ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ರಿಂದ ಬೆಳಗಾವಿಗೆ ಅನ್ಯಾಯ: ಸಚಿವೆ ಹೆಬ್ಬಾಳಕರ್

By Kannadaprabha NewsFirst Published Apr 7, 2024, 1:44 PM IST
Highlights

ಬಡವರ ಅಭಿವೃದ್ಧಿ, ಮಹಿಳೆಯರ ಸಬಲೀಕರಣಕ್ಕಾಗಿ ಚಿಂತಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರದ ಕೈ ಬಲಪಡಿಸಬೇಕು ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 

ಬೆಳಗಾವಿ(ಏ.07): ಬೆಳಗಾವಿ ಜಿಲ್ಲೆಗೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸಾಕಷ್ಟು ಅನ್ಯಾಯ ಎಸಗಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು. ಅರಬಾವಿ ಪಟ್ಟಣದಲ್ಲಿರುವ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬೆಳಗಾವಿಗೆ ಬರಬೇಕಿದ್ದ ಐಐಟಿ ಕಾಲೇಜು, ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಳನ್ನು ತಡೆದರು. ಕೊರೋನಾ ವೇಳೆ ಹುಬ್ಬಳ್ಳಿಗೆ ಆಕ್ಸಿಜನ್ ಸಿಲಿಂಡರ್‌ಕೊಂಡೊಯ್ದರು. ಇದೀಗ ಬೆಳಗಾವಿಯನ್ನು ನನ್ನ ಕರ್ಮಭೂಮಿ ಅಂತಾರೆ. ಇಂತಹ ದ್ವಂದ್ವ ವ್ಯಕ್ತಿ ನಮಗೆ ಬೇಕಾ ಎಂದು ಪ್ರಶ್ನಿಸಿದರು.

ಬಡವರ ಅಭಿವೃದ್ಧಿ, ಮಹಿಳೆಯರ ಸಬಲೀಕರಣಕ್ಕಾಗಿ ಚಿಂತಿಸುವ ಪಕ್ಷ ಎಂದರೆ ಅದು ಕಾಂಗ್ರೆಸ್ ಮಾತ್ರ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರದ ಕೈ ಬಲಪಡಿಸಬೇಕು ಎಂದರು.

AGADISH SHETTAR: ಬೆಳಗಾವಿಯಲ್ಲಿ ಮೂಲ VS ವಲಸಿಗ ಸಮರ: ಕಾಂಗ್ರೆಸ್‌ಗೆ ಬಿಜೆಪಿ ನಾಯಕರಿಂದ ಕೌಂಟರ್ ಅಟ್ಯಾಕ್ !

ನುಡಿದಂತೆ ನಡೆದ ಸರ್ಕಾರ ನಮ್ಮದು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬೆಂಬಲಿಸಲು ಮನವಿ ಮಾಡಿದರು. ಅಲ್ಲದೆ, ಅರಭಾವಿ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು
ಸಂತಸ ವ್ಯಕ್ತಪಡಿಸಿದರು.

ಜನರಿಂದ ಉತ್ತಮ ಸ್ಪಂದನೆ:

ಪ್ರಚಾರಕ್ಕೆ ಹೋದ ಕಡೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಹೇಳಿದರು. ಹಿಂದೆ 2014ರಲ್ಲಿ ನನ್ನ ತಾಯಿ ಲೋಕಸಭೆಗೆ ಸ್ಪರ್ಧಿಸಿದ್ದಾಗ ಅವರಿಗೆ ಅರಭಾವಿ ಕ್ಷೇತ್ರದಲ್ಲಿ ಮುನ್ನಡೆ ಸಿಕ್ಕಿತ್ತು. ಈ ಬಾರಿ ನಿಮ್ಮ ಮನೆ ಮಗ ಸ್ಪರ್ಧಿಸಿದ್ದು, ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಮೃಣಾಲ್ ಹೆಬ್ಬಾಳಕರ್ ಹುಟ್ಟುಹಬ್ಬ ಆಚರಣೆ:

ಸಮಾರಂಭದ ವೇಳೆ ಕಾಂಗ್ರೆಸ್ ಅಭ್ಯರ್ಥಿಮೃಣಾಲ್ ಹೆಬ್ಬಾಳಕರ್ ಹುಟ್ಟುಹಬ್ಬ ಆಚರಿಸಲಾಯಿತು. ಕಾರ್ಯಕರ್ತರು ಕಡೆಯಿಂದ ಮೃಣಾಲ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಮೃಣಾಲ್ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಹಾರೈಸಿದರು. ಮಾವ ಶಿವಕುಮಾರ್‌ ಹಾಜರಿದ್ದರು.

