ಬಿಜೆಪಿಯವರು ಪಶ್ಚಾತಾಪ ಪಡುತ್ತಿದ್ದು, ನಾವೆಲ್ಲ ಸಿಎಂ ಸಿದ್ದರಾಮಯ್ಯ ಜೊತೆ ಇದ್ದೇವೆ: ಸಚಿವ ಎಂ.ಬಿ.ಪಾಟೀಲ್

By Kannadaprabha News  |  First Published Sep 9, 2024, 4:14 PM IST

ಬಿಜೆಪಿಯವರು ಪಶ್ಚಾತಾಪ ಪಡುತ್ತಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ನಾವೆಲ್ಲ ಸಿದ್ದರಾಮಯ್ಯರ ಜೊತೆಗಿದ್ದೇವೆ. ಈ ಕುರಿತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. 
 


ವಿಜಯಪುರ (ಸೆ.09): ಬಿಜೆಪಿಯವರು ಪಶ್ಚಾತಾಪ ಪಡುತ್ತಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ನಾವೆಲ್ಲ ಸಿದ್ದರಾಮಯ್ಯರ ಜೊತೆಗಿದ್ದೇವೆ. ಈ ಕುರಿತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಸಿಎಂ ಕುರ್ಚಿ ಖಾಲಿಯಾಗುತ್ತದೆ ಎಂಬ ವಿಚಾರಕ್ಕೆ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸಿಎಂ ಆಗಿಯೇ ಮುಂದುವರೆಯುತ್ತಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರ ಕುರಿತು ಯಾವುದೇ ಹುರಳಿಲ್ಲ. ಪಾತ್ರವಿಲ್ಲ. 

ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರಿಗೆ ಹಾಗಾಗುತ್ತೆ ಹೀಗಾಗುತ್ತೆ ಎಂದು ಯಾರಾದ್ರೂ ತಿಳಿದುಕೊಂಡಿದ್ದರೆ ಅದು ಆಗಲ್ಲ. ನ್ಯಾಯಾಲಯದಲ್ಲಿಯೂ ಸಿದ್ದರಾಮಯ್ಯ ಅವರ ಪರವಾಗಿ ತೀರ್ಪು ಬರುತ್ತದೆ. ನ್ಯಾಯ ಸಿಗುತ್ತದೆ ಎಂದು ಹೇಳಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ರಾಹುಲ್ ಗಾಂಧಿಯವರು, ಸಚಿವರು, ಶಾಸಕರು, ಕಾರ್ಯಕರ್ತರು, ಪದಾಧಿಕಾರಿಗಳು ಎಲ್ಲರೂ ಸಿದ್ದರಾಮಯ್ಯ ಅವರ ಪರವಾಗಿದ್ದೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದು ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ಸಿಎಂ ವಿಚಾರ ಅಪ್ರಸ್ತುತ: ನಾನು ಡಿಕೆಶಿ ಸಿನಿಯರ್ ಇದ್ದೇವೆ. ಸತೀಶ ಜಾರಕಿಹೊಳಿಗಿಂತ ನಾನು ಸಿನಿಯರ್. ಪರಮೇಶ್ವರ ಅವರು ನಾವೆಲ್ಲ ಒಂದೇ ಹಂತದಲ್ಲಿದ್ದೇವೆ. ನಮಗಿಂತ ಮೇಲಿನ‌ ಹಂತದ ಸಿನಿಯರ್ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಸಿಎಂ ಮಾಡುವ ವೇಳೆ ಸಿನಿಯರ್ ಜೂನಿಯಾರಿಟಿ ಪ್ರಶ್ನೆ ಬರಲ್ಲ. ಈಗ ಸಿಎಂ ಕುರ್ಚಿ ಖಾಲಿ ಇಲ್ಲ. ಶರದ್ ಪವಾರ ಉದಾಹರಣೆ ಇದೆ. ನಮ್ಮಲ್ಲೇ ಗುಂಡೂರಾವ್, ದೇವರಾಜ ಅರಸ್ ಉದಾಹರಣೆ ಇದೆ. ನಮ್ಮಲ್ಲಿ‌ ಹಾಗೂ ಬೇರೆ ಪಕ್ಷಗಳ ನೂರಾರು ಜನ‌ 28 ವರ್ಷ ಆದವರು ಸಿಎಂ ಆಗಿದ್ದಾರೆ. ಸತೀಶ ಜಾರಕಿಹೋಳಿ ಇರಲಿ, ಎಂ.ಬಿ.ಪಾಟೀಲ್ ಇರಲಿ, ಯಾರೇ ಇರಲಿ ಸಿಎಂ ಕುರ್ಚಿ ಖಾಲಿ ಇಲ್ಲ ಎಂದರು.

ನನಗೂ ಸಿಎಂ ಆಗುವ ಆಸೆ ಇದೆ, ಆದರೆ ಈಗಲ್ಲ: ಸಚಿವ ಎಂ.ಬಿ.ಪಾಟೀಲ್

ಮುಂದೆ ನಾನು ಸಿಎಂ ಆಗುತ್ತೇನೆ: ನಾನು ಕಾಂಗ್ರೆಸ್‌ನಿಂದ ಮುಂದೆ ಒಂದು‌ ದಿನ ಸಿಎಂ ಆಗುತ್ತೇನೆ. ಅಸೆ ಇದೆ, ದುರಾಸೆ‌ ಇಲ್ಲ. ನಾನು ಸಿಎಂ ಆದರೆ ಜನರಿಗೆ ಒಳ್ಳೆಯದನ್ನು ಮಾಡುವೆ. ನೀರಾವರಿ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ. ನಾನು ಸಿಎಂ ಆದರೆ ವಿಜಯಪುರ ಜಿಲ್ಲೆಯ ಜನರಿಗೆ, ರಾಜ್ಯದ ಜನರಿಗೆ ಖುಷಿಯಾಗುತ್ತದೆ. ಒಳ್ಳೆಯ ಕೆಲಸ ಮಾಡುವೆ. ಈಗ ಸಿಎಂ ಸಿದ್ದರಾಮಯ್ಯ ಅವರ ಅಥವಾ ಬೇರೆಯವರ ಸ್ಥಾನದ ಮೇಲೆ ಕೈ ಹಾಕಲ್ಲ. ಸ್ವಯಂ ಘೋಷಿತವಾಗಿ ಸಿಎಂ ಆಗಲು ಬರಲ್ಲ. ಸಿಎಂ ಮಾಡುವ ತೀರ್ಮಾನ ಪಕ್ಷದ ಹೈಕಮಾಂಡ್ ಹಾಗೂ ಶಾಸಕರು‌ ತೀರ್ಮಾನ ಮಾಡುತ್ತಾರೆ. ಯಾರನ್ನು ತೆಗೆದು ಹಾಕೋ ಕೆಲಸಕ್ಕೆ ನಾನು ಕೈ ಹಾಕಲ್ಲ ಎಂದರು. ನಾವು ಕಾಂಗ್ರೆಸ್‌ನಲ್ಲಿ ಒಗ್ಗಟ್ಟಾಗಿರಬೇಕಿದೆ. ಸಿದ್ದರಾಮಯ್ಯರನ್ನು ಬೆಂಬಲಿಸಬೇಕಿದೆ. ಅವರಿಗೆ ನೈತಿಕ ಸ್ಥೈರ್ಯ ತುಂಬಬೇಕಿದೆ. ಸಿದ್ದರಾಮಯ್ಯ ಬಹಳ ಬಲಿಷ್ಠರಾಗಿದ್ದಾರೆ ಎಂದರು.

click me!