ಮ ಜತೆ ಹಂಚಿಕೊಳ್ಳುತ್ತೇನೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ಇಲ್ಲಿಯೂ ಮಾಡಬೇಕು ಎಂಬ ಆಸೆ ನನಗಿದೆ ಎಂದರು.

ನನಗೂ ಒಮ್ಮೆ ಅವಕಾಶ ಕೊಡಿ: ಮೈಸೂರು - ವರುಣ ಕ್ಷೇತ್ರದ ಕ್ಷೇತ್ರದ ಜನತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಡಾ. ಯತೀಂದ್ರ ಅವರಿಗೆ 15 ವರ್ಷ ಅವಕಾಶ ಕೊಟ್ಟಿದ್ದೀರಿ. ಈ ಬಾರಿ ನನಗೆ ಅವಕಾಶ ಮಾಡಿಕೊಡಿ. 15 ವರ್ಷಗಳಲ್ಲಾಗದ ಅಭಿವೃದ್ಧಿಯನ್ನು ಕೇವಲ 5 ವರ್ಷಗಳ ಅವಧಿಯಲ್ಲಿ ಮಾಡಿ ತೋರಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಚಿತ್ರಣವನ್ನೇ ಬದಲಿಸುವೆ ಎಂದರು ಹೇಳಿದರು. ಕ್ಷೇತ್ರದ ಜನತೆ 15 ವರ್ಷಗಳಿಂದಲೂ ಅವರನ್ನೇ ಆಯ್ಕೆ ಮಾಡುತ್ತಾ ಬಂದಿದ್ದೀರಿ. ಆದರೆ, ಒಬ್ಬ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಆಗಬೇಕಿರುವಷ್ಟುಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಈ ಬಾರಿ ನನಗೊಂದು ಅವಕಾಶ ಕೊಡಿ. ಬೆಂಗಳೂರಿನ ಗೋವಿಂದರಾಜನಗರ ಮಾದರಿಯಲ್ಲಿ ವರುಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

Latest Videos

undefined

ವರುಣ ಕ್ಷೇತ್ರದಲ್ಲಿ ನನಗೆ 100 ಪಟ್ಟು ಗೆಲ್ಲುವ ವಿಶ್ವಾಸ: ಸಚಿವ ಸೋಮಣ್ಣ

ಜನ ನೀಡುವ ಮತಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. 15 ವರ್ಷ ಬೇರೊಬ್ಬರಿಗೆ ಮತ ನೀಡಿ ಜನ ಬೆಲೆ ತೆತ್ತಿದ್ದಾರೆ. ನನಗೆ ಕೊಡುವ ಮತ ವ್ಯರ್ಥವಾಗಲು ಬಿಡುವುದಿಲ್ಲ. ವರುಣವನ್ನು ಮತ್ತೊಂದು ಗೋವಿಂದರಾಜ ಕ್ಷೇತ್ರ ಮಾಡವ ಛಲವಿದೆ. ಆಡಳಿತ ಒಂದು ಸೂರಿನಡಿ ಬರಬೇಕು ಎಂಬ ಸ್ವಷ್ಟಕಲ್ಪನೆ ಎಲ್ಲ ಕೆಲವೂ ಅಲ್ಲೇ ಆಗಬೇಕು. ಅದಕ್ಕಾಗಿ ಕ್ಷೇತ್ರದಲ್ಲಿ ತಾಲೂಕು ಕೇಂದ್ರವಾಗಬೇಕು. ಜನರ ಕೆಲಸ ಅಲ್ಲೇ ಆಗಬೇಕು. 15 ವರ್ಷಗಳಿಂದ ಜನ ಮೈಸೂರು, ಟಿ. ನರಸೀಪುರ ಮತ್ತು ನಂಜನಗೂಡಿಗೆ ಅಲೆದಾಡುತ್ತಿದ್ದರಲ್ಲ ಇದ್ಯಾವ ನ್ಯಾಯ. ಮೈಸೂರು ತಾಲೂಕು ಎಂದಾದರೂ ಮಾಡಲಿ ವರುಣ ಕೇಂದ್ರವನ್ನಾದರೂ ಮಾಡಲಿ ಈ ವಿಷಯದಲ್ಲಿ ಚುನಾವಣೆ ಮುಗಿದ ಮೇಲೆ ಸ್ವಷ್ಟವಾದ ರೂಪು ರೇಷೆ ಸಿದ್ದಪಡಿಸುತ್ತೇನೆ. ವರುಣ ಕ್ಷೇತ್ರದಲ್ಲಿ 15 ವರ್ಷದಲ್ಲೇ ಏನೇನು ಅಭಿವೃದ್ಧಿಯಾಗಿಲ್ಲವೂ ಅದೆಲ್ಲವನ್ನು ಮಾಡುತ್ತೇನೆ ಎಂದರು.