ಮುಖಂಡರಾದ ಭೀಮಪ್ಪ ಹಂದಿಗುಂದ ಆನಿಕುಮಾರ ದಳವಾಯಿ, ಕೌಜಲಗಿ ಬ್ಲಾಕ್ ಅಧ್ಯಕ್ಷ ಪ್ರಕಾಶ ಅರಳಿ, ರಮೇಶ ಉಟಗಿ, ಲಕ್ಕಣ್ಣ ಸವಸುದ್ದಿ, ಬಾಬಾ ಜಮಖಂಡಿ, ಮಾಯಾಪ್ಪ ಕಂಚಿನಮಟ್ಟಿ, ಗಣಪತಿ ಈಡಿಗೇರ, ಮಾರುತಿ ಅಲೋಷಿ, ಮಾಯ ಪ್ಪ ಬೆನಚನಮರಡಿ, ಕರಿಯಪ್ಪ ಗೌಡಿ, ಸುರೇಶ ಪೂಜಾರಿ ಕಾರ್ಯಕರ್ತರು ಉಪಸ್ಥಿತರಿದ್ದರು

ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ

ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷ ಗಳಿಂದ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದ್ದು, ಬಡ ಜನರಿಗೆ ನೀಡ ಲಾಗುವ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡಿ ತು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಆರೋಪಿಸಿದರು.

ಹುಬ್ಬಳ್ಳಿ ಜನ್ಮಭೂಮಿ, ಬೆಳಗಾವಿ ನನ್ನ ಕರ್ಮಭೂಮಿ-ಶೆಟ್ಟರ್; ಮೊದಲು ಮನೆ ಅಡ್ರೆಸ್ ತೋರಿಸಲಿ ಎಂದ ಹೆಬ್ಬಾಳ್ಕರ್

ಅರಬಾವಿ ವಿಧಾನಸಭೆ ಕ್ಷೇತ್ರದ ವಡ್ಡರ ಹಟ್ಟಿಯಲ್ಲಿ ಶನಿವಾರ ನಡೆದ ಜಿಪಂ ಸಮ್ಮಿಲನ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಅಕ್ಕಿ ಕೊಡುವ ವಿಷಯದಲ್ಲೂ ಕೇಂದ್ರ ರಾಜಕೀಯ ಮಾಡಿತು. ಕೇಂದ್ರ ಸರ್ಕಾರ ಏನಿದ್ದರೂ ಶ್ರೀಮಂತರ ಪರ. ಅಂಬಾನಿ, ಅದಾನಿ ಅವರ ಸಾಲ ಮನ್ನಾ ಮಾಡುವ ಮೂಲಕ ಶ್ರೀಮಂತರ ಪರ ಎಂದು ನಿರೂಪಿಸಿದೆ. ಬಡವರ ಬಗ್ಗೆ ಸ್ವಲ್ಪವೂ ಕಾಲಜಿ ಹೊಂದಿಲ್ಲ ಎಂದು ಟೀಕಿಸಿದರು.

ಬೆಳಗಾವಿ ಅಭಿವೃದ್ಧಿಗೆ ನನ್ನದೇ ಆದ ಕನಸು ಗಳಿವೆ. ನಾನು ಸಂಸದನಾದರೆ ನಮ್ಮ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವೆ. ನಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಟೇಬಲ್ ಕುಟ್ಟಿ ಕೇಳುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಹೇಳಿದರು. ನಮಗೆ ಬರಬೇಕಾದ ಅನುದಾನ ಕೇಳಲು ನಾನು ಹಿಂಜರಿಯುವುದಿಲ್ಲ ಎಂದರು.

click me!