ನಾನು ಅನಂತ್‌ಕುಮಾರ್ ಹೆಗಡೆ ಅಣ್ತಮ್ಮ ಇದ್ದಂಗೆ, ಹೆಬ್ಬಾರ್ ಯಾವಕಡೆ ಗೊತ್ತಾಗ್ತಿಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ

Published : Apr 07, 2024, 01:16 PM ISTUpdated : Apr 10, 2024, 11:25 AM IST
ನಾನು ಅನಂತ್‌ಕುಮಾರ್ ಹೆಗಡೆ ಅಣ್ತಮ್ಮ ಇದ್ದಂಗೆ, ಹೆಬ್ಬಾರ್ ಯಾವಕಡೆ ಗೊತ್ತಾಗ್ತಿಲ್ಲ: ವಿಶ್ವೇಶ್ವರ ಹೆಗಡೆ ಕಾಗೇರಿ

ಸಾರಾಂಶ

ನಾನು ಮತ್ತು ಅನಂತ್ ಕುಮಾರ್ ಹೆಗಡೆ ಅವರು ಅಣ್ಣ ತಮ್ಮನ ಹಾಗೆ. ನಾವಿಬ್ಬರೂ ‌ಒಂದೇ ವಿಚಾರದಲ್ಲಿ ಕೆಲಸ‌ ಮಾಡಿಕೊಂಡು ಬಂದವರು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬೆಂಗಳೂರು (ಏ.07): ನಾನು ಮತ್ತು ಅನಂತ್ ಕುಮಾರ್ ಹೆಗಡೆ ಅವರು ‌ಒಂದೇ ವಿಚಾರದಲ್ಲಿ ಕೆಲಸ‌ ಮಾಡಿಕೊಂಡು ಬಂದವರು. ಅವರು 6 ಬಾರಿ ಸಂಸದರಾಗಿದ್ದವರು. ಅವರು ಕೂಡ ನಮ್ಮೊಂದಿಗೆ ಪ್ರಚಾರಕ್ಕೆ ಬರುವ ವಿಶ್ವಾಸ ನನಗೆ ಇದೆ. ನಾನು ಅನಂತ್ ಕುಮಾರ್ ಅಣ್ಣ ತಮ್ಮನ ಹಾಗೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

'ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದೊಂದಿಗೆ ಭಾನುವಾರ ಮಾತನಾಡಿದ ಅವರು, ನನಗೆ ಲೋಕಸಭಾ ಚುನಾವಣೆಯಲ್ಲಿ 6 ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಹೆಗಡೆ ಸಹಕಾರ ಬೇಕು. ಅವರ ಭೇಟಿಗೆ ಸಮಯ ಕೇಳಿದ್ದೇನೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ನಾನು ಅನಂತ್ ಕುಮಾರ್ ‌ಒಂದೇ ವಿಚಾರದಲ್ಲಿ ಕೆಲಸ‌ ಮಾಡಿಕೊಂಡು ಬಂದವರು. ಅವರು ಕೂಡ ಪ್ರಚಾರಕ್ಕೆ ಬರುವ ವಿಶ್ವಾಸ ನನಗೆ ಇದೆ. ನಾನು ಅನಂತ್ ಕುಮಾರ್ ಅಣ್ಣ ತಮ್ಮನ ಹಾಗೆ. ಮನೆಯಲ್ಲಿ‌ ಗಂಡ ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ ಬರ್ತದೆ. ಅದೇ ರೀತಿ ನನ್ನ ಅನಂತ್ ಕುಮಾರ್ ನಡುವೆ ಅಭಿಪ್ರಾಯ ಬೇದ ಇರಬಹದು. ಅಣ್ಣ ತಮ್ಮನ ನಡುವೆ ಅದೆಲ್ಲಾ ಸಾಮಾನ್ಯ ಎಂದು ಹೇಳಿದರು.