ಉದ್ಯೋಗ ಸೃಷ್ಟಿಸಿಲ್ಲ: ಮೈಸೂರು ಭಾಗದ ಜನತೆ ಉದ್ಯೋಗವಿಲ್ಲದ ಬೆಂಗಳೂರಿನಲ್ಲಿ ಸಣ್ಣ ಕೆಲಸ ಮಾಡುತ್ತಿದ್ದಾರೆ. ವರುಣ ಮೈಸೂರು ಜಿಲ್ಲೆಯ ಹೃದಯ ಭಾಗ ಇಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ರೀತಿಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಾಡಿದ್ದರೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಬಹುದಿತ್ತು. ಆದರೆ, ಇದುವರೆಗೆ ಈ ಕ್ಷೇತ್ರದಲ್ಲಿ ಆಡಳಿತ ನಡೆಸಿದರು ಇಂತಹ ಕೆಲಸ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇವರೇನು ಇಲ್ಲೇ ವಾಸ ಇದ್ದಾರಾ?: ವಿ. ಸೋಮಣ್ಣ ಹೊರಗಿನವರು ನಾನು ಸ್ಧಳೀಯ ಎಂಬ ಟ್ರಂಪ್‌ ಕಾರ್ಡ್‌ ಬಳಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿದ್ದರಾಮನಹುಂಡಿಯಲ್ಲಿ ವಾಸ ಇದ್ದರಾ? ಅವರು ವಾಸ ಇರೋದು ಬೆಂಗಳೂರಿನಲ್ಲೇ ತಾನೆ. ಆಗೋಮ್ಮೆ, ಈಗೋಮ್ಮೆ ಬಂದು ಹೋಗುತ್ತಾರೆ. ನನ್ನನ್ನು ಕ್ಷೇತ್ರದ ಮತದಾರರ ಪ್ರಭುಗಳು ಎಲ್ಲಿಗೂ ಹುಡುಕಿಕೊಂಡು ಬರಬೇಕಿಲ್ಲ. 45 ವರ್ಷಗಳಿಂದಲೂ ನಾನೆ ನಿತ್ಯ ಬೆಳಗೆದ್ದು ಮತದಾರರ ಮನೆ ಬಾಗಿಲಿಗೆ ಹೋಗಿ ಮತದಾರರ ಮನೆ ಬಾಗಿಲಿನಲ್ಲೇ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತಾ ಬಂದಿದ್ದೇನೆ. ಇದನ್ನು ವರುಣದಲ್ಲೂ ಮುಂದುವರಿಸುವೆ ಎಂದು ಭರವಸೆ ನೀಡಿದರು.

ಶಿವಮೊಗ್ಗ ಏರ್‌​ಪೋ​ರ್ಟ್‌ನಲ್ಲಿ ‘ಕಾಂಗ್ರೆಸ್’ ಅಭ್ಯರ್ಥಿಗಳಿಗೆ ಶುಭ ಕೋರಿದ ರಾಹುಲ್‌ ಗಾಂಧಿ

ಸಂಸದ ಪ್ರತಾಪ್‌ ಸಿಂಹ, ಮಂಡಲ ಅಧ್ಯಕ್ಷ ವಿಜಯಕುಮಾರ್‌, ಜಂಗಲ್‌ಲಾಡ್ಜ್‌ ನಿಗಮದ ಮಾಜಿ ಅಧ್ಯಕ್ಷ ಅಪ್ಪಣ್ಣ, ಜಿಪಂ ಮಾಜಿ ಉಪಾಧ್ಯಕ್ಷ ಎಲ್‌. ಮಾದಪ್ಪ, ಮಾಜಿ ಸದಸ್ಯ ಮೆಲ್ಲಹಳ್ಳಿ ಸಿದ್ದೇಗೌಡ, ಮಹದೇಶ್ವರ ಬೆಟ್ಟಧರ್ಮದರ್ಶಿ ಮಂಡಳಿ ಮಾಜಿ ಅಧ್ಯಕ್ಷ ಆಲನಹಳ್ಳಿ ಮಹದೇವಸ್ವಾಮಿ, ಮುಖಂಡರಾದ ಎಸ್‌.ಎಂ. ಶಿವಪ್ರಸಾದ್‌, ಯು.ಎಸ್‌. ಶೇಖರ್‌, ಕೆ.ಎನ್‌. ರವಿಶಂಕರ್‌, ಜಯಣ್ಣ, ಚಿಕ್ಕಹಳ್ಳಿ ಕುಮಾರ, ಮೆಲ್ಲಹಳ್ಳಿ ಮಹದೇವಸ್ವಾಮಿ, ಎಸ್ಪಿ ಮೋರ್ಚಾ ಮಹದೇವಯ್ಯ ಇತರರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!