ರಾಹುಲ್ ಗಾಂಧಿ ಅವರು ಏ.16ರಂದು ಕೋಲಾರದ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಲಿದ್ದು, ಅದೇ ದಿನ ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿ ಉದ್ಘಾಟನೆ ಆಗಲಿದೆ.
ಬೆಂಗಳೂರು (ಏ.08): ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಏ.16ರಂದು ಕೋಲಾರದ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಲಿದ್ದು, ಅದೇ ದಿನ ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿ ಉದ್ಘಾಟನೆ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಅವರು ಕೋಲಾರದಲ್ಲಿ ಸಮಾವೇಶ ಮಾಡಲು ತಿರ್ಮಾನಿಸಿದ್ದರು. ಆದ್ದರಿಂದ ಎಪ್ರಿಲ್ 16ರಂದು ಕೋಲಾರದಲ್ಲಿ ಸಮಾವೇಶ ಮಾಡಲು ನಿರ್ಧರಿಸಲಾಗಿದೆ. ಅದೇ ದಿನ ಕೆಪಿಸಿಸಿಯ ಇಂದಿರಾಗಾಂಧಿ ಭವನ ಸಹ ಉದ್ಘಾಟನೆ ಆಗಲಿದೆ. ಇನ್ನು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸರ್ಕಾರದ ಒಳಗೆ ಮತ್ತಿ ಸಂಘಟನೆಯ ಹಂತದಲ್ಲಿ ಸ್ಥಾನ ಮಾನ ನೀಡಲಾಗುವುದು. ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಯವರಿಗೂ ಗೊತ್ತಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಿದ್ಧ: ಡಿಕೆಶಿ
ಅಸಮಾಧಾನಿತರಿಗೆ ನಿಗಮ, ಮಂಡಳಿ ಸ್ಥಾನ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಆಕಾಂಕ್ಷಿಗಳ ಆಕ್ರೋಶದ ವಿಚಾರವಾಗಿ ಮಾತನಾಡಿ ಡಿ.ಕೆ. ಶಿವಕುಮಾರ್, ಎಲ್ಲರೂ ತಾಳ್ಮೆಯಿಂದ ಇರಬೇಕು ಅಂತ ಹೇಳಿದೀವಿ. ಆಕ್ರೋಶ, ಸಿಟ್ಟು ಸಹಜವಾಗಿರುತ್ತದೆ. ಆದರೆ ಟಿಕೆಟ್ ಸಿಗದವರಿಗೆ ನಮ್ಮ ಸರ್ಕಾರ ಸೂಕ್ತ ಹುದ್ದೆ ಕೊಡುತ್ತದೆ. ರಾಜ್ಯದಲ್ಲಿ ಹಲವು ನಿಗಮ ಮಂಡಳಿಗಳಿವೆ. ಎಲ್ಲ ಟಿಕೆಟ್ ಆಕಾಂಕ್ಷಿಗಳು ಕೂಟ ತಾಳ್ಮೆಯಿಂದ ಪಕ್ಷದ ಗೆಲುವಿಕೆ ಕೆಲಸ ಮಾಡಿದಲ್ಲಿ ಹುದ್ದೆ ಸಿಗುತ್ತದೆ ಎಂದು ರಾಜ್ಯದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಆಕಾಂಕ್ಷಿಗಳಿಗೆ ಭರವಸೆ ನೀಡಿದರು.
ನಂದಿನಿ ಉಳಿಸುವುದು ನಮ್ಮ ಬದ್ಧತೆ: ರಾಜ್ಯದಲ್ಲಿ ಹಲವು ವರ್ಷಗಳಿಂದ ಬೆಳೆದು ಬಂದಿರುವ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ನಮ್ಮವಳು. ನಂದಿನಿ ಅಂದರೆ ರೈತರದ್ದು. ನಮ್ಮ ನಂದಿನಿಯನ್ನು ನಾವು ಬೆಳೆಸಬೇಕು, ರೈತರಿಗೆ ಸಹಕಾರ ಕೊಡಬೇಕು. ಅದನ್ನು ಉಳಿಸಿಕೊಳ್ಳಬೇಕಾಗಿದೆ. ಗುಜರಾತ್ ರೈತರ ಬಗ್ಗೆಯೂ ನಮಗೆ ಗೌರವ ಇದೆ. ಆದರೆ ನಮ್ಮ ರೈತರನ್ನು ಉಳಿಸಿಕೊಳ್ಳಲು ಮೊದಲ ಆಧ್ಯತೆ ನೀಡಬೇಕಾಗಿದ್ದು, ನಮ್ಮ ನಂದಿನಿಯನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಬದ್ಧರಾಗಿರಬೇಕು. ನಮ್ಮ ಪಕ್ಷದ ಬದ್ಧತೆಯೂ ಇದೇ ಆಗಿದೆ ಎಂದು ಕೆಪಿಸಿಸಿ ಆಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಬಿಜೆಪಿ ಒತ್ತಡಕ್ಕೆ ಮಣಿದು ಸದಸ್ಯತ್ವ ರದ್ದು: ದೇಶದಲ್ಲಿ ರಾಹುಲ್ ಗಾಂಧಿ ಅವರು ಮಾತನಾಡಿದ್ದ ಬಗ್ಗೆ ಕೋರ್ಟ್‌ನಿಂದ ತೀರ್ಮಾನ ಆಗಿದೆ. ನಂತರ ಕೇಂದ್ರದಲ್ಲಿ ಲೋಕಸಭಾ ಸದಸ್ಯರಾಗಿದ್ದರೂ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯ ಸ್ಥಾನವನ್ನು ಅನರ್ಹತೆ ಮಾಡಲಾಗಿದೆ. ಆದರೆ, ಇಷ್ಟು ಬೇಗ ತೀರ್ಪು ಆಗಿರೋದು ನನಗೆ ಗೊತ್ತಿಲ್ಲ. ಇಲ್ಲಿ ಬಿಜೆಪಿ ನಾಯಕರ ಒತ್ತಡದ ಕಾರಣದಿಂದಲೇ ಲೋಕಸಭಾ ಸ್ಪೀಕರ್ ಅವರು ಈ ತಿರ್ಮಾನ ಮಾಡಿದ್ದಾರೆ ಎಂದು ಹೇಳಿದರು.
ಬಿಜೆಪಿ ಸೇರಲು ಮುಂದಾಗಿದ್ದ ಹೆಚ್ ಎಂ ರೇವಣ್ಣ- ಡಿಕೆಶಿ ಭೇಟಿ, ಕಾಂಗ್ರೆಸ್ ಟಿಕೆಟ್ ನೀಡುವ ಭರವಸೆ
ನೌಕಕರಿಗೂ ಬಿಜೆಪಿ ಹೋಗಬೇಕೆಂಬ ಆಸೆ: ಇನ್ನು ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ತೊಲಿಸುವುದಕ್ಕೆ ರಾಜ್ಯದ ಜನತೆ ಒಗ್ಗೂಡಿದ್ದಾರೆ. ರಾಜ್ಯ ಸರ್ಕಾರಿ ನೌಕರರಾದ ಭಾರತೀಯ ನಾಗರೀಕ ಸೇವೆ (ಐಎಎಸ್) ನಿಂದ ಡಿ ದರ್ಜೆಯ ನೌಕರರವರೆಗೂ ಈ ಬಿಜೆಪಿ ಸರ್ಕಾರ ಹೋಗಬೇಕು ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.