'ಅಮ್ಮನಿಗೆ ಚೈನ್‌ ಕೊಡ್ಬೇಕು ಅಂತಾ ತುಂಬಾ ಆಸೆ ಇತ್ತು.. ಆದ್ರೆ..' ವಾಯ್ಸ್‌ ಆಫ್‌ ಉತ್ತರಕನ್ನಡ ಕೇಳ್ತಾರಾ ನಮ್ಮ ನಾಯಕರು?

ಇನ್ನು ಶಾಸಕ ಶಿವರಾಮ್ ಹೆಬ್ಬಾರ್ ಅವರು ಯಾರ ಕಡೆ ನಿಮ್ಮ ಬೆಂಬಲ ಸ್ಪಷ್ಟವಾಗಿ ಹೇಳಬೇಕು.ಕಳೆದ ಒಂದು ವರ್ಷಗಳಿಂದ ಅವರ ನಡೆ ನುಡಿ ಬಿಜೆಪಿ ಪರವಾಗಿಲ್ಲ ಎಂಬುದು ಗೋಚರವಾಗುತ್ತಿದೆ. ನೀವು ಯಾವುದೇ ಕಾರಣಕ್ಕೂ ಮತದಾರರಿಗೆ ಗೊಂದಲ‌ ಮಾಡಬೇಡಿ. ಇದು ನಿಮಗೆ ಶೋಭೆ ತರೋದಿಲ್ಲ. ನಿಮ್ಮ ನಿರ್ಧಾರ ಸ್ಪಷ್ಟ ಮಾಡಿ. ಅವರೇ ಗೊಂದಲದಲ್ಲಿ ಇದ್ದಾರೊ‌ ಏನೋ ಒಂದೂ ಗೊತ್ತಾಗುತ್ತಿಲ್ಲ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮತ್ತು ಹಿಂದುತ್ವವನ್ನು ಪ್ರತ್ಯೇಕವಾಗಿ ನೋಡಬೇಕಿಲ್ಲ. ಉತ್ತರ ಕನ್ನಡದಲ್ಲಿ ಕಸ್ತೂರಿ ರಂಗನ್ ವರದಿ ಬಗ್ಗೆ ಆತಂಕ ಬೇಡ. ಕೆಲವರು ಆ ವರದಿ ಇಟ್ಕೊಂಡು ರಾಜಕೀಯ ಮಾಡಿದರು. ಉತ್ತರ ಕನ್ನಡ ಜಿಲ್ಲೆ ತುಂಬಾ ಅಭಿವೃದ್ಧಿ ಆಗಬೇಕಿದೆ. ಇಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರವಾಸೋದ್ಯಮ, ಸ್ಥಳೀಯ ಜನರಿಗೆ ಆರೋಗ್ಯಕ್ಕಾಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಯುವಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ನಿರ್ಮಿಸಿ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ ಎಂದರು.

3 ಸಂಸದರಿಂದ 5 ವರ್ಷದಲ್ಲಿ 55.88 ಕೋಟಿ ಅನುದಾನ: ಬಿಪ್ಯಾಕ್‌ನಿಂದ ವರದಿ

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಪ್ರಶ್ನಿಸಿದಾಗ, ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ ಅವರು ಉತ್ತರಿಸಿ, ಕಾರವಾರದಲ್ಲಿ ಮೆಡಿಕಲ್ ಕಾಲೇಜು, ಸಿರಸಿಯಲ್ಲಿ 250 ಆಸ್ಪತ್ರೆ ಬೆಡ್ ಮಾಡಿದವರು ನಾವು.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮುನ್ನುಡಿ ಬರೆದಿದ್ದು, ಈಗಾಗಲೇ ಜಾಗ ಗುರುತಿಸಲಾಗಿದೆ. ಕಾಂಗ್ರೆಸ್ ಸರ್ಕಾರ‌ ಬಂದ ಮೇಲೆ ಏನೂ ಮಾಡಿಲ್ಲವೆಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!