ಕಂಗನಾ ರಣಾವತ್, ಹೇಮಾ ಮಾಲಿನಿ ಬಳಿಕ ಇದೀಗ ಇಂಡಿಯಾ ಒಕ್ಕೂಟದ ಟಿಎಂಸಿ ನಾಯಕನ ಕೀಳು ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಬಿಜೆಪಿ ನಾಯಕ ಲೊಕೆಟ್ ಚಟರ್ಜಿ ವಿರುದ್ದ ನಾಲಗೆ ಹರಿಬಿಟ್ಟ ಟಿಎಂಸಿ ನಾಯಕ ಆಸಿತ್ ಮುಜುಮ್ದಾರ್, ದೋ ನಂಬರ್ ಮಾಲ್ ಎಂದಿದ್ದಾರೆ.
ಕೋಲ್ಕತಾ(ಏ.04) ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಒಕ್ಕೂಟದ ನಾಯಕರ ಹೇಳಿಕೆಗೆ ಅವರಿಗೆ ಮುಳುವಾಗುತ್ತಿದೆ. ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್, ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಕೀಳು ಮಟ್ಟದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಇಂಡಿಯಾ ಮೈತ್ರಿ ಒಕ್ಕೂಟದ ಪ್ರಮಖ ಪಕ್ಷ ಟಿಎಂಸಿಯ ನಾಯಕ ಕೀಳು ಮಟ್ಟದ ಹೇಳಿಕೆ ನೀಡಿದ್ದರೆ. ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ಲೊಕೆಟ್ ಚಟರ್ಜಿ ವಿರುದ್ಧ ಟಿಎಂಸಿ ಶಾಸಕ ಆಸಿತ್ ಮಜುಮ್ದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಲೊಕೆಟ್ ಚಟರ್ಜಿ ದೋ ನಂಬರ್ ಮಾಲ್ (2ನೇ ನಂಬರ್ ಸರಕು)ಎಂದು ಆಸಿತ್ ಮದುಮ್ದಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಸಿತ್ ಮಜುಮ್ದಾರ್, ಸಂಸದೆ ಲೊಕೆಟ್ ಚಟರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಲೊಕೆಟ್ ಚಟರ್ಜಿ ತಾಳಕ್ಕೆ ತಕ್ಕಂತೆ ಹೇಳಿಕೆ ನೀಡುತ್ತಾರೆ. ಲೊಕೆಟ್ ಚಟರ್ಜಿ ನಕಲಿ ಅಥವಾ ಡಬಲ್ ಸ್ಟಾಂಡರ್ಡ್ ನಾಯಕಿ ಎಂದು ಆಸಿತ್ ಹೇಳಿದ್ದಾರೆ. ಇದೇ ವೇಳೆ ಮಾತು ಮುಂದುವರಿಸಿ ಆಕೆ ದೋ ನಂಬರ್ ಮಾಲ್ ಎಂದಿದ್ದಾರೆ.
ಪ್ರತಿ ಹೆಣ್ಣು ತನ್ನ ಘನತೆಗೆ ಅರ್ಹ, ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಪೋಸ್ಟ್‌ಗೆ ಕಂಗನಾ ತಿರುಗೇಟು!
ಸಂದೇಶಖಾಲಿ ಹಿಂದೂ ಮಹಿಳೆಯರ ಅತ್ಯಾಚಾರ ಪ್ರಕರಣ ವಿರುದ್ಧ ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ್ದ ಲೊಕೆಟ್ ಚಟರ್ಜಿ ವಿರುದ್ಧ ಇದೀಗ ಕೀಳು ಮಟ್ಟದ ಹೇಳಿಕೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಸಂದೇಶಖಾಲಿ ಅತ್ಯಾಚಾರ ಪ್ರಕರಣದಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಇದೀಗ ಕೀಳು ಹೇಳಿಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.