ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆಯಿಂದ ಅನ್ಯಾಯ: ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published Sep 9, 2024, 4:23 PM IST

ಬಿಜೆಪಿಗೆ ನಾನು ಯಾವುದೇ ನಿಮಿಷದಲ್ಲೂ ಹೋಗಬಹುದು. ಆದರೆ ಒಂದು ಕುಟುಂಬದಿಂದ ಪಕ್ಷ ಹೊರಗೆ ಬರಬೇಕು, ಹೊಂದಾಣಿಕೆ ಮುಕ್ತ ಆಗಬೇಕು, ಸ್ವಜನ ಪಕ್ಷಪಾತ ದೂರ ಆಗಬೇಕು, ನೋವು ಅನುಭವಿಸಿದವರಿಗೆ ಸಮಾಧಾನ ಆಗುವಂತೆ ಶುದ್ದೀಕರಣ ಆಗಬೇಕು. 
 


ವಿಜಯಪುರ (ಸೆ.09): ಬಿಜೆಪಿಗೆ ನಾನು ಯಾವುದೇ ನಿಮಿಷದಲ್ಲೂ ಹೋಗಬಹುದು. ಆದರೆ ಒಂದು ಕುಟುಂಬದಿಂದ ಪಕ್ಷ ಹೊರಗೆ ಬರಬೇಕು, ಹೊಂದಾಣಿಕೆ ಮುಕ್ತ ಆಗಬೇಕು, ಸ್ವಜನ ಪಕ್ಷಪಾತ ದೂರ ಆಗಬೇಕು, ನೋವು ಅನುಭವಿಸಿದವರಿಗೆ ಸಮಾಧಾನ ಆಗುವಂತೆ ಶುದ್ದೀಕರಣ ಆಗಬೇಕು. ಈ ಬಗ್ಗೆ ನನಗೆ ಮಾತನಾಡಿಸಲು ಬಂದವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಕಾಂಗ್ರೆಸ್- ಬಿಜೆಪಿ ಮಧ್ಯೆ ಸಾಕಷ್ಟು ಹೊಂದಾಣಿಕೆ ಇದೆ. 

ಕಾಂಗ್ರೆಸ್ ಭಿಕ್ಷೆಯಿಂದ ನೀನು ಗೆದ್ದಿದ್ದೀಯಾ ಎಂದು ಡಿ.ಕೆ.ಶಿವಕುಮಾರ ವಿಜಯೇಂದ್ರನಿಗೆ ನೇರವಾಗಿಯೇ ಆಪಾದನೆ ಮಾಡಿದ್ದಾರೆ. ಇದರ ಅರ್ಥ ಕಾಂಗ್ರೆಸ್ ನಾಯಕರು ಯಡಿಯೂರಪ್ಪನವರ ಕುಟುಂಬದವರು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂಬುದನ್ನು ನಾಚಿಕೆ ಇಲ್ಲದೆ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಹೊಂದಾಣಿಕೆ ರಾಜಕಾರಣದಿಂದ ರಾಜ್ಯದಲ್ಲಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಬಿಜೆಪಿಯಲ್ಲಿ ನಾನು ಕಂಡಿರಲಿಲ್ಲ. ಬಿಜೆಪಿ ಶುದ್ದೀಕರಣ ಆಗುವವರೆಗೆ ನನ್ನ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ.

Tap to resize

Latest Videos

ಬಿಜೆಪಿಯಲ್ಲಿ ಶುದ್ದೀಕರಣ ಆಗುವವರೆಗೂ ನನ್ನ ಹೋರಾಟ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಮುಡಾ ಹಗರಣ ಸಿಎಂ ಪತ್ನಿಗೆ ತೊಂದರೆ ಬೇಡ: ಸಿದ್ಧರಾಮಯ್ಯನವರ ಶ್ರೀಮತಿ ಗೌರಮ್ಮ ಇದ್ದಂಗೆ. ಯಾವುದೇ ತಂಟೆ ತಕಾರರಿಗೆ ಬರದೆ ಮನೆಯಲ್ಲಿರುವ ಹೆಣ್ಣುಮಗಳು. ಆ ತಾಯಿಗೆ ಯಾವುದೇ ತೊಂದರೆ ಆಗದಂತಗೆ ನೋಡಿಕೊಳ್ಳಪ್ಪ ಎಂದು ನಾನು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಸಿದ್ಧರಾಮಯ್ಯನವರು ಎಲ್ಲಿ ಹೇಳಿರುತ್ತಾರೋ ಅಲ್ಲಿ ಸಹಿ ಮಾಡಿರುತ್ತಾರೆ, ಆ ಯಮ್ಮಾ ಏನು ಗೊತ್ತಿಲ್ಲದೆ ಸಹಿ ಮಾಡಿರುತ್ತಾರೆ. ಆಕೆಗೆ ಮುಕ್ತಿ ಸಿಗಬೇಕು, ಇದರಲ್ಲಿ ಯಾವುದೇ ಅನ್ಯಾಯ ಆಗಬಾರದು ಎಂದು ನನ್ನ ಪ್ರಾರ್ಥನೆ ಎಂದರು.

