ಮೋದಿ ಎಷ್ಟು ಗ್ಯಾರಂಟಿ ನೀಡಿದ್ದಾರೆಂಬ ಪಟ್ಟಿ ಬಿಡುಗಡೆಗೊಳಿಸಲಿ: ಸಚಿವ ಸತೀಶ

By Kannadaprabha News  |  First Published Apr 7, 2024, 1:27 PM IST

ಜನಕ್ಕೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡುತ್ತಿದ್ದೇವೆ. ಕಾರಣ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಬಿಜೆಪಿಯವರ ಆರೋಪ ಶುದ್ಧ ಸುಳ್ಳು ಎಂದ ಸಚಿವ ಸತೀಶ ಜಾರಕಿಹೊಳಿ 


ಬೆಳಗಾವಿ(ಏ.07):  ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಟೀಕಿಸು ತಿರುವ ಪ್ರಧಾನಿ ಮೋದಿ, ದೇಶಕ್ಕೆ, ದೇಶದ ಜನತೆಗೆ ನಾನೇ ಗ್ಯಾರಂಟಿ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ಎಷ್ಟು ಗ್ಯಾರಂಟಿ ನೀಡಿದೆ ಎಂಬ ಪಟ್ಟಿ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆಗ್ರಹಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಕ್ಕೆ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡುತ್ತಿದ್ದೇವೆ. ಕಾರಣ ಗ್ಯಾರಂಟಿಗಳಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ಬಿಜೆಪಿಯವರ ಆರೋಪ ಶುದ್ಧ ಸುಳ್ಳು ಎಂದರು.

ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬಗ್ಗೆ ಜನರಲ್ಲಿ ಅಸಮಾಧಾನವಿದೆ. ಅದು ನಮ್ಮ ಗಮನಕ್ಕೂ ಬಂದಿದೆ. ನಾವು ಚುನಾವಣೆ ಬಂದಾಗಷ್ಟೇ ಜನರ ಬಳಿಗೆ ಹೋಗೋದಿಲ್ಲ. ನಿರಂತರವಾಗಿ ಜನರೊಂ ದಿಗೆ ಇರುತ್ತೇವೆ. ವಾರಕ್ಕೊಮ್ಮೆ ಭೇಟಿ ನೀಡಿ ಕಾರ್ಯಕರ್ತರಿಗೆ ಸ್ಪಂದಿಸುತ್ತೇವೆ ಎಂದರು.

Tap to resize

Latest Videos

ಶೆಟ್ಟರ್ ಬಗ್ಗೆ ಹೆಬ್ಬಾಳ್ಕರ್ ಹಗುರ ಮಾತು ಸರಿಯಲ್ಲ: ಮಂಗಲಾ ಅಂಗಡಿ

ಮೊದಲಿಂದಲೂ ನಾಲೈದು ಜನರೊಂದಿಗೆ ಮಾತ್ರ ನಾಮಪತ್ರ ಸಲ್ಲಿಸುತ್ತ ಬಂದಿದ್ದು, ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ವೇಳೆಹಳೆಯರೂಢಿಯನ್ನೇಮುಂದುವರಿಸುತ್ತೇವೆ ಎಂದರು.

ನಾಮಪತ್ರ ಯಾವಾಗ ಸಲ್ಲಿಸಬೇಕೆಂದು ಇನ್ನೂ ನಿರ್ಧರಿಸಿಲ್ಲ. ಜಿಲ್ಲೆಯ ಎಲ್ಲಾ ಮುಖಂಡ ರೊಡನೆ ಚರ್ಚಿಸಿ ದಿನ ತಿಳಿಸುತ್ತೇನೆ ಎಂದ ಅವರು. ರಾಜ್ಯ ಸರ್ಕಾರದ ಗ್ಯಾರಂಟಿಗಳು ಚುನಾವಣೆಯಲ್ಲಿ ಖಂಡಿತ ಬೀರುತ್ತವೆ. ನಮ್ಮ ಪಕ್ಷದ ಅಭಿವೃದ್ಧಿ, ಗ್ಯಾರಂಟ ಯೋಜನೆಗಳು, ಕಳೆದ 30 ವರ್ಷದಲ್ಲಿ ಪಕ್ಷ ಜನಕ್ಕೆ ನೀಡಿದೆ ಎದುರಿಸುತ್ತೇವೆ. ಬೆಳಗಾವಿ ಜಿಲ್ಲೆಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಕೃಷ್ಣಾ ನದಿಗೆ ಹಿಡಕಲ್ ಡ್ಯಾಂ ಮೂಲಕ ಒಂದು ಟಿಎಂಸಿ ನೀರು ಹರಿಸಲು ಚರ್ಚೆ ಮಾಡಿದ್ದೇನೆ. ಕೃಷ್ಣಾ ನದಿಗೆ ನೀರು ಹರಿಸಿದರೆ ಮಾಂಜರಿ, ಕುಡಚಿ, ಅಥಣಿಗೆ ನೀರು ತಲುಪಲಿದ್ದು, ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಸೇವೆ ಆಧರಿಸಿ ಚುನಾವಣೆ
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ರಾಜೇಂದ್ರ ಪಾಟೀಲ್, ರಾಜದೀಪ್ ಕೌಜಲಗಿ, ಪರುಶು ರಾಮಧಗೆ, ಸಿದ್ದಿಕಿ ಅಂಕಲಗಿ, ಮಂಜು ಕಾಂಬಳೆ, ಅಬೀಬ್ ಶಿಲ್ಲೇದಾರ್ ಇದ್ದರು. 

click me!