ಕಾಂಗ್ರೆಸ್‌ಗೆ ಮೈಮೇಲೆ ಜ್ಞಾನ ಇಲ್ಲ: ರಾಜ್ಯಪಾಲರು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಸಚಿವ ಸಂಪುಟ ಹೇಳುತ್ತಿದೆ. ಮುಡಾ ಹಗರಣದಲ್ಲಿ ಸಿದ್ರಾಮಯ್ಯನವರ ಬಗ್ಗೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಆದರೆ ಬಿಜೆಪಿಯ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಸೇರಿದಂತೆ ನಾಲ್ವರ ಮೇಲೆ ಯಾಕೆ ಪ್ರಶಿಕೂಷನ್ ಗೆ ಆದೇಶ ಕೊಟ್ಟಿಲ್ಲ ಎಂದು ಎಲ್ಲರೂ ರಾಜಭವನಕ್ಕೆ ಹೋದರು. ಆಗ ರಾಜ್ಯಪಾಲರು ಒಂದೂ ಕೇಸ್ ನನ್ನ ಬಳಿ ಇಲ್ಲ ಎಂದರು. ಹೋಗುವಾಗ ಇವರಿಗೆ ಮೈಮೇಲೆ ಜ್ಞಾನ ಇರಲಿಲ್ಲವಾ? ಸಿಎಂ, ಡಿಸಿಎಂ, ಸಚಿವರಾಗೋದಕ್ಕೆ ಇವರು ಯಾವ ಮಟ್ಟಿಗೆ ಯೋಗ್ಯರು? ಕೇಸ್ ಇಲ್ಲದೇ ಇರುವವರ ಮೇಲೆ ಪ್ರಾಸಿಕ್ಯೂಷನ್‌ಗೆ ಹಾಕಿ ಎಂದು ಒತ್ತಾಯ ಮಾಡುತ್ತಾರೆ. ಇವರು ಮೈಮೇಲೆ ಜ್ಞಾನವೇ ಇಲ್ಲದೆ ಹೋಗಿದ್ದರು. ರಾಜ್ಯಪಾಲರು ಇವರಿಗೆ ಮುಖಕ್ಕೆ ಮಂಗಳಾರತಿ ಎತ್ತಿ ಕಳಿಸಿದರು ಎಂದು ವಾಗ್ದಾಳಿ ನಡೆಸಿದರು.

ನಮ್ಮವರೇ ಮೋಸ ಮಾಡಿದರು: ನನ್ನ ಮೇಲೆ ಆರೋಪ ಬಂದಾಗ ನಾನು ರಾಜೀನಾಮೆ ನೀಡಿದೆ, ಬಳಿಕ ನನಗೆ ಕ್ಲೀನ್ ಚೀಟ್ ಸಿಕ್ಕಿತು. ಆಗ ನಮ್ಮ ಪಕ್ಷದ ನಾಯಕರೇ ನನಗೆ ಮೋಸ ಮಾಡಿದರು. ಯಡಿಯೂರಪ್ಪನವರು, ಬಸವರಾಜ ಬೊಮ್ಮಾಯಿ ಇನ್ನೊಂದು ವಾರದಲ್ಲಿ ಈಶ್ವರಪ್ಪನವರನ್ನು ಮತ್ತೆ ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಮಂತ್ರಿಮಂಡಲದಲ್ಲಿ 6 ಸೀಟ್ ಖಾಲಿ ಇದ್ದರೂ ನನಗೆ ಮಂತ್ರಿಸ್ಥಾನ ಕೊಡಲಿಲ್ಲ ಎಂದು ಬೇಸರಿಸಿದರು.

ಸಿದ್ದರಾಮಯ್ಯ ಗೌರವ ಇದೇನಾ?: ಸಿಎಂ ಸಿದ್ಧರಾಮಯ್ಯನವರು ಕೋರ್ಟ್ ತೀರ್ಪಿಗೆ ಕೊಡುವ ಗೌರವ ಇದೇನಾ?. ಕೋರ್ಟ್ ನಮ್ಮ ಪರವಾಗಿದೆ, ನಮಗೆ ನ್ಯಾಯ ಸಿಕ್ಕೇ ಸಿಗುತ್ತೆ ಎಂದು ಮೊದಲು ಹೇಳುತ್ತಿದ್ದವರು, ಇದೀಗ ಏನೇ ಆದೇಶ ಬಂದರೂ ರಾಜೀನಾಮೆ ಕೊಡಲ್ಲ ಎನ್ನುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ಇದನ್ನು ನಾನು ಉಗ್ರವಾಗಿ ಖಂಡನೆ ಮಾಡುತ್ತೇನೆ ಎಂದರು.

ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡುವವರಿಂದಲೇ ಖುರ್ಚಿ ಮೇಲೆ ಕಣ್ಣು: ಕೆ.ಎಸ್‌.ಈಶ್ವರಪ್ಪ

ಯತ್ನಾಳ ಧರಣಿ ಕೂತರು: ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ಸಕ್ಕರೆ ಕಾರ್ಖಾನೆ ಬಗ್ಗೆ ಧರಣಿ ಕೂತರು. ಆ ವೇಳೆ ಸಿಎಂ ಅವರು ಅನ್ಯಾಯ ಆಗದಂತೆ ಬೇಗನೇ ಎನ್‌ಓಸಿ ಕೊಡಿಸುತ್ತೇನೆ ಎಂದರು, ಇಂದಿನ ವರೆಗೂ ಕೊಟ್ಟಿಲ್ಲ. ಮತ್ತೆ ಅವರು ಧರಣಿ ಕೂರಬೇಕಾ? ಮುಖ್ಯಮಂತ್ರಿಗಳು ಈ ಕಡೆ ಗಮನ ಕೊಡಬೇಕು, ಈ ರೀತಿ ಸುಳ್ಳು ಹೇಳಬಾರದು ಎಂದು ಹೇಳಿದರು.

click me!